ಹೊಸನಗರ ಕೊಡಚಾದ್ರಿ ಕಾಲೇಜು ಮುಂದೆ ಚಲಿಸುತ್ತಿದ್ದ ಬೈಕ್​ಗಳ ಮೇಲೆ ಉರುಳಿದ ಮರ, ಮೂವರಿಗೆ ಗಾಯ

170521 tree fall near kodachadri college hosanagara 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 17 MAY 2021 ಚಲಿಸುತ್ತಿದ್ದ ಬೈಕ್‍ಗಳ ಮೇಲೆ ಮರ ಉರುಳಿ ಬಿದ್ದಿದ್ದು ಮೂವರಿಗೆ ಗಾಯವಾಗಿದೆ. ಹೊಸನಗರದ ಕೊಡಚಾದ್ರಿ ಕಾಲೇಜು ಬಳಿ ಘಟನೆ ಸಂಭವಿಸಿದೆ. ಭಾರಿ ಗಾಳಿ, ಮಳೆಗೆ ಮರ ಉರುಳಿ ಬಿದ್ದಿದೆ. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೈಕ್‍ಗಳ ಮೇಲೆ ಮರ ಬಿದ್ದಿದೆ. ಬೈಕ್ ಸವಾರ ಮಾವಿನಕೊಪ್ಪ ಬಡಾವಣೆ ಸಾಧಿಕ್ ಎಂಬಾತ ಗಂಭೀರ ಗಾಯಗೊಂಡಿದ್ದಾನೆ. ಮತ್ತೊಬ್ಬ ಬೈಕ್ ಪ್ರತೀಕ್, ಪಾದಚಾರಿ ಋತ್ವಿಕ್ ಎಂಬುವವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ … Read more

ಶಿವಮೊಗ್ಗಕ್ಕೆ ಕೋವಿಡ್ ಸ್ಯಾಂಪಲ್​​ಗ​ಳನ್ನು ತರುತ್ತಿದ್ದ ಕಾರು ಅಪಘಾತ, ನಾಲ್ವರಿಗೆ ಸಣ್ಣಪುಟ್ಟ ಗಾಯ

ಶಿವಮೊಗ್ಗ ಲೈವ್.ಕಾಂ | HOSANAGARA NEWS | 15 MAY 2021 ಕೋವಿಡ್ ಸ್ಯಾಂಪಲ್‍ಗಳನ್ನು ಶಿವಮೊಗ್ಗದ ಲ್ಯಾಬ್‍ಗೆ ನೀಡಲು ತರುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ತಾಲೂಕು ವೈದ್ಯಾಧಿಕಾರಿ ಸೇರಿ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದೆ. ಕಾರು ಹೊಸನಗರದಿಂದ ಶಿವಮೊಗಕ್ಕೆ ಬರುತ್ತಿತ್ತು. ಗವಟೂರು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ, ಪಕ್ಕದ ಚರಂಡಿಗೆ ಕಾರು ಇಳಿದಿದೆ. ಕಾರಿನಲ್ಲಿ ಹೊಸನಗರ ತಾಲೂಕು ವೈದ್ಯಾಧಿಕಾರಿ ಡಾ.ಸುರೇಶ್ ಸೇರಿ ನಾಲ್ವರಿದ್ದರು. ಸಣ್ಣಪುಟ್ಟ ಗಾಯವಾಗಿದ್ದು, ರಿಪ್ಪನ್‍ಪೇಟೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು. ಶಿವಮೊಗ್ಗ ಲೈವ್‍ಗೆ ಸುದ್ದಿ … Read more

ತೋಟಕ್ಕೆ ಹೋಗಿದ್ದವರು ಹಿಂತಿರುಗಲೇ ಇಲ್ಲ, ಹುಡುಕಿಕೊಂಡು ಹೋದ ಕುಟುಂಬದವರಿಗೆ ಆಘಾತ

ಶಿವಮೊಗ್ಗ ಲೈವ್.ಕಾಂ | HOSANAGARA NEWS | 14 MAY 2021 ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಹೊಸನಗರ ತಾಲೂಕು ಹುಂಚದ ಹೊಂಡ್ಲಗದ್ದೆ ಸಮೀಪದ ಹಾದಿಗದ್ದೆಯ ರೈತ ಉಮೇಶ್ (47) ಸಿಡಿಲಿಗೆ ಮೃತಪಟ್ಟ ದುರ್ದೈವಿ. ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಉಮೇಶ್ ಮೃತಪಟ್ಟಿದ್ದಾರೆ. ಬಹಳ ಹೊತ್ತು ಮನೆಗೆ ಬಾರದಿದ್ದರಿಂದ ಕುಟುಂಬದವರು ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ … Read more

ಮಾಸ್ಕ್ ಹಾಕದೆ ಓಡಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಬಂಧನ

050521 Ripponpete Krishnappa Arrest 1

ಶಿವಮೊಗ್ಗ ಲೈವ್.ಕಾಂ | RIPPONPETE NEWS | 5 MAY 2021 ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಅವರನ್ನು ಬಂಧಿಸಲಾಗಿದೆ. ರಿಪ್ಪನ್‍ಪೇಟೆಯ ವಿನಾಯಕ ಸರ್ಕಲ್‍ನಲ್ಲಿ ಟಿ.ಆರ್.ಕೃಷ್ಣಪ್ಪ ಅವರನ್ನು ಬಂಧಿಸಲಾಯಿತು. ಈ ವೇಳೆ ತಲೆ ಕೆಳಗಾಗಿ ನಿಂತು ಕೃಷ್ಣಪ್ಪ ಅವರು ಪ್ರತಿಭಟನೆ ನಡೆಸಿದರು. ಸಾಮಾಜಿಕ ಕಾರ್ಯಕರ್ತ ಟಿ.ಆರ್‍.ಕೃಷ್ಣಪ್ಪ ಅವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದರು. ಇದನ್ನು ಗಮನಿಸಿ ಅಧಿಕಾರಿಗಳು ಮಾಸ್ಕ್ ಧರಿಸಿ ಓಡಾಡುವಂತೆ ಸೂಚಿಸಿದ್ದರು. ಆದರೆ ತಮಗೆ ಕರೋನ ಬಂದಿಲ್ಲ. ಬರುವುದಿಲ್ಲ. ಹಾಗಾಗಿ ಮಾಸ್ಕ್ ಧರಿಸುವುದಿಲ್ಲ ಎಂದು … Read more

ಶಿವಮೊಗ್ಗ ಜಿಲ್ಲೆಯ ಯಾವ್ಯಾವ ತಾಲೂಕಿನಲ್ಲಿ ಹೇಗಿತ್ತು ಮೊದಲ ದಿನದ ವೀಕೆಂಡ್ ಕರ್ಫ್ಯೂ? ತಾಲೂಕುವಾರು ರಿಪೋರ್ಟ್

175578819 1373910869636996 6771968949187943387 n 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 APRIL 2021 ವೀಕೆಂಡ್ ಕರ್ಫ್ಯೂಗೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದೆ. ಬಹುತೇಕ ಜನರು ಮನೆಯಿಂದ ಹೊರಬಾರದೆ ಮೊದಲ ದಿನ ಕರ್ಫ್ಯೂಗೆ ಸ್ಪಂದಿಸಿದ್ದಾರೆ. ಯಾವ್ಯಾವ ತಾಲೂಕಿನಲ್ಲಿ ಹೇಗಿತ್ತು ಕರ್ಫ್ಯೂ? ಶಿವಮೊಗ್ಗ ತಾಲೂಕು ಶಿವಮೊಗ್ಗ ನಗರ ಮತ್ತು ಹೊರ ವಲಯದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ, ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ್ದರು. ಗಸ್ತು ಹೆಚ್ಚಿಸಿದ್ದರು. ಅಗತ್ಯ ವಸ್ತುಗಳ ಖರೀದಿಗೆ ಆಗಮಿಸಿದ್ದ ಜನರು ಬಳಿಕ ಮನೆ ಸೇರಿದ್ದರು. ನಡುವೆ ಹೊರ ಬರುತ್ತಿದ್ದವರಿಗೆ ಪೊಲೀಸರು … Read more

ಹೊಂಬುಜದಲ್ಲಿ ಪ್ರವೇಶ ನಿಷೇಧ, ಆನ್ಲೈನ್ನಲ್ಲಿ ಪೂಜೆ ವೀಕ್ಷಣೆಗೆ ಅವಕಾಶ

161020 Hombuja Temple Hosanagara 1

ಶಿವಮೊಗ್ಗ ಲೈವ್.ಕಾಂ | HOMBUJA NEWS | 23 APRIL 2021 ಹೊಂಬುಜ ಜೈನ ಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮೇ 4ರವರೆಗೆ ಮಠಕ್ಕೆ ಭಕ್ತರ ಪ್ರವೇಶ, ದೇವರ ದರ್ಶನವನ್ನು ನಿಷೇಧಿಸಲಾಗಿದೆ. ಮಠದಲ್ಲಿ  ವಸತಿ, ಭೋಜನ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಆನ್‍ಲೈನ್‍ ಮೂಲಕ ಅಭಿಷೇಕ ಮಾಡಿಸುವ ಅವಕಾಶವಿದೆ. ಫೇಸ್‍ಬುಕ್‍ನಲ್ಲಿ ಹೊಂಬುಜ ಪದ್ಮಾವತಿ ಪೇಜ್‍ ಮೂಲಕ ವೀಕ್ಷಿಸಬಹುದಾಗಿದೆ ಎಂದು ಮಠದ ಆಡಳಿತಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494 ವಾಟ್ಸಪ್‍ನಲ್ಲಿ ಸುದ್ದಿಗಾಗಿ … Read more

ರಿಪ್ಪನ್​ಪೇಟೆ ಸುತ್ತಮುತ್ತ ಆಲಿಕಲ್ಲು ಮಳೆ, ಮರ ಬಿದ್ದು ಹೆದ್ದಾರಿ ತಾತ್ಕಾಲಿಕ ಬಂದ್

200421 Rain At Anandapuram 1

ಶಿವಮೊಗ್ಗ ಲೈವ್.ಕಾಂ | RIPPONPETE NEWS | 20 APRIL 2021 ರಿಪ್ಪನ್‍ಪೇಟೆ ಸುತ್ತಮುತ್ತ ಇವತ್ತು ಆಲಿಕಲ್ಲು ಮಳೆಯಾಗಿದೆ. ಜೋರು ಮಳೆ ಮತ್ತು ಗಾಳಿಯ ರಭಸಕ್ಕೆ ವಿವಿಧೆಡೆ ಮನೆ ಮತ್ತು ವಾಹನಗಳಿಗೆ ಹಾನಿಯಾಗಿದೆ. ಇಲ್ಲಿನ ಸಾಗರ ರಸ್ತೆಯ ಪದವಿ ಪೂರ್ವ ಕಾಲೇಜು ಸಮೀಪ ಮರ ಬುಡಮೇಲಾಗಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ಇದರಿಂದ ತೀರ್ಥಹಳ್ಳಿ – ಸಾಗರ ಹೆದ್ದಾರಿ ತಾತ್ಕಾಲಿಕವಾಗಿ ಬಂದ್ ಆಗಿದೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಅಲ್ಲಿಯವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. … Read more

ಕರೋನ ಎರಡನೇ ಅಲೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮೂರನೇ ಬಲಿ

Corona PPE Kit and swab box

ಶಿವಮೊಗ್ಗ ಲೈವ್.ಕಾಂ | RIPPONPETE NEWS | 15 APRIL 2021 ಕರೋನ ಎರಡನೆ ಅಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಚಿಕಿತ್ಸೆ ಫಲಕಾರಿಯಾಗದೆ ಮತ್ತೊಬ್ಬ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ಎರಡನೇ ಅಲೆಗೆ ಮೂರನೆ ಬಲಿಯಾದಂತಾಗಿದೆ. ರಿಪ್ಪನ್‍ಪೇಟೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗವಟೂರಿನ ಜಿ.ಟಿ.ಯೋಗೇಶ್ವರ ಗೌಡ (58) ಸಾವನ್ನಪ್ಪಿದ್ದಾರೆ. ಶ್ವಾಸಕೋಶ ಕಾಯಿಲೆ ಸಂಬಂಧ ಯೋಗೇಶ್ವರ ಗೌಡ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಸೋಂಕು ತಗುಲಿರುವುದು ದೃಢವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಪತ್ನಿ, … Read more

ಹೊಸನಗರದ ವಿವಿಧೆಡೆ ಯುಗಾದಿ ಹಬ್ಬದಂದು ಜೋರು ಮಳೆ

rain in shimoga

ಶಿವಮೊಗ್ಗ ಲೈವ್.ಕಾಂ | HOSANAGARA NEWS | 13 APRIL 2021 ಯುಗಾದಿ ಹಬ್ಬದಂದು ಹೊಸನಗರದಲ್ಲಿ ಜನರಿಗೆ ವರುಣನ ದರ್ಶನವಾಗಿದೆ. ತಾಲೂಕಿನ ವಿವಿಧೆಡೆ ಜೋರು ಮಳೆಯಾಗಿದೆ. ಭಾರಿ ಬಿಸಿಲು, ಧಗೆ, ಶಕೆಯಿಂದ ಹೈರಾಣಾಗಿದ್ದ ಜನರಿಗೆ ಮಳೆ ತುಸು ತಂಪು ನೀಡಿದೆ. ಹೊಸನಗರ ಪಟ್ಟಣ ಸೇರಿದಂತೆ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆಯಾದ ವರದಿಯಾಗಿದೆ. ಮಳೆಯಾಗುತ್ತಿದ್ದಂತೆ ಹಲವು ಕಡೆ ವಿದ್ಯುತ್ ವ್ಯತ್ಯಯವಾಯಿತು. ಸೋಮವಾರ ರಾತ್ರಿ ಗುಡುಗು, ಮಿಂಚು, ಗಾಳಿ ಜೋರಿತ್ತು. ಆದರೆ ಮಳೆಯಾಗಿರಲಿಲ್ಲ. ಹಬ್ಬದ ದಿನ ಮಳೆ ಸುರಿದಿದೆ. ಶಿವಮೊಗ್ಗ … Read more

ಹೊಸನಗರ ಪೊಲೀಸರ ಭರ್ಜರಿ ಬೇಟೆ, ಗಾಂಜಾಗಾಗಿ ಕಾರು ಶೋಧಿಸುತ್ತಿದ್ದ ಖಾಕಿ ಪಡೆಗೆ ಕಾದಿತ್ತು ಶಾಕ್

Hosanagara Police Station 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 7 APRIL 2021 ಹೊಸನಗರ ಠಾಣೆ ಪೊಲೀಸರು ದೊಡ್ಡ ಬೇಟೆಯಾಡಿದ್ದಾರೆ. ಕಾರಿನಲ್ಲಿದ್ದ ಲಕ್ಷಾಂತರ ಮೌಲ್ಯದ ಗಾಂಜಾ, ನಾಲ್ಕು ಬಂದೂಕು, ಜೀವಂತ ಗುಂಡುಗಳು, ಮೊಬೈಲ್ ಮತ್ತು ನಗದು ವಶಕ್ಕೆ ಪಡೆದಿದ್ದಾರೆ. ಕಳೂರು ನಂದ್ಯಾಲಕೊಪ್ಪ ಗ್ರಾಮದ ಸುನಿಲ್ (45) ಎಂಬುವವರ ಕಾರಿನಲ್ಲಿ ಗಾಂಜಾ ಇರಿಸಿಕೊಂಡಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರಿಗೆ ಲಕ್ಷಾಂತರ ಮೌಲ್ಯದ ಗಾಂಜಾ ಪತ್ತೆಯಾಗಿದೆ. ಕಾರಿನಲ್ಲಿತ್ತು ಕೆಜಿಗಟ್ಟಲೆ ಗಾಂಜಾ ಸುನಿಲ್‍ನ ಕಾರಿನಲ್ಲಿ … Read more