ಮಾರಿಕಾಂಬ ದೇವಸ್ಥಾನ ಸಮಿತಿಗೆ ನೂತನ ನಿರ್ದೇಶಕರ ಆಯ್ಕೆ, ಯಾರೆಲ್ಲ ಆಯ್ಕೆಯಾಗಿದ್ದಾರೆ?

Sagara-Marikamba-temple-new-committee

ಸಾಗರ: ಇಲ್ಲಿನ ಮಾರಿಕಾಂಬಾ ದೇವಸ್ಥಾನದ (Marikamba Temple)ಸಮಿತಿಗೆ ನೂತನ ನಿರ್ದೆಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ 32 ನಿರ್ದೇಶಕರು ಆಯ್ಕೆಯಾಗಿದ್ದಾರೆ. ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದು ಒಟ್ಟು 36 ಜನರು ಆಯ್ಕೆಯಾಗಿದ್ದಾರೆ. ಯಾರೆಲ್ಲ ಆಯ್ಕೆಯಾಗಿದ್ದಾರೆ? ಪುರುಷೋತ್ತಮ, ಸುಂದರ್ ಸಿಂಗ್, ಎಸ್.ಎಲ್.ಮಂಜುನಾಥ್, ಆರ್.ಶ್ರೀನಿವಾಸ್, ಸಂತೋಷ್ ಆರ್.ಶೇಟ್, ವಿ.ಗುರು, ಆನಂದ ಎಂ.ಡಿ., ಎಂ.ನಾಗರಾಜ್, ಚಂದ್ರಕಾಂತ, ದಿನಕರ, ನಾಗೇಂದ್ರ ಕೆ.ಎನ್., ಸುದರ್ಶನ ಭಂಡಾರಿ, ಅಶೋಕ, ಡಿ.ದಿನೇಶ್, ಟಿ.ವಿ.ಪಾಂಡುರಂಗ. ಶ್ರೀನಾಥ್ ಎನ್., ಎನ್.ನಾರಾಯಣ, ಮಾ.ಸ.ನಂಜುಂಡಸ್ವಾಮಿ, ನಿತ್ಯಾನಂದ ಶೆಟ್ಟಿ, ನಾಗೇಂದ್ರ ಕುಮಟಾ, ಕೆ.ಶ್ರೀಧರ, ಪ್ರಶಾಂತ್ ಕುಮಾರ್ ಪಾಟೀಲ್, … Read more

ಸಿಗಂದೂರು ಸೇತುವೆ ಬಳಿ ಅಪಘಾತ, ಥಾರ್‌ ಪಲ್ಟಿ

Thar Car-Mishap-on-Near-sigandur-bridge.

ಸಾಗರ: ಸಿಗಂದೂರು ಸೇತುವೆ (Sigandur Bridge) ಸಮೀಪ ಕಳೆದ ರಾತ್ರಿ ಅಪಘಾತ ಸಂಭವಿಸಿದೆ. ಸೇತುವೆಯ ತಿರುವಿನಲ್ಲಿ ಥಾರ್ ಜೀಪ್ ಪಲ್ಟಿಯಾಗಿದೆ. ಸಿಗಂದೂರು ಕಡೆಯಿಂದ ಸಾಗರ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಥಾರ್‌ ವಾಹನದಲ್ಲಿದ್ದವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸೇತುವೆಯ ಕೊನೆಯಲ್ಲಿರುವ ತಿರುವು ಅವೈಜ್ಞಾನಿವಾಗಿದೆ. ಇದರಿಂದಾಗಿಯೆ ಅಪಘಾತ ಸಂಭವಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಾವಿನಲ್ಲು ಸಾರ್ಥಕತೆ ಮೆರೆದ ಶಿರಾಳಕೊಪ್ಪದ ಯುವಕ, ಬಹು ಅಂಗಾಂಗ ದಾನ, ಆಗಿದ್ದೇನು?

Girish-succmbed-to-a-mishap-at-anvatti-road-in-Shiralakoppa

ಶಿರಾಳಕೊಪ್ಪ: ಎದೆ ಎತ್ತರಕ್ಕೆ ಬೆಳೆದು ನಿಂತಿದ್ದ ಪುತ್ರನನ್ನು ಕಳೆದುಕೊಂಡ ದಂಪತಿ ಆತನ ಸಾವು ಹಾಗೂ ಸಾಲದ ಹೊರೆಯ ನಡುವೆಯೂ ಮಾನವೀಯತೆ (Humanity) ಮೆರೆದಿದ್ದಾರೆ. ಪಟ್ಟಣದ ಆನವಟ್ಟಿ ರಸ್ತೆಯ ರೂಪಾ ಮತ್ತು ಕುಮಾರ್ ದಂಪತಿ ಪುತ್ರ ಗಿರೀಶ್‌ನ (16) ಬಹು ಅಂಗಾಂಗ ದಾನದ ಮೂಲಕ ಸಾರ್ಥಕತೆಗೆ ಸಾಕ್ಷಿ ಯಾಗಿದ್ದಾರೆ. ಇದನ್ನೂ ಓದಿ – ‘ಶಾಸಕರಿಗೆ ಹೇಳಿ ನೀನೆ ತಡೆದಿದ್ದೀಯ’ ಎಂದು ಆರೋಪಿಸಿ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ, ಏನಿದು ಪ್ರಕರಣ? ಇಲ್ಲಿದೆ ಘಟನೆಯ ವಿವರ ಫೆ. 24ರಂದು ಹಾವೇರಿ ಜಿಲ್ಲೆಯ … Read more

‘ಶಾಸಕರಿಗೆ ಹೇಳಿ ನೀನೆ ತಡೆದಿದ್ದೀಯ’ ಎಂದು ಆರೋಪಿಸಿ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ, ಏನಿದು ಪ್ರಕರಣ?

Shikaripura-News-Update

ಶಿಕಾರಿಪುರ: ಸಾರಥಿ ಯೋಜನೆಯಡಿ ಸಾಲ ಮಂಜೂರಾಗದಂತೆ ತಡೆದಿದ್ದೀಯಾ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ (slippers) ನಡೆಸಿರುವ ಘಟನೆ ತಾಲೂಕಿನ ಕಾಗಿನೆಲ್ಲಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ – ಫಾರ್ಚುನರ್‌ ಕಾರಿನಲ್ಲಿ ಬಂದು ಇಂಜಿನಿಯರ್‌ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್‌? ಕಾಗಿನೆಲ್ಲಿ ಗ್ರಾಮದ ನಾಗರಾಜ್.ಎ.ಕೆ ಎಂಬುವವರು ಗ್ರಾಮದ ವಾಲ್ಮೀಕಿ ಕಾಲೋನಿಯಲ್ಲಿ ಮೃತಪಟ್ಟಿದ್ದ ಮಹಿಳೆಯ ಶವದ ದರ್ಶನಕ್ಕೆ ಬಿ.ಆರ್. ಅಂಬೇಡ್ಕರ್ ಸರ್ಕಲ್ ಮೂಲಕ ಹೋಗುತ್ತಿದ್ದರು. ಈ ವೇಳೆ ಅದೇ ವ್ಯಕ್ತಿಯೊಬ್ಬ ನಾಗರಾಜ್ ಅವರನ್ನು ಅಡ್ಡಗಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ನನ್ನ … Read more

ತೀರ್ಥಹಳ್ಳಿಯಲ್ಲಿ ಫಾರ್ಚುನರ್‌ ಕಾರಿನಲ್ಲಿ ಬಂದು ಇಂಜಿನಿಯರ್‌ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್‌?

Thirthahalli Police Station

ತೀರ್ಥಹಳ್ಳಿ: ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕೆರೆಗೆ ನೀರು ತುಂಬಿಸುವ ಕಾಮಗಾರಿ ವೇಳೆ ಇಂಜಿನಿಯರ್‌ಗೆ (engineer) ಬೆದರಿಕೆ ಹಾಕಿ, ಹಣ ವಸೂಲಿ ಮಾಡಿದ ಘಟನೆ ನಡೆದಿದೆ. ಕಾಮಗಾರಿ ತಡೆಯುವುದಾಗಿ ಬೆದರಿಸಿ ₹20,000 ಫೋನ್ ಪೇ ಮೂಲಕ ವರ್ಗಾಯಿಸಿಕೊಳ್ಳಲಾಗಿದೆ. ಬಸವಾನಿ ಗ್ರಾಮದ ಹೊಳೆಕೊಪ್ಪ ಎಂಬಲ್ಲಿ ಕೆರೆಗೆ ನೀರು ತುಂಬಿಸುವ ಪೈಪ್‌ ಲೈನ್‌ ಕಾಮಗಾರಿ ನಡೆಯುತ್ತಿದೆ. ಮಾರ್ಚ್ 4ರಂದು ಕಾಮಗಾರಿ ಸ್ಥಳಕ್ಕೆ ಫಾರ್ಚುನರ್‌ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಂಜಿನಿಯರ್ ಪ್ರವೀಣ್‌ಕುಮಾರ್ ಅವರ … Read more

ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

Fire-at-Scrape-area-on-Tarikere-road-in-Bhadravathi.

ಭದ್ರಾವತಿ: ತರೀಕೆರೆ ರಸ್ತೆ ಬಳಿ ಗುಜರಿಗೆ (scrap yard) ಹಾಕಿದ್ದ ಹಳೆಯ ವಾಹನಗಳನ್ನು ನಿಲ್ಲಿಸುವ ಜಾಗದಲ್ಲಿ ಬೆಂಕಿ ಅವಘಡ ಸಂಭವಿಸಿ ಹಲವು ವಾಹನಗಳು ಸುಟ್ಟು ಕರಕಲಾಗಿವೆ. ಮುಖಂ ಖಾನ್ ಎಂಬುವವರು ಇಲ್ಲಿ ಶೆಡ್ ಹಾಕಿಕೊಂಡು ಗುಜರಿ ವ್ಯಾಪಾರ ನಡೆಸುತ್ತಿದ್ದಾರೆ. ಇದರ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಇವರು ಹಲವು ಹಳೆಯ ವಾಹನಗಳನ್ನು ನಿಲ್ಲಿಸುತ್ತಿದ್ದರು. ಘಟನೆಯಲ್ಲಿ ಗುಜರಿಗೆ ಹಾಕಲಾಗಿದ್ದ 2 ಕಾರ್, 1 ಆಟೊ ರಿಕ್ಷಾ ಹಾಗೂ 20 ಬೈಕ್‌ಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. … Read more

ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

HOSANAGARA-NEWS-GENERAL

ಹೊಸನಗರ: ಇಲ್ಲಿನ ಬ್ರಹ್ಮೇಶ್ವರದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಕೃಷಿಕರೊಬ್ಬರ (farmer) ಮೇಲೆ ಕಲ್ಲು ಬಂಡೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬ್ರಹ್ಮೇಶ್ವರದ ಸತೀಶ್ (35) ಮೃತ ವ್ಯಕ್ತಿ. ಇವರು ಮಸಗಲಿ ಗ್ರಾಮದಲ್ಲಿನ ತಮ್ಮ ಜಮೀನಿನ ಪಕ್ಕದಲ್ಲಿ ತೋಟಕ್ಕೆ ನೀರಿನ ವ್ಯವಸ್ಥೆ ಮಾಡಲು ಗುಂಡಿ ತೆಗೆಯುತ್ತಿದ್ದರು. ಈ ವೇಳೆ ದೊಡ್ಡಗಾತ್ರದ ಕಲ್ಲು ಬಂಡೆ ಜಾರಿ ಬಿದ್ದಿದೆ. ಇದನ್ನೂ ಓದಿ – ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

Nagayakshe-temple-at-hegalatti-in-Thirthahalli-taluk

ಶಿವಮೊಗ್ಗ: ಹೆಗಲತ್ತಿಯ ಶ್ರೀ ಕ್ಷೇತ್ರದಲ್ಲಿ ನಾಗಯಕ್ಷೆ ದೇವಿ, ನವಗ್ರಹ ಹಾಗೂ ನಾಗದೇವರ 12ನೇ ವಾರ್ಷಿಕೋತ್ಸವದ (Anniversary) ಪೂಜಾ ಕಾರ್ಯಕ್ರಮವು ಆರಂಭಗೊಂಡಿದೆ. ಮಾರ್ಚ್ 8ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ದೇವಸ್ಥಾನ ಸೇವಾ ಸಮಿತಿಯ ಪ್ರಮುಖರಾದ ಗಜೇಂದ್ರನಾಥ್ ತಿಳಿಸಿದರು. ಇದನ್ನೂ ಓದಿ – ಶಿವಮೊಗ್ಗದಲ್ಲಿ ಏರ್‌ಟೆಲ್‌ ಮೊಬೈಲ್‌ ಟವರ್‌ನ ಉಪಕರಣ ಕಳವು, ಆಗಿದ್ದೇನು? ಶುಕ್ರವಾರ ಮಹಾಗಣಪತಿ ಪೂಜೆ, ನವಚಂಡಿಕಾ ಹವನ ಹಾಗೂ ಆಶ್ಲೇಷ ಬಲಿ ನಡೆಯಿತು. ಮಾ. 7ರಂದು ಪಲ್ಲಕ್ಕಿಯಲ್ಲಿ ದೇವರ ಆಗಮನ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ನಡೆಯಲಿದೆ … Read more

ರೈಲಿಗೆ ತಲೆ ಕೊಟ್ಟು ಯುವಕ ಸಾವು, ತುರ್ತು ಬ್ರೇಕ್‌ ಹಾಕಿದ ಲೋಕೊ ಪೈಲೆಟ್‌

070923-Railway-Track-with-Electric-lane-in-Shimoga-Sagara-Route.webp

ಸಾಗರ: ನಗರದಲ್ಲಿ ರೈಲಿಗೆ (train) ತಲೆಕೊಟ್ಟು ನಾಗರಾಜ್ ಎಂಬುವರ ಪುತ್ರ ನಿತಿನ್ (26) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಮೊಗ್ಗ ಕಡೆಯಿಂದ ಆಗಮಿಸುತ್ತಿದ್ದ ರೈಲಿಗೆ ತಲೆಕೊಟ್ಟಿದ್ದಾನೆ. ಲೋಕೋ ಪೈಲಟ್ ತುರ್ತಾಗಿ ಬ್ರೇಕ್ ಹಾಕಿದರೂ ನಿತಿನ್ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ರುಂಡ ದೇಹದಿಂದ ಬೇರ್ಪಟ್ಟಿದೆ. ಘಟನೆಯಿಂದ ರೈಲನ್ನು ಕೆಲಕಾಲ ಸ್ಥಳದಲ್ಲೇ ನಿಲ್ಲಿಸಲಾಗಿತ್ತು. ಸಾಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಧಗಧಗ ಹೊತ್ತಿ ಉರಿದ ಮುಂಭಾಗ

ಶಿವಮೊಗ್ಗದಲ್ಲಿ ಏರ್‌ಟೆಲ್‌ ಮೊಬೈಲ್‌ ಟವರ್‌ನ ಉಪಕರಣ ಕಳವು, ಆಗಿದ್ದೇನು?

crime name image

ಶಿವಮೊಗ್ಗ: ಶ್ರೀರಾಂಪುರದ ಗುಡ್ಡದ ಹರಕೆರೆ ಗ್ರಾಮದಲ್ಲಿರುವ ಏರ್‌ಟೆಲ್ ಟವರ್‌ನ (Airtel tower) ಬೆಲೆಬಾಳುವ ಜನರೇಟರ್ ಡಿ.ಜಿ ಆಲ್ಟರ್ ನೇಟರ್ ಅನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಸುಮಾರು ₹70,000 ರೂಪಾಯಿ ಮೌಲ್ಯದ ಈ ಉಪಕರಣ ಕಳುವಾಗಿದೆ ಎಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗದ JNN ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್ಸ್‌, ಯಾವ್ಯಾವ ಸ್ಪರ್ಧೆಗಳಲ್ಲಿ ಯಾರೆಲ್ಲ ಗೆದ್ದಿದ್ದಾರೆ? ದಾವಣಗೆರೆಯ ತೇಜಾ ಟೆಕ್ನಿಕಲ್ ಸರ್ವಿಸಸ್‌ನಲ್ಲಿ ಎಸ್ಟೇಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗ ಕುಮಾರ್ ದೂರು ನೀಡಿದ್ದಾರೆ. … Read more