ತೋಟಕ್ಕೆ ಹೋಗಿದ್ದವರು ಹಿಂತಿರುಗಲೇ ಇಲ್ಲ, ಹುಡುಕಿಕೊಂಡು ಹೋದ ಕುಟುಂಬದವರಿಗೆ ಆಘಾತ

ಶಿವಮೊಗ್ಗ ಲೈವ್.ಕಾಂ | HOSANAGARA NEWS | 14 MAY 2021 ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಹೊಸನಗರ ತಾಲೂಕು ಹುಂಚದ ಹೊಂಡ್ಲಗದ್ದೆ ಸಮೀಪದ ಹಾದಿಗದ್ದೆಯ ರೈತ ಉಮೇಶ್ (47) ಸಿಡಿಲಿಗೆ ಮೃತಪಟ್ಟ ದುರ್ದೈವಿ. ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಉಮೇಶ್ ಮೃತಪಟ್ಟಿದ್ದಾರೆ. ಬಹಳ ಹೊತ್ತು ಮನೆಗೆ ಬಾರದಿದ್ದರಿಂದ ಕುಟುಂಬದವರು ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ … Read more

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ, ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮೊದಲ ದಿನ ಹೇಗಿತ್ತು ರಿಸ್ಪಾನ್ಸ್?

110521 Eighteen Plus Corona Vaccine in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 MAY 2021 ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತಿನಿಂದ ಕರೋನ ಲಸಿಕೆ ನೀಡಲಾಯಿತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಬೆಳಗ್ಗೆಯಿಂದ ದೊಡ್ಡ ಸಂಖ್ಯೆಯಲ್ಲಿ ಲಸಿಕೆ ವಿತರಣೆ ಮಾಡಲಾಯಿತು. 18 ವರ್ಷದಿಂದ 45 ವರ್ಷದವರ ವರೆಗೆ ಲಸಿಕೆ ನೀಡಲಾಯಿತು. ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತಿದ್ದು, ಲಸಿಕೆ ಪಡೆಯಲಾಗಿದೆ. ಬೆಳಗ್ಗೆ ಸಣ್ಣದಾಗಿದ್ದ ಕ್ಯೂ ಮಧ್ಯಾಹ್ನದ ವೇಳೆಗೆ ದೊಡ್ಡದಾಯಿತು. ಮೆಗ್ಗಾನ್ ಆಸ್ಪತ್ರೆ ಕಟ್ಟಡದಿಂದ ಹೊರಗಿನವರೆಗೆ ಜನರು ಕ್ಯೂನಲ್ಲಿ ನಿಂತಿದ್ದು ಲಸಿಕೆ ಪಡೆದರು. ಭದ್ರಾವತಿ ವರದಿ … Read more

ವಾಹನ ತಪಾಸಣೆ ಮಾಡ್ತಿದ್ದ ಮಹಿಳಾ ಪಿಎಸ್ಐಗೆ ಅವಾಜ್, ಸಿಎಂ ವಿರುದ್ಧ ಬಿಜೆಪಿ ಕಾರ್ಯಕರ್ತ ಗರಂ, ವಿಡಿಯೋ ವೈರಲ್

110521 Jog Falls Police Checking 1

ಶಿವಮೊಗ್ಗ ಲೈವ್.ಕಾಂ | JOG NEWS | 11 MAY 2021 ಲಾಕ್ ಡೌನ್ ಹಿನ್ನೆಲೆ ವಾಹನಗಳ ತಪಾಸಣೆ ನಡೆಸುತ್ತಿದ್ದ ಮಹಿಳಾ ಪಿಎಸ್ಐ ಅವರನ್ನು ವ್ಯಕ್ತಿಯೊಬ್ಬ ನಿಂದಿಸಿದ ವಿಡಿಯೋ ವೈರಲ್ ಆಗಿದೆ. ಸಾಗರ ತಾಲೂಕು ಜೋಗದಲ್ಲಿ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಲ್ಲೆಯ ಗಡಿಯೊಳಗೆ ಬರುವ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ನಿಂದಿಸಿದ್ದಾಗಿ ತಿಳಿದು ಬಂದಿದೆ. ಯಡಿಯೂರಪ್ಪ ಸಂಬಂಧ ಬೇಜಾರಾಗಿದೆ ಮಹಿಳಾ ಪಿಎಸ್‍ಐ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿ, ಸರ್ಕಾರದಲ್ಲಿ … Read more

ಶಿವಮೊಗ್ಗದಲ್ಲಿ ಕರೋನಾಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಲಿ

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 11 MAY 2021 ಕರೋನ ಸೋಂಕಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು ಬಲಿಯಾಗಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸಲದೆ ಕೊನೆಯುಸಿರೆಳೆದಿದ್ದಾರೆ. ಹೊಳೆಹೊನ್ನೂರು ಸಮೀಪದ ಕಲ್ಲಿಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ (40) ಮೃತರು. ಸೋಂಕು ತಗುಲಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಒಂದು ಮಗ, ಒಬ್ಬ  ಮಗಳು ಇದ್ದಾರೆ. ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494 ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200 … Read more

ಮಾಸ್ಕ್ ಹಾಕದೆ ಓಡಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಬಂಧನ

050521 Ripponpete Krishnappa Arrest 1

ಶಿವಮೊಗ್ಗ ಲೈವ್.ಕಾಂ | RIPPONPETE NEWS | 5 MAY 2021 ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಅವರನ್ನು ಬಂಧಿಸಲಾಗಿದೆ. ರಿಪ್ಪನ್‍ಪೇಟೆಯ ವಿನಾಯಕ ಸರ್ಕಲ್‍ನಲ್ಲಿ ಟಿ.ಆರ್.ಕೃಷ್ಣಪ್ಪ ಅವರನ್ನು ಬಂಧಿಸಲಾಯಿತು. ಈ ವೇಳೆ ತಲೆ ಕೆಳಗಾಗಿ ನಿಂತು ಕೃಷ್ಣಪ್ಪ ಅವರು ಪ್ರತಿಭಟನೆ ನಡೆಸಿದರು. ಸಾಮಾಜಿಕ ಕಾರ್ಯಕರ್ತ ಟಿ.ಆರ್‍.ಕೃಷ್ಣಪ್ಪ ಅವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದರು. ಇದನ್ನು ಗಮನಿಸಿ ಅಧಿಕಾರಿಗಳು ಮಾಸ್ಕ್ ಧರಿಸಿ ಓಡಾಡುವಂತೆ ಸೂಚಿಸಿದ್ದರು. ಆದರೆ ತಮಗೆ ಕರೋನ ಬಂದಿಲ್ಲ. ಬರುವುದಿಲ್ಲ. ಹಾಗಾಗಿ ಮಾಸ್ಕ್ ಧರಿಸುವುದಿಲ್ಲ ಎಂದು … Read more

ಇನ್ನೊಂದು ವಾರದಲ್ಲಿ ಭದ್ರಾವತಿಯಲ್ಲಿ ಆಕ್ಸಿಜನ್ ಉತ್ಪಾದನೆ ಶುರು, ವಿಐಎಸ್ಎಲ್​​ಗೆ ಬರ್ತಾರೆ ಸಚಿವರು

Minister KS Eshwarappa

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 MAY 2021 ಭದ್ರಾವತಿ ವಿಐಎಸ್‍ಎಲ್ ಅಧೀನದಲ್ಲಿರುವ ಆಕ್ಸಿಜನ್ ತಯಾರಿಕಾ ಘಟಕವನ್ನು ಸಕ್ರಿಯಗೊಳಿಸಲು ನಿರ್ಧರಿಸಲಾಗಿದ್ದು, ವಾರದೊಳಗಾಗಿ ಉತ್ಪಾದನೆ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಐಎಸ್‍ಎಲ್ ಅವರೊಂದಿಗೆ ಎಂಎಸ್‍ಪಿಎಲ್ ಸಂಸ್ಥೆ ಆಕ್ಸಿಜನ್ ಉತ್ಪಾದಿಸಿಕೊಡುವ ಒಪ್ಪಂದ ಮಾಡಿಕೊಂಡಿದೆ. ಸದ್ಯಕ್ಕೆ ಅದರ ಅವಧಿ ಮುಗಿದಿದೆ. ಜಿಲ್ಲಾಡಳಿತದ ಕೋರಿಕೆಯಂತೆ ಇದೀಗ ಆಕ್ಸಿಜನ್ ಉತ್ಪಾದಿಸಲು ಎಂಎಸ್‍ಪಿಎಲ್ ಮುಂದೆ ಬಂದಿದೆ. ಪ್ರತಿದಿನ 320 ಕೆಎಲ್‍ಡಿ ಆಕ್ಸಿಜನ್ ಉತ್ಪಾದಿಸುವ … Read more

ಕಂಡಲೆಲ್ಲ ಆನೆಗಳ ಹೆಜ್ಜೆ ಗುರುತು, ತೆಂಗಿನ ಮರಗಳು ಬುಡಮೇಲು, ಶಿವಮೊಗ್ಗ ಸಿಟಿ ಸಮೀಪದ ಈ ಹಳ್ಳಿ ಜನರಲ್ಲಿ ದಿಗಿಲು

050521 Elephant Steps at Puradal Village 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 MAY 2021 ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದಲ್ಲಿ ಕಾಡನೆಗಳು ದಾಳಿ ಮಾಡಿವೆ. ಗದ್ದೆ, ತೊಟದಲ್ಲಿ ಬೆಳೆ ಹಾನಿ ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಪುರದಾಳು ಗ್ರಾಮದ ತೋಟವೊಂದಕ್ಕೆ ದಾಳಿ ಮಾಡಿ, ತೆಂಗಿನ ಮರಗಳನ್ನು ಉರುಳಿಸಿವೆ. ಶುಂಠಿ ಹೊಲದಲ್ಲಿ ಓಡಾಡಿ ಬೆಳೆ ಹಾನಿ ಮಾಡಿವೆ. ಹಿಳ್ಳೋಡಿ ಗೋವಿಂದಪ್ಪ, ಶಿವಣ್ಣ ಮತ್ತು ಸುನಿಲ್ ಭಟ್ಟ ಎಂಬುವವರ ತೋಟ, ಹೊಲದಲ್ಲಿ ಕಾಡಾನೆಗಳು ಪುಂಡಾಟ ಮಾಡಿವೆ. ಇಲ್ಲಿನ ಮಲೆಶಂಕರ ಮತ್ತು ಪುರದಾಳು ಗ್ರಾಮಗಳ … Read more

ಸೇತುವೆ ಕೆಳಗೆ ಬಿದ್ದು ನುಜ್ಜುಗುಜ್ಜಾದ ಮರಳು ಲಾರಿ, ಚಾಲಕ ಸ್ಥಳದಲ್ಲೇ ಸಾವು

040521 Annuvalli Bridge Truck Accident 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 4 MAY 2021 ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಸೇತುವೆಯ ಕೆಳಗೆ ಬಿದ್ದಿದೆ. ಘಟನೆಯಲ್ಲಿ ಚಾಲಕ ಮೃತಪಟ್ಟಿದ್ದು, ಕ್ಲೀನರ್‍ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ತೀರ್ಥಹಳ್ಳಿ ತಾಲೂಕು ಮೇಗರವಳ್ಳಿಯ ಬಳಿಯ ಅಣ್ಣುವಳಿ ಸೇತುವೆ ಬಳಿಯ ಘಟನೆ ಸಂಭವಿಸಿದೆ. ಮಧ್ಯರಾತ್ರಿ ಅಪಘಾತವಾಗಿದ್ದು, ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮರಳು ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾದ ಲಾರಿಯಲ್ಲಿ ಮರಳು ಸಾಗಣೆ ಮಾಡಲಾಗುತ್ತಿತ್ತು. ಕರೋನ ಕರ್ಫ್ಯೂ ಜಾರಿಯಾದಾಗಿನಿಂದ ಈ ಭಾಗದಲ್ಲಿ ನಡುರಾತ್ರಿಯಲ್ಲಿ ಮರಳು ಸಾಗಣೆ … Read more

ಕರೋನ ಭೀತಿಯ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್​​ಡಿ ಆತಂಕ ಶುರು, ಸಾಗರದ ಯುವಕನಿಗೆ ಪಾಸಿಟಿವ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 4 MAY 2021 ಕರೋನ ಭೀತಿ ನಡುವೆ ಜಿಲ್ಲೆಯಲ್ಲಿ ಕ್ಯಾಸನೂರು ಫಾರೆಸ್ಟ್‍ ಡಿಸೀಸ್ (ಕೆಎಫ್‍ಡಿ) ಆತಂಕ ಶುರುವಾಗಿದೆ. ಸಾಗರ ತಾಲೂಕಿನ ಯುವಕನೊಬ್ಬನಿಗೆ ಕೆಎಫ್‍ಡಿ ಪಾಸಿಟಿವ್ ಬಂದಿದೆ. ಸಾಗರ ತಾಲೂಕು ತ್ಯಾಗರ್ತಿ ಸಮೀಪದ ಬರೂರು ಬಳಿಯ ಮತ್ತಲಬೈಲಿನ ದೀಪಕ್ (18) ಎಂಬುವವರಿಗೆ ಕೆಎಫ್‍ಡಿ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ ವಿದ್ಯಭ್ಯಾಸ ಮಾಡುತ್ತಿದ್ದ ದೀಪಕ್, ಲಾಕ್‍ಡೌನ್ ಹಿನ್ನೆಲೆ ಊರಿಗೆ ಮರಳಿದ್ದರು. ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದೆ. ತಾಲೂಕು ಉಪ … Read more

ಭದ್ರಾವತಿ ಶಾಸಕರ ಮನೆ ಮುಂದೆ ಕಾರಿನಲ್ಲಿ ಬಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹಲ್ಲೆ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 3 MAY 2021 ಭದ್ರಾವತಿ ಶಾಸಕ ಸಂಗಮೇಶ್ವರ್ ಮನೆ ಮುಂದೆಯೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರೇಗೌಡ ಅವರ ಮೇಲೆ ಹಲ್ಲೆ ನಡೆದಿದೆ. ಮಾರಣಾಂತಿಕ ಹಲ್ಲೆ ನಡೆಸಿರುವ ಕುರಿತು ಪ್ರಕರಣ ದಾಖಲಾಗಿದೆ. ಹಲ್ಲೆಗೆ ಕಾರಣವೇನು? ಕೌಟುಂಬಿಕ ವಿಚಾರ ಸಂಬಂಧ ಶಾಸಕ ಸಂಗಮೇಶ್ವರ್ ಅವರ ಗೃಹ ಕಚೇರಿಯಲ್ಲಿ ಪಂಚಾಯಿತಿ ನಡೆಸಲಾಗಿತ್ತು. ಇದನ್ನು ಮುಗಿಸಿ ಹೊರ ಬರುತ್ತಿದ್ದಂತೆ ಕಾರಿನಲ್ಲಿ ಬಂದ ಕಿರಣ್‍ ಎಂಬಾತ ಚಂದ್ರೇಗೌಡ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. … Read more