ಹೊಸ ಬಟ್ಟೆ ಧರಿಸಿ, ಹೂವಿನ ಹಾರ ಹಾಕಿಕೊಂಡು ನೇಣಿಗೆ ಶರಣಾದ KSRTC ನೌಕರ

070921 Suicide At Bhadravathi Hosasiddapura

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಸೆಪ್ಟೆಂಬರ್ 2021 KSRTC ಚಾಲಕರೊಬ್ಬರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊರಳಿಗೆ ಹೂವಿನ ಹಾರ ಹಾಕಿಕೊಂಡು, ನೇಣಿಗೆ ಶರಣಾಗಿದ್ದಾರೆ. ಗಂಗಾಧರ್ (46), ಆತ್ಮಹತ್ಯೆ ಮಾಡಿಕೊಂಡವರು. ಭದ್ರಾವತಿಯ ಹೊಸಸಿದ್ಧಾಪುರದಲ್ಲಿ ಘಟನೆ ಸಂಭವಿಸಿದೆ. ಹೊಸಸಿದ್ಧಾಪುರದ ತಮ್ಮ ಮನೆಯ ಮಹಡಿಯ ಕೊಠಡಿಯಲ್ಲಿ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಗಂಗಾಧರ್ ನೇಣು ಬಿಗಿದುಕೊಳ್ಳುವ ಮುನ್ನ ಹೊಸ ಬಟ್ಟೆ ಧರಿಸಿ, ಕೊರಳಿಗೆ ಹೂವಿನ ಹಾರವನ್ನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. … Read more

ಆಯನೂರಿನಲ್ಲಿ ಅಂಗಡಿ ಬಾಗಿಲು ಮುರಿದು ಹಣಕ್ಕಿಂತಲೂ ಹೆಚ್ಚಿನ ಮೊತ್ತದ ಗುಟ್ಕಾ, ಸಿಗರೇಟು ಕಳ್ಳತನ

Ayanuru General Image Board 1

ಶಿವಮೊಗ್ಗ ಲೈವ್.ಕಾಂ | AYANUR NEWS | 7 ಸೆಪ್ಟೆಂಬರ್ 2021 ಅಂಗಡಿಯೊಂದರ  ಬಾಗಿಲು ಮುರಿದು ಒಳ ನಗ್ಗಿದ ಕಳ್ಳರು ಹಣಕ್ಕಿಂತಲೂ ಹೆಚ್ಚಿನ ಮೊತ್ತದ ಗುಟ್ಕಾ, ಸಿಗರೇಟು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಯನೂರಿನ ಬಿ.ಹೆಚ್.ರಸ್ತೆಯಲ್ಲಿರುವ ಭರತ್ ರಾಜ್ ಅವರಿಗೆ ಸೇರಿದ ಸಿದ್ಧೇಶ್ವರ ಪ್ರಾವಿಜನ್ ಸ್ಟೋರ್’ನಲ್ಲಿ ಕಳ್ಳತನವಾಗಿದೆ. ಅಂಗಡಿಯ ರೋಲಿಂಗ್ ಶೆಟರ್ ಮುರಿದು ಖದೀಮರು ಕೈಚಳಕ ತೋರಿಸಿದ್ದಾರೆ. ಗುಟ್ಕಾ, ಸಿಗರೇಟ್ ಕಳವು ಖದೀಮರು ಅಂಗಡಿಯಲ್ಲಿ ಸುಮಾರು 5 ಸಾವಿರ ರೂ. ನಗದು … Read more

ಕಾಣಿಕೆ ಬದಲು ದೇವಸ್ಥಾನದ ಹುಂಡಿಗೆ ಚೂಯಿಂಗಮ್, ಒಬ್ಬ ಅರೆಸ್ಟ್, ಚೂಯಿಂಗಮ್ ಹಾಕುತ್ತಿದ್ದದ್ದು ಯಾಕೆ?

Arrest News Graphics

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 7 ಸೆಪ್ಟೆಂಬರ್ 2021 ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಬೇಡಿಕೊಂಡು, ಹುಂಡಿಗೆ ಕಾಣಿಕೆ ಅರ್ಪಿಸುವ ಭಕ್ತರಿದ್ದಾರೆ. ಈ ಮಧ್ಯೆ ಒಬ್ಬಾತ ಹುಂಡಿಗೆ ಚೂಯಿಂಗಮ್ ಅಂಟಿಸಿದ ಕೋಲು ಹಾಕಿ ಸಿಕ್ಕಿಬಿದ್ದಿದ್ದಾನೆ. ಆತನನ್ನು ಪೊಲೀಸರಿಗೆ ಹಿಡಿದು ಕೊಡಲಾಗಿದೆ. ಇನ್ನು, ಈತನ ಕುಕೃತ್ಯ ಈಗ ತೀರ್ಥಹಳ್ಳಿ ತಾಲೂಕಿನ ದೇವಸ್ಥಾನಗಳ ಆಡಳಿತ ಮಂಡಳಿ ನಿದ್ದೆಗೆಡಿಸಿದೆ. ಭದ್ರಾವತಿ ತಾಲೂಕು ಬಾರಂದೂರಿನ ವಸಂತ ಕುಮಾರ್ (36) ಬಂಧಿತ. ತೀರ್ಥಹಳ್ಳಿ ತಾಲೂಕು ಮಹಿಷಿಯ ಅಶ್ವತ್ಥ ನಾರಾಯಣ ದೇವಸ್ಥಾನದ ಹುಂಡಿಗೆ ಚೂಯಿಂಗಮ್ … Read more

ಮೆಸ್ಕಾಂ ಲೈನ್’ಮ್ಯಾನ್’ಗೆ ಕರೆಂಟ್ ಶಾಕ್, BSNL ಟವರ್ ನಿರ್ವಾಹಕನ ವಿರುದ್ಧ ಕೇಸ್, ಕಾರಣವೇನು?

Sagara Rural Police Station

ಶಿವಮೊಗ್ಗ ಲೈವ್.ಕಾಂ | SAGARA NEWS | 7 ಸೆಪ್ಟೆಂಬರ್ 2021 ವಿದ್ಯುತ್ ಶಾಕ್’ಗೆ ಒಳಗಾಗಿ ಲೈನ್ ಮ್ಯಾನ್ ಒಬ್ಬರು ವಿದ್ಯುತ್ ಕಂಬದಿಂದ ಕೆಳಗೆ ಬಿದ್ದು, ಗಾಯಗೊಂಡಿದ್ದಾರೆ. ಬಿಎಸ್ಎನ್ಎಲ್ ಟವರ್ ಆಪರೇಟರ್ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಲಿದೇವರಬನದ ರವಿಕಾಂತ್ (24) ಗಾಯಗೊಂಡ ಲೈನ್ ಮ್ಯಾನ್. ಸಾಗರ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಏನಿದು ಘಟನೆ? ಶಾಕ್’ಗೆ ಕಾರಣವೇನು? ಸಾಗರದ ಆವಿನಹಳ್ಳಿ ಫೀಡರ್’ನಲ್ಲಿ ನಿರ್ವಹಣೆ ಇರುವುದರಿಂದ ವಿದ್ಯುತ್ ಕಡಿತಗೊಳಿಸುವುದಾಗಿ ಮೆಸ್ಕಾಂ ಪ್ರಕಟಣೆ … Read more

23 ತಿಂಗಳು ಹೊರಜಗತ್ತಿಗೆ ಕಾಣಿಸದ ಸ್ವಾಮೀಜಿ, ತಪೋನುಷ್ಠಾನದ ಬಳಿಕ ಮಠಕ್ಕೆ ಭಕ್ತ ಸಾಗರ, ಏನಿದು ತಪಸ್ಸು?

060921 Sheela Sampadane Mutt Bhadravathi Swamiji

ಶಿವಮೊಗ್ಗ ಲೈವ್.ಕಾಂ |BHADRAVATHI NEWS | 6 ಸೆಪ್ಟೆಂಬರ್ 2021 23 ತಿಂಗಳು ಬಾಹ್ಯ ಪ್ರಪಂಚದಿಂದ ದೂರ ಉಳಿದು ತಪಸ್ಸು ನಡೆಸುತ್ತಿದ್ದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ತಪೋನುಷ್ಠಾನ ಪೂರ್ಣಗೊಂಡಿದೆ. ಇದೆ ಮೊದಲ ಭಾರಿಗೆ ಭಕ್ತರಿಗೆ ದರ್ಶನ ನೀಡಿದ್ದಾರೆ. ಶ್ರೀಗಳನ್ನು ಕಣ್ತುಂಬಿಕೊಂಡು, ಪೂಜೆ ಸಲ್ಲಿಸಲು ದೂರದೂರುಗಳಿಂದ ಭಕ್ತರು ಆಗಮಿಸಿದ್ದರು. ಭದ್ರಾವತಿ ತಾಲೂಕು ಗೋಣಿಬೀಡು ಗ್ರಾಮದ ಶೀಲ ಸಂಪಾದನಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ತಪೋನುಷ್ಠಾನದ ಸಮಾರೋಪ, ದಾಸೋಹ ಮಂದಿರ ಉದ್ಘಟನಾ ಸಮಾರಂಭ ನಡೆಯಿತು. ಸಮಾಜದಲ್ಲಿ ಬಹಿರ್ಮುಖ … Read more

BREAKING NEWS |ಭದ್ರಾವತಿ 29ನೇ ವಾರ್ಡ್, ಜೆಡಿಎಸ್’ಗೆ ಭರ್ಜರಿ ಗೆಲುವು, ಕಾಂಗ್ರೆಸ್ ಗಳಿಸಿದ್ದೆಷ್ಟು? ಬಿಜೆಪಿ ಪಡೆದ ಮತಗಳೆಷ್ಟು?

060921 JDS wins in 29th Ward at Bhadravathi

ಶಿವಮೊಗ್ಗ ಲೈವ್.ಕಾಂ |BHADRAVATHI NEWS | 6 ಸೆಪ್ಟೆಂಬರ್ 2021 ತೀವ್ರ ಕುತೂಹಲ ಕೆರಳಿಸಿದ್ದ ಭದ್ರಾವತಿ ನಗರಸಭೆ 29ನೇ ವಾರ್ಡ್ ಚುನಾವಣೆಲ್ಲಿ ಜೆಡಿಎಸ್ ಪಕ್ಷಕ್ಕೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಜೆಡಿಎಸ್ ಅಭ್ಯರ್ಥಿ ನಾಗರತ್ನ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಯಾರಿಗೆಷ್ಟು ಮತ ಲಭಿಸಿದೆ 29ನೇ ವಾರ್ಡ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಗರತ್ನ ಅವರು 1282 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಲೋಹಿತಾ ನಂಜಪ್ಪ 832 ಮತಗಳು, ಬಿಜೆಪಿ ಪಕ್ಷದ ಅಭ್ಯರ್ಥಿ ರಮಾ ವೆಂಕಟೇಶ್ ಅವರು 70 ಮತಗಳನ್ನು … Read more

33 ಲಕ್ಷ ರೂ. ಸರ್ಕಾರದ ನೆರವು ತಿರಸ್ಕರಿಸಿ ಸಾಹಸಕ್ಕೆ ಕೈ ಹಾಕಿದ ಚರಕದ ಮಹಿಳೆಯರು

050921 Charaka Women about Exhibition in Shimoga

ಶಿವಮೊಗ್ಗ ಲೈವ್.ಕಾಂ |SHIMOGA / SAGARA NEWS | 5 ಸೆಪ್ಟೆಂಬರ್ 2021 ಮೂರು ವರ್ಷವಾದರೂ ಸರ್ಕಾರ ಘೋಷಿಸಿದ ಲಕ್ಷಾಂತರ ರೂಪಾಯಿ ಅನುದಾನ ಕೈ ಸೇರಲಿಲ್ಲ. ಹಾಗಾಗಿ ಆ ದುಡ್ಡನ್ನೆ ತಿರಸ್ಕರಿಸಿದ ಮಹಿಳೆಯರು ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದ್ದಾರೆ. ತಾವು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಮಹಿಳೆಯರ ಈ ನಡೆ ಅಧಿಕಾರಿಗಳ ಜಾಣ ಕುರುಡುತನಕ್ಕೆ ತಪರಾಕಿ ಕೊಟ್ಟಂತಾಗಿದೆ. ಸಾಗರ ತಾಲೂಕು ಭೀಮನಕೋಣೆಯ ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ‘ಪವಿತ್ರ … Read more

ರಿಪ್ಪನ್’ಪೇಟೆಯಲ್ಲಿ ಭೀಕರ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ, ಕಾರು ಚಾಲಕ ಎಸ್ಕೇಪ್

050921 Car Bike Accident at Ripponpete

ಶಿವಮೊಗ್ಗ ಲೈವ್.ಕಾಂ |RIPPONPETE NEWS | 5 ಸೆಪ್ಟೆಂಬರ್ 2021 ಕಾರು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ರಿಪ್ಪನ್’ಪೇಟೆ ಪಟ್ಟಣದ ತೀರ್ಥಹಳ್ಳಿ ರಸ್ತೆಯ ಜ್ಯೋತಿ ಮಾಂಗಲ್ಯ ಮಂಟಪದ ಬಳಿ ರಾತ್ರಿ ಘಟನೆ ಸಂಭವಿಸಿದೆ. ರಿಪ್ಪನ್’ಪೇಟೆಯ ಮುಸ್ತಫಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಗಾಯ್ತು ಅಪಘಾತ? ಮುಸ್ತಫಾ ಅವರು ಗರ್ತಿಕೆರೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದಾರೆ. ರಾತ್ರಿ ಅಂಗಡಿಯಿಂದ ಮನೆಗೆ ಮರಳುತ್ತಿದ್ದಾಗ ಘಟನೆ … Read more

ಭದ್ರಾವತಿ ಗೊಂದಿ ಅಣೆಕಟ್ಟೆ ಮುಂದೆ ಈಜುತ್ತಿದ್ದ ಶಿವಮೊಗ್ಗದ ಇಬ್ಬರು ಯುವಕರು ಸಾವು

040921 Gondi Check Dam Youths Drowned in Water

ಶಿವಮೊಗ್ಗ ಲೈವ್.ಕಾಂ |BHADRAVATHI NEWS | 4 ಸೆಪ್ಟೆಂಬರ್ 2021 ಭದ್ರಾವತಿಯ ಗೋಂದಿ ಅಣೆಕಟ್ಟೆಯಲ್ಲಿ ಈಜಲು ಹೋಗಿದ್ದ ಶಿವಮೊಗ್ಗದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಮಂಜುನಾಥ ಬಡಾವಣೆಯ ಕಿರಣ್ ಮತ್ತು ಕೊಮ್ಮನಾಳ್’ನ ಶಶಾಂಕ್ ಮೃತ ದುರ್ದೈವಿಗಳು. ಬೆಳಗ್ಗೆ ಗೋಂದಿ ಅಣೆಕಟ್ಟೆಯಲ್ಲಿ ಈಜುತ್ತಿದ್ದಾಗ ಘಟನೆ ಸಂಭವಿಸಿದೆ. ಸ್ನೇಹಿತರ ಜೊತೆಗೆ ಬಂದಿದ್ದರು ಎಜುಕೇರ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿಗಳಾದ ಕಿರಣ್, ಶಶಾಂಕ್ ಸೇರಿ ಐವರು ಯುವಕರು ಗೊಂದಿ ಚೆಕ್ ಡ್ಯಾಂ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಕಿರಣ್ ಮತ್ತು … Read more

ಸುರಕ್ಷಿತವಾಗಿ ದಡ ಸೇರಿಸುತ್ತಿದ್ದ ಲಾಂಚ್ ಸಿಬ್ಬಂದಿ ಬದುಕು ನಡು ನೀರಿಗೆ, ಕಾರಣವೇನು?

Sigandur-Launch-General-Image

ಶಿವಮೊಗ್ಗ ಲೈವ್.ಕಾಂ | TUMARI NEWS | 4 ಸೆಪ್ಟೆಂಬರ್ 2021 ಶರಾವತಿ ಹಿನ್ನೀರು ಭಾಗದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರನ್ನು ಸುರಕ್ಷಿತವಾಗಿ ದಡ ತಲುಪಿಸುವ ಲಾಂಚ್ ಸಿಬ್ಬಂದಿ ಬದುಕು, ನಡು ನೀರಿಗೆ ಬಂದು ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿಧಾನಗತಿಯಿಂದಾಗಿ ಲಾಂಚ್ ಸಿಬ್ಬಂದಿ ಒಂಭತ್ತು ತಿಂಗಳಿಂದ ಸಂಬಳವಿಲ್ಲದೆ ಪರಿತಪಿಸುತ್ತಿದ್ದಾರೆ. ಇದಿಷ್ಟೆ ಅಲ್ಲ, ಭವಿಷ್ಯದ ಕುರಿತು ಆತಂಕ ಎದುರಾಗಿದೆ. ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುವುದು ಶರಾವತಿ ಹಿನ್ನೀರಿನ ಲಾಂಚ್’ಗಳು. ಅಂಬಾರಗೋಡ್ಲು – ಕಳಸವಳ್ಳಿ … Read more