ಬೆಜ್ಜವಳ್ಳಿ ಸಮೀಪ ನಾಯಿ ದಾಳಿಗೆ ತುತ್ತಾಗಿದ್ದ ಜಿಂಕೆ ರಕ್ಷಣೆ

250620 Deer Rescued at Bejjavalli 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 25 ಸೆಪ್ಟಂಬರ್ 2020 ನಾಯಿ ದಾಳಿಗೆ ತುತ್ತಾಗಿದ್ದ ಜಿಂಕೆಯೊಂದನ್ನು ರಕ್ಷಿಸಿ ವಾಪಸ್ ಕಾಡಿಗೆ ಬಿಡಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೈನುಸರದ ಪಾರ್ವತಿ ಎಂಬುವವರ ತೋಟದಲ್ಲಿ ನಾಯಿಗಳ ದಾಳಿಗೆ ಸಿಲುಕಿದ್ದ ಜಿಂಕೆಯನ್ನು ರಕ್ಷಿಸಲಾಗಿದೆ. ಅರಣ್ಯ ಇಲಾಖೆಯ ಸಹಾಯದಿಂದ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚೈತನ್ಯ, ಸುಧಾಕರ ಶೆಟ್ಟಿ, ದಿವಾಕರ ಶೆಟ್ಟಿ, ಶ್ರೀಮತಿ ಪಾರ್ವತಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ … Read more

ಗಾಜನೂರು ಸಮೀಪ ಅಬಕಾರಿ ಇಲಾಖೆ ದಾಳಿ, ಜಮೀನಿನಲ್ಲಿ ಬೆಳೆದಿದ್ದ 75 ಸಾವಿರ ಮೌಲ್ಯದ ಗಾಂಜಾ ಗಿಡ ವಶಕ್ಕೆ

250920 Ganja Raid by Excise Department 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಸೆಪ್ಟಂಬರ್ 2020 ಮಾರಾಟದ ಉದ್ದೇಶದಿಂದ ಜಮೀನಿನಲ್ಲಿ ಬೆಳೆದ ಗಾಂಜಾ ಗಿಡಗಳನ್ನು ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಗಾಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲಮನೆ ಗ್ರಾಮದಲ್ಲಿ ದಾಳಿ ನಡೆಸಲಾಯಿತು. ಮೂಡಲಮನೆ ಟಿ.ಆರ್.ಮಂಜುನಾಥ್ ಎಂಬಾತ ಇಲ್ಲಿನ ಸರ್ವೆ ನಂಬರ್ 27ರಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಹನ್ನೊಂದು ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 75 ಸಾವಿರ ರೂ. ಎಂದು … Read more

ಆಯನೂರು ಸರ್ಕಲ್‌ನಲ್ಲಿ ಬೈಕ್‌ಗೆ ಜೀಪ್ ಡಿಕ್ಕಿ, ನವುಲೆ ಯುವಕ ಸಾವು

240920 Jeep Bike Accident at Ayanur Circle 1

ಶಿವಮೊಗ್ಗ ಲೈವ್.ಕಾಂ | AYANUR NEWS | 24 ಸೆಪ್ಟಂಬರ್ 2020 ಆಯನೂರು ಸರ್ಕಲ್‍ನಲ್ಲಿ ಡಿಯೋ ಬೈಕ್‍ಗೆ ಜೀಪ್‍ ಡಿಕ್ಕಿ ಹೊಡೆದು ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವುಲೆಯ ರವಿಕುಮಾರ್ (20) ಮೃತ ಯುವಕ. ಸ್ನೇಹಿತನೊಬ್ಬನ ಮನೆಗೆ ಹೋಗಿ ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಆಯನೂರು ಸರ್ಕಲ್‍ ಬಳಿ ಎದುರಿನಿಂದ ವೇಗವಾಗಿ ಬಂದ ಜೀಪ್‍ ರವಿಕುಮಾರ್ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತಲೆ ಮತ್ತು ಎದೆ ಭಾಗಕ್ಕೆ ಗಂಭಿರ … Read more

ರಂಜದಕಟ್ಟೆ ಸೇತುವೆ ಸಂಪೂರ್ಣ ಕುಸಿತ, ವಾಹನ ಸಂಚಾರಕ್ಕೆ ಪೊಲೀಸರಿಂದ ಪರ್ಯಾಯ ಮಾರ್ಗ

240920 Ranjadakatte Bridge Collapse 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 24 ಸೆಪ್ಟಂಬರ್ 2020 ಶಿಥಿಲವಾಗಿದ್ದ ತೀರ್ಥಹಳ್ಳಿ ತಾಲೂಕು ರಂಜದಕಟ್ಟೆ ಸೇತುವೆ ಈಗ ಸಂಪೂರ್ಣ ಕುಸಿದಿದೆ. ಹಾಗಾಗಿ ತೀರ್ಥಹಳ್ಳಿ ಆಗುಂಬೆ ನಡುವಿನ ರಾಷ್ಟ್ರೀಯ ಹೆದ್ದಾರಿ 169ಎ ಸಂಪರ್ಕ ಕಡಿತವಾದಂತಾಗಿದೆ. ರಂಜದಕಟ್ಟೆ ಸೇತುವೆ ಕುಸಿಯುವ ಹಂತಕ್ಕೆ ತಲುಪಿತ್ತು. ಹಾಗಾಗಿ ಸೇತುವೆ ಮೇಲೆ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಮಧ್ಯಾಹ್ನದ ವೇಲೆ ಸೇತುವೆ ಸಂಪೂರ್ಣ ಕುಸಿದಿದೆ. ಸೇತುವೆ ಒಂದು ಕಮಾನು ಪೂರ್ಣ ಕುಸಿದಿದ್ದು, ರಸ್ತೆ ಸಂಪರ್ಕ ಕಡಿತವಾದಂತಾಗಿದೆ. ಪರ್ಯಾಯ ಮಾರ್ಗ ಇನ್ನು, … Read more

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಕೆಳಗಿಳಿದ ಮೂವರು ಸಾವು, ಕಾರಿನಲ್ಲಿದ್ದ ಮೂವರ ರಕ್ಷಣೆ, ಹೇಗಾಯ್ತು ಘಟನೆ?

240920 Garthikere Car Accident 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 24 ಸೆಪ್ಟಂಬರ್ 2020 ತಾಲೂಕು ಗರ್ತಿಕೆರೆ ಗ್ರಾಮದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು, ಕಾರಿನಿಂದ ಕೆಳಗಿಳಿದವರು ಸಾವನ್ನಪ್ಪಿದ್ದಾರೆ. ಆತಂಕದಿಂದ ಕಾರಿನಲ್ಲೇ ಕುಳಿತ ಮೂವರ ರಕ್ಷಣೆ ಮಾಡಲಾಗಿದೆ. ಹೇಗಾಯ್ತು ಅಪಘಾತ? ಹೊಸನಗರ ಕಡೆಯಿಂದ ರಾತ್ರಿ ರಿಪ್ಪನ್‍ಪೇಟೆಗೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಶೀಲಿಸಲು ಕಾರಿನಿಂದ ಕೆಳಗಿಳಿದ ಚಾಲಕ ಲೋಹಿತ್ (34) ದಿಢೀರ್ ಕುಸಿದು ಬಿದ್ದಿದ್ದಾರೆ. … Read more

ತೀರ್ಥಹಳ್ಳಿಯ ರಂಜದಕಟ್ಟೆಯಲ್ಲಿ ಶತಮಾನದ ಸೇತುವೆ ಕುಸಿತ, ಉಡುಪಿ, ಮಂಗಳೂರು ಸಂಪರ್ಕ ಕಟ್

240920 Ranajadakatte Bridge Collapse 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 24 ಸೆಪ್ಟಂಬರ್ 2020 ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆಯಲ್ಲಿ ಸೇತುವೆ ಕುಸಿದಿದ್ದು ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದರಿಂದ ತೀರ್ಥಹಳ್ಳಿ, ಉಡುಪಿ, ಮಂಗಳೂರು ನಡುವೆ ರಾಷ್ಟ್ರೀಯ ಹೆದ್ದಾರಿ 169ಎ ಸಂಪರ್ಕ ಕಡಿತವಾಗಿದೆ. ನೂರು ವರ್ಷ ಹಳೆ ಸೇತುವೆ ಜೋರು ಮಳೆ ಮತ್ತು ಭಾರಿ ವಾಹನ ಸಂಚಾರದಿಂದ ಸೇತುವೆ ಶಿಥಿಲವಾಗಿತ್ತು. ನೂರು ವರ್ಷ ಹಳೆಯ ಸೇತುವೆಯನ್ನು ಸಂಪೂರ್ಣ ಇಟ್ಟಿಗೆಯಲ್ಲಿ ನಿರ್ಮಿಸಲಾಗಿತ್ತು. ಸೇತುವೆಯ ಒಂದು ಭಾಗದಲ್ಲಿ ಕುಸಿದಿದೆ. ಆರಂಭದಲ್ಲಿ ಬೈಕು, ಕಾರು ಸಂಚಾರಕ್ಕೆ ವ್ಯವಸ್ಥೆ … Read more

ನಾಯಿ ದಾಳಿಗೆ ಸೊರಬದಲ್ಲಿ ಜಿಂಕೆ ಸಾವು, ಎಲ್ಲಿ? ಹೇಗಾಯ್ತು ಘಟನೆ?

240920 Deer Dies in Soraba 1

ಶಿವಮೊಗ್ಗ ಲೈವ್.ಕಾಂ | SORABA NEWS | 24 ಸೆಪ್ಟಂಬರ್ 2020 ನಾಯಿ ದಾಳಿಗೆ ತುತ್ತಾಗಿದ್ದ ಜಿಂಕೆಯೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಸೊರಬ ತಾಲೂಕು ಉರಗನಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಆಹಾರ ಅರಸುತ್ತ ಕಾಡಿನಿಂದ ಗ್ರಾಮದ ಕಡೆಗೆ ಬಂದಿತ್ತು ಜಿಂಕೆ. ಈ ವೇಳೆ ನಾಯಿಗಳು ದಾಳಿ ಮಾಡಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಡಿಆರ್‍ಎಫ್‍ಒ ಸತ್ಯನಾರಾಯಣ, ಅರಣ್ಯ ರಕ್ಷಕ ವಿರೂಪಾಕ್ಷಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ, ಪಶು ಆಸ್ಪತ್ರೆಯಲ್ಲಿ … Read more

ಸೊರಬ ತಾಲೂಕಿನ ಹಿಂದಿನ ತಹಶೀಲ್ದಾರ್ ಸಸ್ಪೆಂಡ್, ಕಾರಣವೇನು?

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | SORABA NEWS | 24 ಸೆಪ್ಟಂಬರ್ 2020 ಸೊರಬ ತಾಲೂಕಿನ ಹಿಂದಿನ ತಹಶೀಲ್ದಾರ್ ಚಂದ್ರಶೇಖರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರನ್ನು ಸಸ್ಪೆಂಡ್ ಮಾಡಿ ಸಾಗರ ಉಪವಿಭಾಗಾಧಿಕಾರಿ ಡಾ.ನಾಗರಾಜ್ ಆದೇಶ ಹೊರಡಿಸಿದ್ದಾರೆ. ಚಂದ್ರಶೇಖರ್ ಅವರು ಪ್ರಸ್ತುತ ಸಾಗರದ ಗ್ರೇಡ್-2 ತಹಶೀಲ್ದಾರ್ ಅಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಸ್ಪೆಂಡ್ ಆಗಲು ಕಾರಣವೇನು? ಸೊರಬ ತಾಲೂಕು ಹಿರೇಶಕುನ ಗ್ರಾಮದ ಸರ್ವೇ ನಂ.113ರ ಸರ್ಕಾರಿ ಜಮೀನಿನಲ್ಲಿ ಹಕ್ಕುಪತ್ರವನ್ನು ಅಕ್ರಮವಾಗಿ ನೀಡಲಾಗಿದ್ದು, ತನಿಖೆ ನಡೆಸುವಂತೆ ಶಾಸಕ … Read more

ಶಿವಮೊಗ್ಗ ಡಿಸಿಸಿ ಬ್ಯಾಂಕ್ನಲ್ಲಿ ಭಾರಿ ಅವ್ಯವಹಾರ, ತನಿಖೆಗೆ ಮಾಜಿ ಸಚಿವರ ಆಗ್ರಹ, ಏನೆಲ್ಲ ಅವ್ಯವಹಾರದ ಆರೋಪವಿದೆ?

Kimmane Rathnakar

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಸೆಪ್ಟಂಬರ್ 2020 ಶಿವಮೊಗ್ಗ ಡಿಸಿಸಿ ಬ್ಯಾಂಕ್‍ನಲ್ಲಿ ನಡೆದಿರುವ ಹಗರಣಗಳ ಸಮಗ್ರ ತನಿಖೆಯಾಗಬೇಕು ಅಂತಾ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್‍ನಲ್ಲಿ ರೈತರಿಗೆ ಸಾಲ ನೀಡಲು 2 ರಿಂದ 3 ಪರ್ಸೆಂಟ್‍ ಲಂಚ ನೀಡಬೇಕಿದೆ. ತೀರ್ಥಹಳ್ಳಿ ರೈತರು ಸಾಲಕ್ಕೆ ಲಂಚ ನೀಡಲು ನಿರಾಕರಿಸಿದ್ದಾರೆ. ಹಾಗಾಗಿ ಅವರಿಗೆ ಕಡಿಮೆ ಸಾಲ ನೀಡಾಗುತ್ತಿದೆ ಎಂಬ ಆಪಾದನೆಗಳಿವೆ. ಮತ್ತೊಂದೆಡೆ ತೀರ್ಥಹಳ್ಳಿ ಶಾಖೆಯ … Read more

ಮಾಜಿ ಶಾಸಕ ಅಪ್ಪಾಜಿಗೌಡ ಮನೆಗೆ ಮಧು ಬಂಗಾರಪ್ಪ ಭೇಟಿ

230920 Madhu Bangarappa Visit Appajigowda house 1

ಶಿವಮೊಗ್ಗ ಲೈವ್.ಕಾಂ | BHADRAVATHI | 23 ಸೆಪ್ಟೆಂಬರ್ 2020 ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರ ನಿವಾಸಕ್ಕೆ ಮಾಜಿ ಶಾಸಕ ಮಧು ಬಂಗಾರಪ್ಪ ಇವತ್ತು ಭೇಟಿ ನೀಡಿ ಸಾಂತ್ವನ ಹೇಳಿದರು‌. ಭದ್ರಾವತಿಯಲ್ಲಿ ಅಪ್ಪಾಜಿಗೌಡ ಅವರ ಮನೆಗೆ ಮಧು ಬಂಗಾರಪ್ಪ ಭೇಟಿ ನೀಡಿದರು. ಅಪ್ಪಾಜಿಗೌಡರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಅಪ್ಪಾಜಿಗೌಡ ಅವರ ಪತ್ನಿ ಶಾರಾದಾ, ಮಗ ಅಜಿತ್‌ಗೌಡ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.ಜಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್, ಭದ್ರಾವತಿ ಜೆಡಿಎಸ್ ಅಧ್ಯಕ್ಷ ಕರುಣಾ ಮೂರ್ತಿ ,ಜಿಲ್ಲಾ ಯುವ … Read more