ಭದ್ರಾವತಿಯಲ್ಲಿ ಪೊಲೀಸರ ದಾಳಿ, ಇಬ್ಬರು ಅರೆಸ್ಟ್, ಶಿವಮೊಗ್ಗ ಜಿಲ್ಲೆಯಲ್ಲಿ ಈ ಪ್ರಕರಣ ಇದೆ ಮೊದಲು

Arrest News Graphics

ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 9 ಜನವರಿ 2022 ಆನ್ ಲೈನ್ ಜೂಜಾಟ ಆಡಿಸುತ್ತಿದ್ದವರ ಮೇಲೆ ಭದ್ರಾವತಿ ಪೊಲೀಸರು ದಾಳಿ ಮಾಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಆನ್ ಲೈನ್ ಜೂಜಾಟವನ್ನು ರಾಜ್ಯ ಸರ್ಕಾರ ನಿಷೇಧ ಮಾಡಿದ್ದು, ಆ ಬಳಿಕ ಜಿಲ್ಲೆಯಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಭದ್ರಾವತಿಯ ಹೊಸ ಸಿದ್ದಾಪುರದ ತಾರೇಶ್ (27),  ಕಡದಕಟ್ಟೆಯ ಚೇತನ್ (25) ಎಂಬುವವರನ್ನು ಬಂಧಿಸಲಾಗಿದೆ. ಏನಿದು ಪ್ರಕರಣ? ಬಂಧಿತರಿಬ್ಬರು ಮೊಬೈಲ್ ಆಪ್ ಮೂಲಕ ಆನ್’ಲೈನ್ ಅಂದರ್ ಬಾಹರ್, … Read more

ತುಂಗಾ ನದಿಯಲ್ಲಿ ಮೀನಿಗೆ ಹಾಕಿದ್ದ ಗಾಳಕ್ಕೆ ಸಿಕ್ಕಿಬಿತ್ತು ಮೊಸಳೆ ಮರಿ

090122 Baby Crocodile found in Tunga River Near Pillangere

ಶಿವಮೊಗ್ಗದ ಲೈವ್.ಕಾಂ | SHIMOGA NEWS | 9 ಜನವರಿ 2022 ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಮೊಸಳೆ ಮರಿ ಸಿಕ್ಕಿಬಿದ್ದಿದೆ. ಇದನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ರಶೀದ್ ಅವರಿಗೆ ಮೊಸಳೆ ಸಿಕ್ಕಿದೆ. ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಾ ನದಿಯಲ್ಲಿ ಗಾಳ ಹಾಕಿ, ಮೀನು ಹಿಡಿಯುತ್ತಿದ್ದರು. ಗಾಳ ಎಳೆದಾಗ ಬಂತು ಮೊಸಳೆ ರಶೀದ್ ಅವರು ಮೀನಿಗಾಗಿ ತುಂಗಾ ನದಿಯಲ್ಲಿ ಹಾಕಿದ್ದ ಗಾಳ ಜಗ್ಗಿದಂತಾಗಿದೆ. … Read more

ಕಾರ್ಗಲ್ ಪಟ್ಟಣ ಸಂಪೂರ್ಣ ಸ್ಥಬ್ಧ, ರಸ್ತೆಗಳು ಖಾಲಿ ಖಾಲಿ

080122 Kargal Weekend Curfew in Sagara

ಶಿವಮೊಗ್ಗದ ಲೈವ್.ಕಾಂ | KARGAL NEWS | 8 ಜನವರಿ 2022 ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕಾರ್ಗಲ್ ಪಟ್ಟಣ ಸಂಪೂರ್ಣ ಸ್ಥಬ್ಧವಾಗಿದೆ. ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಮಾಡಲಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಪಿಎಸ್ಐ ತಿರುಮಲೇಶ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಗಲ್ ಪಟ್ಟಣದಲ್ಲಿ ಗಸ್ತು ಮತ್ತು ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಅನಗತ್ಯವಾಗಿ ರಸ್ತೆಗಿಳಿದವರ ವಾಹನಗಳ ತಪಾಸಣೆ ನಡೆಸಿ, ವಶಕ್ಕೆ ಪಡೆಯಲಾಗುತ್ತಿದೆ. ಕಾರ್ಗಲ್ ಪಟ್ಟಣದಲ್ಲಿ ಎಲ್ಲಾ ಅಂಗಡಿಗಳನ್ನ ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳು, ಔಷಧ ಅಂಗಡಿಗಳು … Read more

ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಲಾರಿ ಪಲ್ಟಿ, ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಮಕ್ಕಳ ಪ್ರಾಣ

Bhadravathi Name Graphics

ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 8 ಜನವರಿ 2022 ಸೈಕಲ್’ನಲ್ಲಿ ಏಕಾಏಕಿ ಅಡ್ಡ ಬಂದ ಮಕ್ಕಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಲಾರಿ ಪಲ್ಟಿಯಾಗಿದೆ. ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಹೊಸ ಸಿದ್ಧಾಪುರ ಗ್ರಾಮದ ಬಳಿ ರಸ್ತೆಯಲ್ಲಿ ಶಾಲಾ ಮಕ್ಕಳು ಸೈಕಲ್’ನಲ್ಲಿ ದಿಢೀರ್ ಮುಖ್ಯ ರಸ್ತೆಗೆ ಬಂದಿದ್ದಾರೆ. ಇವರಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಲಾರಿಯನ್ನು ಚಾಲಕ ಪಕ್ಕಕ್ಕೆ ತಿರುಗಿಸಿದ್ದಾನೆ. ಲಾರಿ ರಸ್ತೆ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ. ಲಾರಿಯು ಶಿವಮೊಗ್ಗದಿಂದ ಮೈಸೂರಿಗೆ ತೆರಳುತ್ತಿತ್ತು … Read more

ವೀಕೆಂಡ್ ಕರ್ಫ್ಯೂ ಬೆನ್ನಿಗೆ ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿಯಿಂದ ಭಕ್ತರಿಗೆ ಮಹತ್ವದ ಸೂಚನೆ

Sigandur-Launch-General-Image

ಶಿವಮೊಗ್ಗದ ಲೈವ್.ಕಾಂ | SAGARA NEWS | 7 ಜನವರಿ 2022 ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿರುವ ಬೆನ್ನಿಗೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ಮಹತ್ವದ ಸೂಚನೆ ನೀಡಿದೆ. ವೀಕೆಂಡ್ ಕರ್ಫ್ಯೂ ಸಂದರ್ಭ ದೇವಸ್ಥಾನವನ್ನು ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ತಿಳಿಸಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶನಿವಾರ ಮತ್ತು ಭಾನುವಾರದಂದು ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇನ್ನು, ಸೋಮವಾರದಿಂದ ಶುಕ್ರವಾರದವರೆಗೆ ಕೋವಿಡ್ … Read more

ಭದ್ರಾವತಿಯಲ್ಲಿ ಭಾರಿ ಅಗ್ನಿ ಅವಘಡ, ಬೆಂಕಿ ಆರಿಸಲು ಎಂಟು ಗಂಟೆ ಕಾರ್ಯಾಚರಣೆ, ಹೇಗಾಯ್ತು ಘಟನೆ? ಹೇಗಿತ್ತು ಕಾರ್ಯಾಚರಣೆ?

060121 fire at Bhadravathi Manjunatha Saw Mill

ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 6 ಜನವರಿ 2022 ಭದ್ರಾವತಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಸಾ ಮಿಲ್ ಒಂದರಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಸತತ ಅಗ್ನಿಶಾಮಕ ಸಿಬ್ಬಂದಿ ಸತತ ಎಂಟು ಗಂಟೆ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು, ಬೆಂಕಿಯ ಪರಿಣಾಮ ಅಕ್ಕಪಕ್ಕದ ಕಟ್ಟಡಗಳು ಹಾನಿಗೊಳಗಾಗಿವೆ. ಭದ್ರಾವತಿ ಬಸ್ ನಿಲ್ದಾಣ ಸಮೀಪದ ಮಂಜುನಾಥ ಸಾಮಿಲ್’ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 11 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿದೆ. ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ … Read more

ಭದ್ರಾವತಿಯಲ್ಲಿ ಸಂಸದ ಡಿ.ಕೆ.ಸುರೇಶ್ ಪ್ರತಿಕೃತಿಗೆ ಬೆಂಕಿ, ಆಕ್ರೋಶ

040122 Bhadravathi BJP protest against DK Suresh

ಶಿವಮೊಗ್ಗದ ಲೈವ್.ಕಾಂ | BHADRAVATHI NEWS |  4 ಜನವರಿ 2022 ಸಂಸದ ಡಿ.ಕೆ.ಸುರೇಶ್ ವಿರುದ್ಧ ಭದ್ರಾವತಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಭದ್ರಾವತಿಯ ಮಧ್ವಾಚಾರ್ಯ ಸರ್ಕಲ್ ಬಿಜೆಪಿ ಭದ್ರಾವತಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ.ಅಶ್ವಥನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿ, ಸಂಸದ ಡಿ.ಕೆ.ಸುರೇಶ್ ಅವರು ಗೂಂಡಾ ವರ್ತನೆ ತೋರಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಭದ್ರಾವತಿ ಬಿಜೆಪಿ ಅಧ್ಯಕ್ಷ  ಎಂ.ಪ್ರಭಾಕರ್, ಜಿಲ್ಲಾ ಪ್ರಧಾನ … Read more

ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸ್ಯೆ ಹಿನ್ನೆಲೆ, ವಿಜೃಂಭಣೆಯ ರಥೋತ್ಸವ, ಇವತ್ತು ಆಕರ್ಷಕ ತೆಪ್ಪೋತ್ಸವ

040122 Thirthahalli Ellamavasye Jathre Rathotsava

ಶಿವಮೊಗ್ಗದ ಲೈವ್.ಕಾಂ | THIRTHAHALLI NEWS |  4 ಜನವರಿ 2022 ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ತೀರ್ಥಹಳ್ಳಿ ಪಟ್ಟಣದಲ್ಲಿ ಶ್ರೀರಾಮೇಶ್ವರ ದೇವರ ರಥೋತ್ಸವ ವಿಜೃಂಭಣೆ ಯಿಂದ ನಡೆಯಿತು. ಸಾವಿರಾರು ಭಕ್ತರು ರಥೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಇವತ್ತು ತುಂಗಾ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ತೀರ್ಥಹಳ್ಳಿಯ ರಥಬೀದಿ, ಆಜಾದ್ ರಸ್ತೆ ಮಾರ್ಗದಲ್ಲಿ ರಥೋತ್ಸವ ನಡೆಯಿತು. ರಥಬೀದಿ, ಶ್ರೀರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಭಕ್ತರ ದಂಡೇ ಸೇರಿತ್ತು. ಜಾತ್ರೆ ವಿಶೇಷವಾಗಿ ಸೋಮವಾರ ತಾಲೂಕಿನಲ್ಲಿ ಶಾಲಾ, ಕಾಲೇಜಿಗೆ ಸ್ಥಳೀಯ ರಜೆ … Read more

ಭದ್ರಾವತಿಯಲ್ಲಿ ನಟ ಡಾಲಿ ಧನಂಜಯ, ಮಾಜಿ ಶಾಸಕ ಅಪ್ಪಾಜಿಗೌಡ ಮನೆಗೆ ಭೇಟಿ

020121 Dollay Dhananjaya in Bhadravathi for Badava Rascal Promotion

ಶಿವಮೊಗ್ಗದ ಲೈವ್.ಕಾಂ | BHADRAVATHI NEWS |  2 ಜನವರಿ 2022 ಸಿನಿಮಾದ ಪ್ರಮೋಷನ್’ಗಾಗಿ ಭದ್ರಾವತಿಗೆ ಆಗಮಿಸಿದ್ದ ನಟ ಡಾಲಿ ಧನಂಜಯ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಹಾರ ಹಾಕಿ ಸಂಭ್ರಮಿಸಿದರು. ಈ ನಡುವೆ ನಟ ಧನಂಜಯ ಅವರು ಮಾಜಿ ಶಾಸಕ ಅಪ್ಪಾಜಿ ಗೌಡ ಅವರ ನಿವಾಸಕ್ಕೆ ತೆರಳಿ, ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ಬಡವ ರಾಸ್ಕಲ್ ಸಿನಿಮಾದ ಪ್ರಮೋಷನ್’ಗಾಗಿ ನಟ ಡಾಲಿ ಧನಂಜನಯ ಇವತ್ತು ಭದ್ರಾವತಿಗೆ ಭೇಟಿ ನೀಡಿದ್ದರು. ನೇತ್ರಾವತಿ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ನಟ ಡಾಲಿ ಧನಂಜಯ … Read more

ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಗೆ ಚಾಲನೆ, ರಾಮ ಕುಂಡದಲ್ಲಿ ಸಾವಿರಾರು ಭಕ್ತರಿಂದ ಪುಣ್ಯ ಸ್ನಾನ

020122 Rameshwara Temple Ellamavasye Jathre

ಶಿವಮೊಗ್ಗದ ಲೈವ್.ಕಾಂ | SHIMOGA NEWS |  2 ಜನವರಿ 2022 ಪುರಾಣ ಪ್ರಸಿದ್ಧ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ಚಾಲನೆ ಸಿಕ್ಕಿದೆ. ತುಂಗಾ ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಕರೋನ ಹಿನ್ನೆಲೆಯಲ್ಲಿ ಮೂರು ದಿನ ಸರಳವಾಗಿ ಜಾತ್ರೆ ನಡೆಯಲಿದೆ. ರಾಮ ಕುಂಡದಲ್ಲಿ ಪುಣ್ಯ ಸ್ನಾನ ಜಾತ್ರೆಯ ಮೊದಲ ದಿನ ತುಂಗಾ ನದಿಯಲ್ಲಿರುವ ರಾಮ ಕುಂಡದಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸಾವಿರಾರು ಜನರು ರಾಮ ಕುಂಡದಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಇದರಿಂದ … Read more