ಶಿವಮೊಗ್ಗ ಡೈರಿ ಬಳಿ ಅಪಘಾತ, ಮೃತ ಯುವಕರ ಗುರುತು ಪತ್ತೆ

051121 Shimoga Bhadravathi Road Accident Bike KSRTC

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ನವೆಂಬರ್ 2021 ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತರಾದ ಯುವಕರ ಗುರುತು ಪತ್ತೆಯಾಗಿದೆ. ಇಬ್ಬರೂ ಭದ್ರಾವತಿ ತಾಲೂಕು ಜಯಂತಿ ಗ್ರಾಮದವರು ಎಂದು ತಿಳಿದು ಬಂದಿದೆ. ಮಾಚೇನಹಳ್ಳಿಯಲ್ಲಿ ಇವತ್ತು ಬೆಳಗ್ಗೆ ಕೆಎಸ್ಆರ್’ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರನ್ನು ಜಯಂತಿ ಗ್ರಾಮದ ಅಂಥೋಣಿ (34) ಮತ್ತು ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಗ್ರಾಮದ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ … Read more

ಶಿವಮೊಗ್ಗದ ಸೆಂಟ್ರಲ್ ಜೈಲಿನಲ್ಲಿ ನೇಣಿಗೆ ಶರಣಾದ ಸಿಬ್ಬಂದಿ

041121 Jail Warder Suicide at Shimoga Central Prison

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ನವೆಂಬರ್ 2021 ಶಿವಮೊಗ್ಗ ಕೇಂದ್ರ ಕಾರಾಗೃಹದ ಸಿಬ್ಬಂದಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೈಲು ಆವರಣದಲ್ಲಿರುವ ಕ್ವಾರ್ಟರ್ಸ್’ನಲ್ಲಿ ಘಟನೆ ಸಂಭವಿಸಿದೆ. ಅಸ್ಪಾಕ್ ಅಲಿ ತೊಗರಿ (25) ಎಂಬಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸಿಬ್ಬಂದಿ. ಜೈಲಿನಲ್ಲಿ ಡಿ ದರ್ಜೆ ನೌಕರನಾಗಿರುವ ಅಸ್ಪಾಕ್ ಅಲಿ ತೊಗರಿ ನಿನ್ನೆ ಬುಧವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಕಾರಣವೇನು? ಅಸ್ಪಾಕ್ ಅಲಿ ತೊಗರಿ ಶಿವಮೊಗ್ಗ ಕೇಂದ್ರ … Read more

ಭದ್ರಾವತಿಯಲ್ಲಿ ಪೊಲೀಸ್ ಮುಖ್ಯ ಪೇದೆ ಸಸ್ಪೆಂಡ್, ಶಿವಮೊಗ್ಗ ಎಸ್.ಪಿ ಆದೇಶ, ಕಾರಣವೇನು?

crime name image

ಶಿವಮೊಗ್ಗ ಲೈವ್.ಕಾಂ | SHIMOGA / BHADRAVATHI NEWS | 3 ನವೆಂಬರ್ 2021 ಗಾಂಜಾ ಹಾವಳಿ ಹೆಚ್ಚಳಕ್ಕೆ ಕೆಲ ಪೊಲೀಸರು ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪಗಳಿಗೆ ಪುಷ್ಠಿ ನೀಡುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದೆ ಆರೋಪದ ಹಿನ್ನೆಲೆ ಸಿಬ್ಬಂದಿಯೊಬ್ಬರನ್ನು ಜಿಲ್ಲಾ ವರಿಷ್ಠಾಧಿಕಾರಿ ಅವರು ಅಮಾನತು ಮಾಡಿದ್ದಾರೆ. ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆ ಮುಖ್ಯಪೇದೆ ಅಶೋಕ್ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ಏನಿದು ಪ್ರಕರಣ? ಜೂನ್ 28ರ ರಾತ್ರಿ ಭದ್ರಾವತಿ – ತರೀಕೆರೆ ರೆಸ್ತೆಯಲ್ಲಿ ಓಮ್ನಿ ಕಾರಿನಲ್ಲಿ … Read more

ರಸ್ತೆ, ಸರ್ಕಲ್’ಗೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ, ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್

021121 Shimoga Shiravala Road Circle Named afte Puneeth Rajkumar

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ನವೆಂಬರ್ 2021 ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ರಸ್ತೆ ಮತ್ತು ಸರ್ಕಲ್’ಗೆ ಅವರ ಹೆಸರು ನಾಮಕರಣ ಮಾಡಲಾಗಿದೆ. ಸಾರ್ವಜನಿಕರೆ ರಸ್ತೆಗಳಿಗೆ ಪುನೀತ್ ರಾಜಕುಮಾರ್ ಎಂದು ಹೆಸರು ಹಾಕಿ ಬೋರ್ಡ್ ನೆಟ್ಟಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ | ‘ತೀರ್ಥಹಳ್ಳಿಯಲ್ಲಿ ಪುನೀತ್ ರಾಜ್ ಕುಮಾರ್ ಮೇಲೆ ಜೇನುಗಳು ದಾಳಿ ಮಾಡಿದ್ದವು, ಸಿನಿಮಾದಲ್ಲಿ ಅದು ಗೊತ್ತಾಗುತ್ತೆ’ ಶಿವಮೊಗ್ಗದ ಲಕ್ಷ್ಮೀ ಟಾಕೀಸ್ ಪಕ್ಕದ … Read more

ಶಿವಮೊಗ್ಗ – ಆಯನೂರು ಮಧ್ಯೆ ರಸ್ತೆ ಅಪಘಾತ, ಒಬ್ಬ ಸ್ಥಳದಲ್ಲೇ ಸಾವು, ಮತ್ತೊಬ್ಬನಿಗೆ ಗಾಯ

011121 Accident at Shimoga Ayanur Road

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ನವೆಂಬರ್ 2021 ಬೊಲೆರೊ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಒಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ಶಿವಮೊಗ್ಗ – ಆಯನೂರು ನಡುವೆ ಮುದ್ದಿನಕೊಪ್ಪ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಬೊಲೆರೊ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಚಂದ್ರಶೇಖರ್ ಎಂಬಾತನಿಗೆ ಡಿಕ್ಕಿ ಹೊಡೆದಿದೆ. ಬಳಿಕ ಬೈಕ್ ಒಂದಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಚಂದ್ರಶೇಖರ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬೈಕ್ ಸವಾರ ಪೆರುಮಾಳ್’ಗೆ … Read more

‘ತೀರ್ಥಹಳ್ಳಿಯಲ್ಲಿ ಪುನೀತ್ ರಾಜ್ ಕುಮಾರ್ ಮೇಲೆ ಜೇನುಗಳು ದಾಳಿ ಮಾಡಿದ್ದವು, ಸಿನಿಮಾದಲ್ಲಿ ಅದು ಗೊತ್ತಾಗುತ್ತೆ’

311021 Puneeth Rajkumar Honey Bee attack Paramathma Cinema

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಅಕ್ಟೋಬರ್ 2021 ಸಿನಿಮಾ ಚಿತ್ರೀಕರಣಕ್ಕೆ ಬಂದಾಗ ತೀರ್ಥಹಳ್ಳಿಯಲ್ಲಿ ನಟ ಪುನೀತ್ ರಾಜ್ ಕುಮಾರ್ ಮೇಲೆ ಜೇನು ದಾಳಿಯಾಗಿತ್ತು. ಆದರೂ ಚಿತ್ರೀಕರಣ ಸ್ಥಗಿತಗೊಳಿಸಲು ಪುನೀತ್ ರಾಜ್ ಕುಮಾರ್ ಅವರು ಬಿಡಲಿಲ್ಲ ಎಂದು ನಿರ್ಮಾಪಕ ಜಯಣ್ಣ ಸ್ಮರಿಸಿಕೊಂಡಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಯಣ್ಣ ಅವರು ಪರಮಾತ್ಮ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ. ಜೇನು ದಾಳಿಗೆ ತುತ್ತಾಗಿ ಕಣ್ಣಿನ ಭಾಗದಲ್ಲಿ ಊದಿಕೊಂಡಿದ್ದರೂ ಅಪ್ಪು ಅಭಿನಯಿಸಿದ್ದರು ಎಂದು ವಿವರಿಸಿದ್ದಾರೆ. … Read more

ರಿಪ್ಪನ್ ಪೇಟೆಯಲ್ಲಿ ಅಂಗಡಿಗಳು ಬಂದ್, ನೀರವ ಮೌನ

301021 Ripponpete Bandh Ahead of Puneeth Rajkumar Deaht

ಶಿವಮೊಗ್ಗ ಲೈವ್.ಕಾಂ | RIPPONPETE NEWS | 30 ಅಕ್ಟೋಬರ್ 2021 ನಟ ಪುನಿತ್ ರಾಜ್ ಕುಮಾರ್ ನಿಧನ ಹಿನ್ನೆಲೆ ಗೌರವ ಸೂಚಿಸಿ ರಿಪ್ಪನ್ ಪೇಟೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ರಿಪ್ಪನ್ ಪೇಟೆಯಲ್ಲಿ ಮೆಡಿಕಲ್ ಶಾಪ್ ಹೊರತು ಉಳಿದೆಲ್ಲ ಮಳಿಗೆಗಳು, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ಮಧ್ಯಾಹ್ನದವರೆಗೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ವಾಹನ ಸಂಚಾರ, ಬಸ್ಸುಗಳ ಓಡಾಟಕ್ಕೆ ಯಾವುದೆ ಅಡ್ಡಿಯಾಗಿಲ್ಲ. ರಿಪ್ಪನ್ ಪೇಟೆ ಸರ್ಕಲ್’ನಲ್ಲಿ ಪುನಿತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಹೂವು ಹಾಕಿ ಗೌರವ ಸಲ್ಲಿಸಲಾಗಿದೆ. … Read more

ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ, ಧಗಧಗ ಹೊತ್ತಿ ಉರಿದ ಕಾರು

301021 car fire at talaguppa in sagara

ಶಿವಮೊಗ್ಗ ಲೈವ್.ಕಾಂ | TALAGUPPA NEWS | 30 ಅಕ್ಟೋಬರ್ 2021 ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣದಲ್ಲಿ ಕಾರು ಹೊತ್ತಿ ಉರಿದಿದೆ. ಸಾಗರ ತಾಳಗುಪ್ಪ ರಸ್ತೆಯ ಕಾನಲೆ ತಿರುವು ಬಳಿ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಲಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೆ ಸಮಸ್ಯೆಯಾಗಿಲ್ಲ. ಸ್ಥಳೀಯರು ಬೆಂಕಿ ಆರಿಸಲು ಯತ್ನಿಸಿದ್ದಾರೆ. ಆದರೆ ತೀವ್ರತೆ ಹೆಚ್ಚಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ … Read more

BREAKING NEWS | ಭದ್ರಾವತಿಯಲ್ಲಿ ಟೈರ್’ಗೆ ಬೆಂಕಿ, ಅಂಗಡಿಗಳು ಬಂದ್

291021 Fire at Bhadravathi ahead of Punith Rajkumar Death

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 29 ಅಕ್ಟೋಬರ್ 2021 ಪುನಿತ್ ರಾಜ್ ಕುಮಾರ್ ನಿಧನ ಹಿನ್ನೆಲೆ ಭದ್ರಾವತಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲಾಗಿದೆ. ಅಂಗಡಿಗಳ ಬಾಗಿಲು ಬಂದ್ ಮಾಡಿ ವರ್ತಕರು ಗೌರವ ಸಲ್ಲಿಸಿದ್ದಾರೆ. ಇನ್ನು ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ರಸ್ತೆಯಲ್ಲಿ ಟೈರ್’ಗೆ ಬೆಂಕಿ ಹಚ್ಚಲಾಗಿದೆ. ಅಂಗಡಿಗಳನ್ನು ಬಂದ್ ಮಾಡುವಂತೆ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ  | ಗೋಪಿ ಸರ್ಕಲ್’ನಲ್ಲಿ ಪುನಿತ್ ರಾಜ್ ಕುಮಾರ್ ಅಭಿಮಾನಿಗಳಿಂದ ಪುಷ್ಪ ನಮನ ಮತ್ತೊಂದೆಡೆ ಯಾವುದೆ … Read more

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ

Talaguppa Graphics

ಶಿವಮೊಗ್ಗ ಲೈವ್.ಕಾಂ | SAGARA NEWS | 27 ಅಕ್ಟೋಬರ್ 2021 ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಉಪ ವಿಭಾಗಾಧಿಕಾರಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರ ನೀಡಿದರು. ತಾಳಗುಪ್ಪ ಸಮೀಪದ ಮರತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಅವರು ರಾಜೀನಾಮೆ ನೀಡಿದ್ದಾರೆ. ಎಂಟು ತಿಂಗಳ ಹಿಂದೆ ವಿಶಾಲಾಕ್ಷಿ ಅವರು ಅಧಿಕಾರ ಸ್ವೀಕರಿಸಿದ್ದರು. ಆರೋಗ್ಯ ಸಮಸ್ಯೆಯಿಂದಾಗಿ ತಾವು ರಾಜೀನಾಮೆ ನೀಡುತ್ತಿರುವುದಾಗಿ ವಿಶಾಲಾಕ್ಷಿ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಸಾಗರ ಉಪ ವಿಭಾಗಾಧಿಕಾರಿ ಡಾ. … Read more