ಶಿವಮೊಗ್ಗ ತಾಲೂಕು ಕುಂಚೇನಹಳ್ಳಿಯಲ್ಲಿ ನಾಡಬಾಂಬ್ ಸ್ಫೋಟ, ಎಂಟು ಮಂದಿಗೆ ಗಾಯ

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 NOVEMBER 2020 ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ಗ್ರಾಮದಲ್ಲಿ ನಾಡಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಎಂಟು ಮಂದಿಗೆ ಗಾಯವಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಗಾಯ್ತು ಘಟನೆ? ಜಮೀನು ಒಂದರಲ್ಲಿ ಇಸ್ಪೀಟ್ ಆಡಲು ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ದಿಢೀರ್ ಸ್ಫೋಟ ಸಂಭವಿಸಿದ್ದು, ಎಂಟು ಮಂದಿಗೆ ಗಾಯವಾಗಿದೆ. ಜಮೀನಿನ ಮಾಲೀಕನಿಗೆ ಗಂಭೀರ ಗಾಯವಾಗಿದೆ. ಅಲ್ಲಿ ನಾಡ ಬಾಂಬ್ ಏಕಿತ್ತು? ಹಂದಿ ಬೇಟೆಗಾಗಿ ನಾಡಬಾಂಬ್ … Read more

ಸಾಲ ವಸೂಲಿಗೆ ಮನಗೆ ಬಳಿ ಬಂದು ಗೂಂಡಾಗಿರಿ, ಮೈಕ್ರೋ ಫೈನಾನ್ಸ್ ವಿರುದ್ಧ ಆಕ್ರೋಶ

311020 Micro Finance Protest in Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 31 ಅಕ್ಟೋಬರ್ 2020 ಸಾಲ ವಸೂಲಾತಿ ನೆಪದಲ್ಲಿ ಸಾಲ ಪಡೆದವರ ಮನೆಗಳ ಬಳಿಗೆ ಬಂದು ಗೂಂಡಾಗಿರಿ, ದೌರ್ಜನ್ಯ ಎಸಗುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಋಣ ಮುಕ್ತ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು, ಕೆಲವು ಮೈಕ್ರೋಫೈನಾನ್ಸ್ ಸಂಸ್ಥೆಗಳು ಸರ್ಕಾರದಿಂದ ಸಹಾಯ, ಸೌಲಭ್ಯ, ತೆರಿಗೆ ವಿನಾಯಿತಿ … Read more

ಸಿಗಂದೂರು ದೇಗುಲ ನಿರ್ವಹಣೆಗೆ ಸಮಿತಿ, ಮೊದಲ ಬಾರಿ ಮೌನ ಮುರಿದ ಧರ್ಮದರ್ಶಿ ರಾಮಪ್ಪ

301020 Siganduru Temple Dharmadarshi Ramappa 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಅಕ್ಟೋಬರ್ 2020 ಸಿಗಂದೂರು ಚೌಡೇಶ್ವರಿ ದೇವಸ್ಥಾನದ ನಿರ್ವಹಣೆಗೆ ಸರ್ಕಾರ ರಚಿಸಿರುವ ಸಮಿತಿಯ ಮೊದಲ ಸಭೆ ನಡೆದ ಬೆನ್ನಿಗೆ, ಧರ್ಮದರ್ಶಿ ರಾಮಪ್ಪ ಮೌನ ಮರಿದಿದ್ದಾರೆ. ಸಮಿತಿ ವಿಚಾರವಾಗಿ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದ ಈಡಿಗ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರು, ಸಮಿತಿಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ಈಡಿಗ ಸಮುದಾಯ ಪ್ರತಿಭಟಿಸಬೇಕು ಎಂದು ಕರೆ … Read more

ಸಿಗಂದೂರು ದೇವಸ್ಥಾನಕ್ಕೆ ಭಕ್ತರು ಕೊಡುವ ಕಾಣಿಕೆ, ಚಿನ್ನಾಭರಣ ದುರುಪಯೋಗ ಆಗದಂತೆ ತಡೆಯಲು ಸಮಿತಿ

Yedyurappa at Vinobhanagara General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಅಕ್ಟೋಬರ್ 2020 ಸಿಗಂದೂರು ದೇವಸ್ಥಾನಕ್ಕೆ ಭಕ್ತರು ಕೊಡುವ ದೇಣಿಗೆ, ಚಿನ್ನಾಭರಣ ಯಾವುದು ಕೂಡ ದುರಪಯೋಗ ಆಗಬಾರದು ಎಂದು ತಡೆಯಲು ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. VIDEO REPORT ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಜಿಲ್ಲಾಧಿಕಾರಿ ಅವರನ್ನು ದೇವಸ್ಥಾನಕ್ಕೆ ಕಳುಹಿಸಿ ವಾಸ್ತವ ಪರಿಸ್ಥಿತಿ ಅರಿತುಕೊಳ್ಳಲು ತಿಳಿಸಿದ್ದೇನೆ ಎಂದರು. ಈಗಾಗಲೇ ಸಮಿತಿ ರಚಿಸಲಾಗಿದೆ. ಕಾಣಿಕೆ ಹಣ, ಚಿನ್ನಾಭರಣ, ದೇವಸ್ಥಾನದ ಆದಾಯ ದುರುಪಯೋಗ ಆಗದಂತೆ ನೋಡಿಕೊಂಡು, ಭಕ್ತರ … Read more

ಬಂಗಾರಪ್ಪ ಅವರ ಮೊದಲ ಪ್ರತಿಮೆ, ಪಾರ್ಕ್ ಉದ್ಘಾಟನೆಗೆ ಸಿದ್ಧ, ಹೇಗಿದೆ ಪಾರ್ಕ್?

251020 Soraba Bangarappa Park Set to Inauguration 1

ಶಿವಮೊಗ್ಗ ಲೈವ್.ಕಾಂ | SORABA NEWS | 25 ಅಕ್ಟೋಬರ್ 2020 ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಮೊದಲ ಪ್ರತಿಮೆ ಉದ್ಘಾಟನೆಗೆ ಸಿದ್ಧವಾಗಿದೆ. ಇದರೊಂದಿಗೆ ಪಟ್ಟಣದ ಹೃದಯ ಭಾಗದಲ್ಲಿ ಬಂಗಾರಪ್ಪ ಅವರ ಹೆಸರಿನ ಪಾರ್ಕ್ ಕೂಡ ಲೋಕಾರ್ಪಣೆಗೊಳ್ಳಲಿದೆ. VIDEO REPORT ಸೊರಬ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಬಂಗಾರಪ್ಪ ಪಾರ್ಕ್ ಸಿದ್ಧಪಡಿಸಲಾಗಿದೆ. ಪಾರ್ಕ್‍ನ ಮಧ್ಯ ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲಿ ಇದೆ ಮೊದಲ ಬಾರಿಗೆ ಬಂಗಾರಪ್ಪ ಅವರ ಪ್ರತಿಮೆ ಸಿದ್ಧವಾಗಿದೆ. ಹೇಗಿದೆ … Read more

ಎಂಪಿಎಂ ಕ್ವಾರ್ಟರ್ಸ್ ಖಾಲಿ ಮಾಡುವಂತೆ ನೊಟೀಸ್, ಡೆಡ್ ಲೈನ್ ಫಿಕ್ಸ್, ಕಾರಣವೇನು?

MPM Factory Bhadravathi

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 25 ಅಕ್ಟೋಬರ್ 2020 ಎಂಪಿಎಂ ಕ್ವಾರ್ಟರ್ಸ್‍ಗಳಲ್ಲಿ ವಾಸವಾಗಿರುವ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಮನೆ ಮತ್ತು ನಗರಾಡಳಿತ ವ್ಯಾಪ್ತಿಯ ಅಂಗಡಿ ಮಳಿಗೆಗಳನ್ನು ಖಾಲಿ ಮಾಡುವಂತೆ ನೊಟೀಸ್ ಜಾರಿ ಮಾಡಲಾಗಿದೆ. ನವೆಂಬರ್ 30 ಕೊನೆಗೆ ದಿನ ನಿವಾಸಿಗಳು ಬಾಕಿ ಬಾಡಿಗೆಯನ್ನು ಪಾವತಿ ಮಾಡಿ ಕೂಡಲೆ ಖಾಲಿ ಮಾಡಬೇಕು ಎಂದು ನೊಟೀಸ್‍ನಲ್ಲಿ ತಿಳಿಸಲಾಗಿದೆ. ನವೆಂಬರ್ 30ರವರೆಗೆ ಗಡುವು ನೀಡಲಾಗಿದೆ. ಇಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ಆಡಳಿತಾಧಿಕಾರಿಗಳು ನೊಟೀಸ್‍ನಲ್ಲಿ … Read more

ಸಕ್ರೆಬೈಲು ಬಿಡಾರದ ರಂಗನ ಮೇಲೆ ಕಾಡಾನೆಗಳ ದಾಳಿ, ಸ್ಥಳದಲ್ಲೇ ಸಾವು

241020 Ranga Elephant Dies in Sakrebyle 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಅಕ್ಟೋಬರ್ 2020 ಕಾಡಾನೆ ದಾಳಿಗೆ ತುತ್ತಾಗಿ ಸಕ್ರೆಬೈಲಿನ ಸಾಕಾನೆ ರಂಗ (35) ಮೃತಪಟ್ಟಿದೆ. ಕಾಡಿನಲ್ಲಿದ್ದ ವೇಳೆ ರಂಗನ ಮೇಲೆ ದಾಳಿಯಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದೆ. ಉಳಿದ ಆನೆಗಳಂತೆ ರಾತ್ರಿ ರಂಗನನ್ನು ಕಾಡಿಗೆ ಬಿಡಲಾಗಿತ್ತು. ಈ ವೇಳೆ ಕಾಡಾನೆಗಳು ದಾಳಿಯಾಗಿದೆ. ರಂಗನಿಗೆ ಸರಪಳಿಯಿಂದ ಕಟ್ಟಲಾಗಿತ್ತು. ಹಾಗಾಗಿ ದಾಳಿಯಿಂದ ತಪ್ಪಿಸಿಕೊಳ್ಳಲು ಸಾದ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಬೆಳಗ್ಗೆ ಮಾವುತರು ಆನೆಗಳನ್ನು ಬಿಡಾರಕ್ಕೆ ಕರೆದುಕೊಂಡು ಬರಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳು, ವೈದ್ಯರು … Read more

‘ಶೇಷಗಿರಿ ಭಟ್ ಹಠಾವೋ, ಸಿಗಂದೂರು ಬಚಾವೊ ಘೋಷಣೆಯೊಂದಿಗೆ ಸಿಗಂದೂರು ಚಲೋ’

Siganduru-Temple-General-Image

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಅಕ್ಟೋಬರ್ 2020 ಶೇಷಗಿರಿ ಭಟ್ ಹಠಾವೊ, ಸಿಗಂದೂರು ಬಚಾವೋ ಘೋಷಣೆಯೊಂದಿಗೆ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ವತಿಯಿಂದ ಸಿಗಂದೂರು ಚಲೋ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸೈದಪ್ಪ ಗುತ್ತೇದಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೈದಾಪುರ ಗುತ್ತೇದಾರ್ ಅವರು, ಶೇಷಗಿರಿ ಭಟ್ ಅವರ ಸಹೋದರ ದೇವಸ್ಥಾನದಲ್ಲಿ ಮಾಡಿದ ರಂಪಾಟ, ಹಲ್ಲೆ ವಿರುದ್ಧ ಜಿಲ್ಲಾಧಿಕಾರಿ ಅವರು ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 29ರಂದು ಸಿಗಂದೂರು ಲಾಂಚ್‍ನಿಂದ ದೇವಸ್ಥಾನದವರೆಗೆ … Read more

ಸಿಗಂದೂರು ದೇವಸ್ಥಾನ ಮೇಲುಸ್ತುವಾರಿಗೆ ಸಮಿತಿ, ಯಾರೆಲ್ಲ ಇದ್ದಾರೆ? ಸಮಿತಿ ಉದ್ದೇಶವೇನು?

Siganduru-Temple-General-Image

ಶಿವಮೊಗ್ಗ ಲೈವ್.ಕಾಂ | SHIMOGA /  SAGARA NEWS | 24 ಅಕ್ಟೋಬರ್ 2020 ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರ ಸಮಿತಿ ರಚಿಸಿದೆ. ದೇಗುಲದ ಆಡಳಿತಕ್ಕೆ ಸಲಹೆ ನೀಡಲು ಮತ್ತು ಮೇಲ್ವಿಚಾರಣೆಯ ಉದ್ದೇಶದಿಂದ ಈ ಸಮಿತಿ ಕಾರ್ಯನಿರ್ವಹಿಸಲಿದೆ. ಮುಂದಿನ ವಾರ ಸಮಿತಿಯ ಮೊದಲ ಸಭೆ ನಡೆಯಲಿದೆ. ಈ ಸಮಿತಿಯು ದೇವಸ್ಥಾನದ ದೈನಂದಿನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಬದಲಾಗಿ ದೇವಸ್ಥಾನಲ್ಲಿ ಯಾವುದೆ ಗೊಂದಲ ಆಗಬಾರದು ಎಂದು ತಡೆಯುವುದು ಇದರ ಉದ್ದೇಶ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ … Read more

ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ, ಇಬ್ಬರು ಅರೆಸ್ಟ್, ಚಿನ್ನ, ಬೆಳ್ಳಿ ಆಭರಣಗಳು ವಶಕ್ಕೆ

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಅಕ್ಟೋಬರ್ 2020 ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ತಾಲೂಕು ಅಗರದಹಳ್ಳಿಯ ಶಶಿಕುಮಾರ್ (26) ಮತ್ತು ದೊಡ್ಡೇರಿಯ ರವಿ (29) ಬಂಧಿತರು. ಇವರಿಂದ 2.30 ಲಕ್ಷ ರೂ. ಮೌಲ್ಯದ 56 ಗ್ರಾಂ ಚಿನ್ನಾಭರಣ, 2 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳು, ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಕ್ಕೆ ಪಡೆಯಲಾಗಿದೆ. ಡಿವೈಎಸ್‍ಪಿ ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆ ಸಿಪಿಐ ಮಂಜುನಾಥ್, … Read more