THIRTHAHALLI | ಆಗುಂಬೆಗೆ ಬರುವ ಪ್ರವಾಸಿಗರ ಗಮನಕ್ಕೆ, ಸ್ವಲ್ಪ ಯಾಮಾರಿದರೂ ಬೀಳುತ್ತೆ ದಂಡ

080221 Agumbe Sun Set Point 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 08 FEBRUARY 2021 ಆಗುಂಬೆಯಲ್ಲಿ  ಇನ್ಮುಂದೆ ಪ್ರಾಣಿಗಳಿಗೆ ಆಹಾರ ನೀಡಿದರೆ ದಂಡ ಫಿಕ್ಸ್. ಕಸ ಎಸೆದರೂ ಬೀಳುತ್ತೆ ಫೈನ್. ಘಾಟಿಯ ಉದ್ದಕ್ಕೂ ಅರಣ್ಯ ಇಲಾಖೆ ಕಾರ್ಯಾಚರಣೆ. ಸೋಮೇಶ್ವರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಪರಿಸರ ಮತ್ತು ಕಾಡು ಪ್ರಾಣಿ, ಪಕ್ಷಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಬಂದವರೆಲ್ಲ ಆಹಾರ ಕೊಡುತ್ತಿದ್ದರು ತೀರ್ಥಹಳ್ಳಿ – ಉಡುಪಿ ನಡುವೆ ಸಂಪರ್ಕ ಕಲ್ಪಿಸುವ ಆಗುಂಬೆ … Read more

SAGARA | 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧ, ಅದ್ಧೂರಿ ಸ್ವಾಗತ

080221 Retired Soldier Mahesh Welcomed at village sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 08 FEBRUARY 2021 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಮರಳಿದ ಬಿ.ಮಹೇಶ್ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಸಾಗರ ತಾಲೂಕು ಕರೂರು ಹೋಬಳಿಯ ಎಸ್.ಎಸ್.ಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಕೇರಿ ಗ್ರಾಮದ ಬಿ.ಮಹೇಶ್ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2004ರಲ್ಲಿ ಸೇನೆಗೆ ಸೇರಿದ ಮಹೇಶ್ ಅವರು ಜಮ್ಮು ಕಾಶ್ಮೀರ, ಪಂಜಾಬ್, ಮೈಸೂರು, ಲಡಾಕ್, ಛತ್ತೀಸ್‍ಗಢ, ದೆಹಲಿ, ಅಸ್ಸಾಂ, … Read more

BHADRAVATHI | ಅರಹತೊಳಲು ಕೈಮರದಲ್ಲಿ ರಸ್ತೆ ತಡೆ, ಕಾಯ್ದೆ ಹಿಂಪಡೆಯುವಂತೆ ಅಗ್ರಹ

060221 Raitha Sanga Protest in Shimoga 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 06 FEBRUARY 2021 ದೇಶಾದ್ಯಂತ ರೈತರು ನಡೆಸುತ್ತಿರುವ ಹೆದ್ದಾರಿ ಬಂದ್‍ ಹಿನ್ನೆಲೆ, ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕು ರೈತ ಸಂಘದ ವತಿಯಿಂದ ಹೆದ್ದಾರಿ ತಡೆ ನಡೆಸಲಾಯಿತು. ಭದ್ರಾವತಿ ತಾಲೂಕು ಅರಹತೊಳಲು ಕೈಮರದ ಎನ್‍.ಡಿ.ಸುಂದರೇಶ್ ವೃತ್ತದಲ್ಲಿ ರಸ್ತೆ ತಡೆ ಚಳವಳಿ ನಡೆಸಿದರು. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರೈತರು ಆಗ್ರಹಿಸಿದರು. ರೈತ ಸಂಘಟನೆ ಪ್ರಮುಖ ವಿರೇಶ್ ಸೇರಿದಂತ ಹಲವರು ಹೆದ್ದಾರಿ ತಡೆಯಲ್ಲಿ ಪಾಲ್ಗೊಂಡಿದ್ದರು. ಶಿವಮೊಗ್ಗ ಲೈವ್‍ಗೆ ಸುದ್ದಿ … Read more

THIRTHAHALLI | ಅಡಕೆ ಹಾಳೆ ತಟ್ಟೆಯಲ್ಲಿ ಅನ್ನ, ಮೊಟ್ಟೆ, ಕುಂಕುಮ, ವಾಮಾಚಾರದ ಶಂಕೆ

060221 Vamachara in Thirthahalli 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 06 FEBRUARY 2021 ತೀರ್ಥಹಳ್ಳಿಯ ಕುರುವಳ್ಳಿ ಪುತ್ತಿಗೆ ಮಠದ ತಿರುವಿನಲ್ಲಿ ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಡಕೆ ತಟ್ಟೆಯಲ್ಲಿ ಅನ್ನ ಮತ್ತು ಮೊಟ್ಟೆ ಇರಿಸಿ, ಕುಂಕುಮ ಹಾಕಿ ಇಡಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.14ರಲ್ಲಿ ಪ್ರಕರಣ ವರದಿಯಾಗಿದೆ. ಮೊಟ್ಟೆ ಮೇಲೆ ಕೆಲವು ಅಕ್ಷರಗಳನ್ನು ಬರೆಯಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಮೊಟ್ಟೆ ಮೇಲೆ ಏನೇನು ಬರೆಯಲಾಗಿದೆ ಎಂದು ಸ್ಪಷ್ಟವಾಗಿಲ್ಲ. ವಾಮಾಚಾರ ನಡೆದಿದೆ ಎಂಬ ಶಂಕೆ ಹಿನ್ನೆಲೆ, ಹೆಚ್ಚಿನ … Read more

THIRTHAHALLI | ಅಡಕೆ ನುಂಗಿ ಒಂದು ವರ್ಷದ ಮಗು ಸಾವು

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 06 FEBRUARY 2021 ಅಡಕೆ ನುಂಗಿ ಉಸಿರು ಕಟ್ಟಿ ಮಗುವೊಂದು ಸಾವನ್ನಪ್ಪಿದೆ. ಇವತ್ತು ಬೆಳಗ್ಗೆ ಘಟನೆ ನಡೆದಿದೆ. ತೀರ್ಥಹಳ್ಳಿ ತಾಲೂಕು ಹೆದ್ದೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಒಂದು ವರ್ಷ ಒಂದು ತಿಂಗಳ ಮಗು ನಿಶಾನ್ ಮೃತಪಟ್ಟಿದೆ. ಸಂದೇಶ ಮತ್ತು ಅರ್ಚನಾ ದಂಪತಿ ಮಗು ನಿಶಾನ್, ಆರೋಗ್ಯವಾಗಿತ್ತು. ಇವತ್ತು ಬೆಳಗ್ಗೆ ಅಡಕೆ ನುಂಗಿದ್ದರಿಂದ, ಉಸಿರುಕಟ್ಟಿದೆ. ಕೂಡಲೆ ಅಸುನೀಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದೇಶ್ ಅವರು ಲಾಕ್‍ ಡೌನ್ ಸಂದರ್ಭ ಊರಿಗೆ … Read more

SHIKARIPURA | ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ, ಬೆಲ್ಲದ ಕೊಳೆ ವಶಕ್ಕೆ

040221 Kallabatti Seized at Shikaripura 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 04 FEBRUARY 2021 ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 315 ಲೀಟರ್‍ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆದಿದ್ದಾರೆ. ಶಿಕಾರಿಪುರದ ಚಿಕ್ಕಮಾಗಡಿ ತಾಂಡ ಸಮೀಪದ ಜವಳಕಟ್ಟೆ ಕೆರೆ ಮತ್ತು ಕರೇಕಟ್ಟೆ ಕೆರೆಯ ದಡದಲ್ಲಿ ಕಳ್ಳಭಟ್ಟಿ ತಯಾರಿ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ  ಅಬಕಾರಿ ಇಲಾಖೆ ಅಧಿಕಾರಿಗಳು ಎರಡು ಕಡೆ ದಾಳಿ ನಡೆಸಿದ್ದರು. ಇದನ್ನೂ ಓದಿ | ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, … Read more

SAGARA | ನಡುರಸ್ತೆಯಲ್ಲಿ ಸಿಲಿಂಡರ್ ಇರಿಸಿ, ಬೈಕ್ ನಿಲ್ಲಿಸಿ ವಿಭಿನ್ನ ಪ್ರತಿಭಟನೆ

040221 Sagara Janamana Protest Against Price Raise 1

ಶಿವಮೊಗ್ಗ ಲೈವ್.ಕಾಂ | SAGARA NEWS | 04 FEBRUARY 2021 ನಡು ರಸ್ತೆಯಲ್ಲಿ ಸಿಲಿಂಡರ್ ಇರಿಸಿ, ಪೆಟ್ರೋಲ್ ಬೆಲೆ ಇಳಿಸಿ ಎಂಬ ಬೋರ್ಡ್ ತೂಗು ಹಾಕಿರುವ ವಾಹನ ನಿಲ್ಲಿಸಿ, ಬೆಲೆ ಏರಿಕೆ ವಿರುದ್ಧ ಸಾಗರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು. ಇದನ್ನೂ ಓದಿ | ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, ಧನ್ಯವಾದ ಶಿವಮೊಗ್ಗ ಪಟ್ಟಣದ ಸಾಗರ ಹೊಟೇಲ್ ಸರ್ಕಲ್‍ನಲ್ಲಿ  ಜನಮನ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ … Read more

SAGARA | ಗಣಪತಿ ಕೆರೆಯಲ್ಲಿ ನೀರು ನಾಯಿಗಳ ಚಿನ್ನಾಟ, ಕಣ್ತುಂಬಿಕೊಳ್ಳಲು ಬರ್ತಿದ್ದಾರೆ ಜನ, ಮೀನುಗಾರರಿಗೆ ಸಂಕಷ್ಟ

040221 NEERU NAYI at Sagara Ganapathi Kere 1

ಶಿವಮೊಗ್ಗ ಲೈವ್.ಕಾಂ | SAGARA NEWS | 04 FEBRUARY 2021 ಸಾಗರದ ಗಣಪತಿ ಕೆರೆಯಲ್ಲಿ ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ಇವುಗಳ ಚಲನವಲನ, ಚಿನ್ನಾಟವನ್ನು ಕಣ್ತುಂಬಿಕೊಳ್ಳಲು, ಮೊಬೈಲ್‍ನಲ್ಲಿ ಸೆರೆ ಹಿಡಿಯಲು ಹಲವರು ಕೆರೆ ಬಳಿಗೆ ಬರುತ್ತಿದ್ದಾರೆ. ಕಳೆದ ಕೆಲವು ದಿನದಿಂದ ದೊಡ್ಡ ಸಂಖ್ಯೆಯಲ್ಲಿ ನೀರು ನಾಯಿಗಳು ಗಣಪತಿ ಕೆರೆಯಲ್ಲಿ ಪ್ರತ್ಯಕ್ಷವಾಗಿವೆ. ಕೆರೆಯಲ್ಲಿ ಇರುವ ಮೀನುಗಳನ್ನ ಹಿಡಿದು ತಿನ್ನುತ್ತಿರುವ ನೀರು ನಾಯಿ, ಸ್ಥಳೀಯರ ಆಕರ್ಷಣೆಯಾಗಿವೆ. ಶರವಾತಿ ಹಿನ್ನೀರು, ವರದಾ ನದಿಗಳು ನೀರು ನಾಯಿಗಳ ಆವಾಸ ಸ್ಥಾನ. ವರದಾ ನದಿಯ … Read more

SORABA | ವಿದ್ಯುತ್ ಶರ್ಟ್ ಸರ್ಕಿಟ್, ಭತ್ತದ ಬಣವೆ, ಹುಲ್ಲು, ಕಬ್ಬಿನ ಹೊಲ ಭಸ್ಮ

ಶಿವಮೊಗ್ಗ ಲೈವ್.ಕಾಂ | SORABA NEWS | 04 FEBRUARY 2021 ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದಾಗಿ ಭತ್ತದ ಬಣವೆ, ಹುಲ್ಲು, ಕಬ್ಬಿನ ಹೊಲ ಬೆಂಕಿಗೆ ಆಹುತಿಯಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂ ನಷ್ಟವಾಗಿವೆ. ಸೊರಬ ತಾಲೂಕು ಹರೀಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಟಗಳಲೆ ಮತ್ತು ಮಂಡ್ಲಿಕೊಪ್ಪ ಗ್ರಾಮದಲ್ಲಿ  ಘಟನೆ ಸಂಭವಿಸಿದೆ. ವಿದ್ಯುತ್ ಶರ್ಟ್ ಸರ್ಕಿಟ್ ಸಂಭವಿಸಿ, ಕುಂಟಗಳಲೆ ತಿಮ್ಮಪ್ಪ ಅವರ 40 ಕ್ವಿಂಟಾಲ್ ಭತ್ತದ ಬಣವೆ, ಮಂಡ್ಲಿಕೊಪ್ಪದ ಭದ್ರಪ್ಪ ಅವರ ಅರ್ಧ ಎಕರೆ ಕಬ್ಬಿನ ಹೊಲ ಮತ್ತು … Read more

SAGARA | ತಾಳಗುಪ್ಪದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ, ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

030221 Talaguppa Road Block Protest 1

ಶಿವಮೊಗ್ಗ ಲೈವ್.ಕಾಂ | SAGARA NEWS | 03 FEBRUARY 2021 ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಸಾಗರ ತಾಲೂಕು ತಾಳಗುಪ್ಪದಲ್ಲಿ  ಇವತ್ತು ಪ್ರತಿಭಟನೆ ನಡೆಸಲಾಯಿತು. ರಸ್ತೆ ತಡೆ ನಡೆಸಿದ ಸ್ಥಳೀಯರು, ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸರಿಯಾಗಿ ಮಣ್ಣು ಹಾಕಿಲ್ಲ. ಗ್ರಾವೆಲ್ ಸರಿಯಾಗಿ ಆಗದೆ ಇರುವುದರಿಂದ ಅಪಘಾತಗಳು ಹೆಚ್ಚಾಗಿವೆ. ಇಕ್ಕೆಲಗಳಲ್ಲಿ ಸರಿಯಾಗಿ ಡಾಂಬರೀಕರಣವು ಆಗಿಲ್ಲ.  ಹಾಗಾಗಿ ರಸ್ತೆಯ ಅಂಚಿಗೆ ಬಂದು ಹಲವು ದ್ವಿಚಕ್ರ ವಾಹನ ಸವಾರರು … Read more