ಬೆಜ್ಜವಳ್ಳಿ, ಮಾಳೂರು, ತೂದೂರು ಆಟೋ ಚಾಲಕರಿಗೆ ಇಬ್ಬರು ಯುವಕರಿಂದ ರೇಷನ್ ಕಿಟ್

031020 Ration Kit For Auto Drivers in Thirthahalli 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 3 ಅಕ್ಟೋಬರ್ 2020 ಒಂದೆಡೆ ಕರೋನ ಲಾಕ್‍ಡೌನ್ ಪೆಟ್ಟು, ಮತ್ತೊಂದೆಡೆ ಕುಂಟುತ್ತಿರುವ ಬಿಸ್ನೆಸ್. ಇದರಿಂದ ಸಂಕಷ್ಟಕ್ಕೀಡಾದ ಆಟೋ ಮತ್ತು ಲಗೇಜ್ ಆಟೋ ಚಾಲಕರಿಗೆ ಇಬ್ಬರು ಯುವಕರು ರೇಷನ್ ಕಿಟ್ ಹಂಚಿದ್ದಾರೆ. ಗಾಂಧಿ ಜಯಂತಿ ಅಂಗವಾಗಿ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಬೆಜ್ಜವಳ್ಳಿ, ಮಾಳೂರು, ತೂದೂರು ಭಾಗದ ಚಾಲಕರಿಗೆ ರೇಷನ್ ಕಿಟ್ ಹಂಚಲಾಯಿತು. ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್‍ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ ಮತ್ತು ಹುಂಚದಕಟ್ಟೆ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ … Read more

ಶಿವಮೊಗ್ಗದ 201 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕ, ಜಾಗ ಫೈನಲ್, ಏನದು ಘಟಕ? ಹೇಗಿರುತ್ತೆ?

021020 Swacha Sankirna at holaluru Eshwarappa 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಅಕ್ಟೋಬರ್ 2020 ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಹೊಳಲೂರು ಗ್ರಾಮ ಪಂಚಾಯತ್‍ನಲ್ಲಿ ಸ್ವಚ್ಚ ಸಂಕೀರ್ಣ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ 271 ಗ್ರಾಮ ಪಂಚಾಯತ್‍ಗಳ ಪೈಕಿ 201 ಗ್ರಾಮ ಪಂಚಾಯತ್‍ಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕ ಸ್ಥಾಪನೆಗೆ ಈಗಾಗಲೇ ಜಮೀನು ಗುರುತಿಸಲಾಗಿದ್ದು, ಕೆಲವು ಕಡೆಗಳಲ್ಲಿ … Read more

ತೀರ್ಥಹಳ್ಳಿ ತಾಲೂಕು ಕಚೇರಿ ಮುಂದೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸತ್ಯಾಗ್ರಹ

021020 Kimmane Rathnakar Satyagraha in Thirthahalli 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 2 ಅಕ್ಟೋಬರ್ 2020 ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವುದು, ಯಾವುದೆ ಚರ್ಚೆ ಮಾಡದೆ ಹಲವು ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಜಾರಿಗೆ ತಂದಿರುವನ್ನು ಖಂಡಿಸಿ ಗಾಂಧಿ ಜಯಂತಿ ಅಂಗವಾಗಿ ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಉಪವಾಸ ಸತ್ಯಾಗ್ರಹ ನಡೆಸಿದರು. ತಾಲೂಕು ಕಚೇರಿ ಮುಂದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ … Read more

ಭದ್ರಾವತಿಯಲ್ಲಿ ಕಿಸಾನ್ , ಮಜ್ದೂರ್ ಬಚಾವೋ ದಿವಸ್, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ

021020 Congress Kisan Divas at Bhadravathi 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 2 ಅಕ್ಟೋಬರ್ 2020 ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ, ಭದ್ರಾವತಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕಿಸಾನ್ – ಮಜ್ದೂರ್ ಬಚಾವೋ ದಿವಸ್ ಆಚರಿಸಲಾಯಿತು. ತಾಲೂಕು ಕಚೇರಿ ಆವರಣದಲ್ಲಿ ಭದ್ರಾವತಿ ಕಾಂಗ್ರೆಸ್ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಮಾಡಲಾಯಿತು. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದನ್ನು … Read more

ಅರಕೆರೆ ದೇವಸ್ಥಾನದಲ್ಲಿ ಗಣಪತಿ ಮೂರ್ತಿ ಹೊಟ್ಟೆಗೆ ಸುತ್ತಿಕೊಂಡಿದ್ದ ನಾಗರ ಹಾವು

011020 Snake At Arakere Temple 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಅಕ್ಟೋಬರ್ 2020 ದೇವಸ್ಥಾನದ ಗರ್ಭಗುಡಿಯೊಳಗೆ ಗಣಪತಿ ಮೂರ್ತಿಯ ಹೊಟ್ಟೆಗೆ ಸುತ್ತಿಕೊಂಡು ಕೂತಿದ್ದ ನಾಗರ ಹಾವನ್ನು ಉರಗ ತಜ್ಞ ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ. ಹಾವು ಕಂಡು ಅರ್ಚಕರು ಮತ್ತು ಭಕ್ತರು ಭಯಗೊಂಡಿದ್ದರು. ಶಿವಮೊಗ್ಗದ ಅರಕೆರೆ ಶ್ರೀ ರಾಮೇಶ್ವರ ದೇವಸ್ಥಾನದ ಗರ್ಭಗುಡಿಯೊಳಗೆ ಗಣಪತಿ ಮೂರ್ತಿಯ ಹೊಟ್ಟೆಗೆ ನಾಗರ ಹಾವು ಸುತ್ತಿಕೊಂಡಿತ್ತು. ಇದನ್ನು ಗಮನಿಸಿ ಅರ್ಚಕರು ಆತಂಕಕ್ಕೀಡಾದರು. ಕೂಡಲೆ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಡಿ ವಿಚಾರ ತಿಳಿಸಿದ್ದರು. … Read more

36 ಮಂಗಗಳಿಗೆ ವಿಷವಿಟ್ಟು ಹತ್ಯೆ, ಐವರು ಅರೆಸ್ಟ್, ಹತ್ಯೆಗೇನು ಕಾರಣ? ಸಿಕ್ಕಿಬಿದ್ದಿದ್ದು ಹೇಗೆ?

011020 Monkeys killed Near Anandapuram 1

ಶಿವಮೊಗ್ಗ ಲೈವ್.ಕಾಂ | SAGARA NEWS | 1 ಅಕ್ಟೋಬರ್ 2020 ಬೆಳೆ ನಾಶ ಮಾಡುತ್ತಿದ್ದ 36 ಮಂಗಗಳಿಗೆ ವಿಷವುಣಿಸಿ ಹತ್ಯೆ ಮಾಡಿದ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಸಾಗರ ತಾಲೂಕು ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪ್ಪಳಿ ಕಾಡಿನಲ್ಲಿ ಘಟನೆ ನಡೆದಿದೆ. ಐವರು ಅರೆಸ್ಟ್ ಆಗಿದ್ದು ಹೇಗೆ? ಮಂಗಗಳಿಗೆ ವಿಷವುಣಿಸಿ ಹತ್ಯೆ ಮಾಡಿ, ಅವುಗಳ ಮೃತದೇಹವನ್ನು ಎಸೆಯಲು ಆಗಮಿಸಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಂಧಿತರಿಂದ ಒಂದು ಕಾರು, … Read more

ಹುಲಿಕಲ್ ಘಾಟಿಯಲ್ಲಿ 400 ಅಡಿ ಪ್ರಪಾತಕ್ಕೆ ಉರುಳಿದ ಲಾರಿ

011020 Lorry Fallen To Hulikal Ghat 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 1 ಅಕ್ಟೋಬರ್ 2020 ಹುಲಿಕಲ್ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಸುಮಾರು 400 ಅಡಿ ಪ್ರಪಾತಕ್ಕೆ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಬದುಕುಳಿದಿದ್ದಾನೆ. ಹೇಗಾಯ್ತು ಘಟನೆ? ಮಂಗಳೂರಿನಿಂದ ಶಿವಮೊಗ್ಗದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕೋಕ್ ತುಂಬಿಕೊಂಡು ಲಾರಿ ಬರುತ್ತಿತ್ತು. ಬೆಳಗಿನ ಜಾವ ಘಾಟಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಲಾರಿ ಪ್ರಪಾತಕ್ಕೆ ಉರುಳಿದೆ. ಲಾರಿ ಚಾಲಕ ಪಾರು ಅಪಘಾತದ ದೃಶ್ಯ ಗಮನಿಸಿದರೆ ಒಳಗಿದ್ದವರು ಬದುಕುವ ಸಾಧ್ಯತೆ ಕಡಿಮೆ. … Read more

GOOD NEWS | ರಾಜ್ಯದಲ್ಲೇ ಮೊದಲ ಬಾರಿಗೆ ಕರೋನ ವಾರ್ಡ್‌ನಲ್ಲಿ ಡಿಫರೆಂಟ್ ಪ್ರಯೋಗ

011020 Sagara Hospital Corona Ward Library 1

ಶಿವಮೊಗ್ಗ ಲೈವ್.ಕಾಂ | SAGARA NEWS | 1 ಅಕ್ಟೋಬರ್ 2020 ರಾಜ್ಯದಲ್ಲೇ ಮೊದಲ ಬಾರಿಗೆ ಕರೋನ ವಾರ್ಡ್‍ನಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಆರೋಗ್ಯ ಇಲಾಖೆ ನೌಕರರು ಗ್ರಂಥಾಲಯ ಆರಂಭಿಸಿ, ಕರೋನ ಸೋಂಕಿತರಿಗೆ ಚಿಕಿತ್ಸೆ ವೇಳೆ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಮನೋಲ್ಲಾಸ ನೀಡುವ ಪುಸ್ತಕಗಳು ಗ್ರಂಥಾಲಯದಲ್ಲಿ ಮನೋಲ್ಲಾಸ ನೀಡುವ ಪುಸ್ತಕಗಳನ್ನು ಇರಿಸಲಾಗುತ್ತಿದೆ. ಚಿಕಿತ್ಸೆಗೆ ದಾಖಲಾದವರು ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆದು ಓದಬಹುದಾಗಿದೆ. ಇದರಿಂದ ಚಿಕಿತ್ಸೆ ಅವಧಿಯಲ್ಲಿ ಬೇಸರ ಕಳೆಯಲಿದೆ. ಅಲ್ಲದೆ ಅನ್ಯ ಯೋಚನೆಗಳಿಂದ ಮಾನಸಿಕವಾಗಿ ಕುಗ್ಗುವುದು ತಪ್ಪಲಿದೆ. ಎಂಎಲ್‍ಎ, … Read more

ಮಾಸ್ಕ್ ಧರಿಸಿಲ್ಲ ಅಂತಾ ದಂಡ ಹಾಕಿದ್ದಕ್ಕೆ ಪೊಲೀಸರ ಬೈಕನ್ನೆ ಕದ್ದು ಪರಾರಿ

Hosanagara Police Station General Image 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 26 ಸೆಪ್ಟಂಬರ್ 2020 ಮಾಸ್ಕ್ ಹಾಕಿಲ್ಲ ಅಂತಾ ದಂಡ ಹಾಕಿದ್ದಕ್ಕೆ ಪೊಲೀಸರ ಬೈಕನ್ನೆ ಕಳ್ಳತನ ಮಾಡಿ ಯುವಕನೊಬ್ಬ ಪರಾರಿಯಾಗಿದ್ದಾನೆ. ಎರಡು ದಿನದ ಹಿಂದೆ ಹೊಸನಗರ ಪೊಲೀಸ್ ಠಾಣೆ ಮುಂಭಾಗ ಘಟನೆ ಸಂಭವಿಸಿದೆ. ಮಾಸ್ಕ್ ಕಾರ್ಯಾಚರಣೆ ಜಿಲ್ಲೆಯಾದ್ಯಂತ ಪೊಲೀಸರು ಮಾಸ್ಕ್ ಕಾರ್ಯಾಚರಣೆ ನಡೆಯುತ್ತಿದೆ. ಮಾಸ್ಕ್ ಧರಿಸದೆ ಓಡಾಡುವವರನ್ನು ಹಿಡಿದು ಪೊಲೀಸರು ದಂಡ ಹಾಕುತ್ತಿದ್ದಾರೆ. ಈ ಕಾರ್ಯಾಚರಣೆ ವೇಳೆ ಹೊಸನಗರದಲ್ಲಿ ಯುವಕನೊಬ್ಬನ್ನು ಹಿಡಿದು ದಂಡ ವಿಧಿಸಿದ್ದರು. ದಂಡ ಕಟ್ಟಿ ಠಾಣೆಯಿಂದ ಹಿಂತಿರುಗುವ … Read more

ರಿಪ್ಪನ್‌ಪೇಟೆ, ಸೊರಬ ಪೊಲೀಸರ ದಾಳಿ, ಗಾಂಜಾ ಗಿಡಗಳು ವಶಕ್ಕೆ, ಒಬ್ಬ ಅರೆಸ್ಟ್, ಮತ್ತೊಬ್ಬ ಎಸ್ಕೇಪ್

260920 Soraba Police Raid On Ganja 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಸೆಪ್ಟಂಬರ್ 2020 ಸೊರಬ ಮತ್ತು ಹೊಸನಗರ ತಾಲೂಕು ರಿಪ್ಪನ್‍ಪೇಟೆಯಲ್ಲಿ ಪೊಲೀಸರು ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಸೊರಬ ರಿಪೋರ್ಟ್ ಹೆಚ್ಚೆ ಗ್ರಾಮದಲ್ಲಿ ಜಯಪ್ಪ ಎಂಬಾತ ಶುಂಠಿ ಬೆಳೆಯ ನಡುವೆ ಗಾಂಜಾ ಬೆಳೆದಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ದಾಳಿ ನಡೆಸಿ 20 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಜಯಪ್ಪ ಪರಾರಿಯಾಗಿದ್ದು, ಈತನ ಪತ್ತೆ ಕಾರ್ಯ ನಡೆಯುತ್ತಿದೆ. ಎಎಸ್‍ಪಿ ಶ್ರೀನಿವಾಸಲು, … Read more