22 ವರ್ಷದ ಬಳಿಕ ಅತ್ಯಂತ ಶಕ್ತಿಶಾಲಿ ಪಚ್ಚೆಲಿಂಗದ ದರ್ಶನ, ಹರಿದು ಬಂತು ಭಕ್ತ ಸಾಗರ, ಈವರೆಗೆ ದರ್ಶನ ನಿಲ್ಲಿಸಿದ್ದೇಕೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SAGARA | 8 ಅಕ್ಟೋಬರ್ 2019 22 ವರ್ಷದ ಬಳಿಕ ಶಕ್ತಿಶಾಲಿ ಪಚ್ಚೆಲಿಂಗದ ಸಾರ್ವಜನಿಕ ದರ್ಶನ. ಅಪರೂಪದ ಲಿಂಗ ದರ್ಶನಕ್ಕೆ ಹರಿತು ಬಂದು ಭಕ್ತ ಸಾಗರ. ಸಾಗರ ತಾಲೂಕಿನ ಕೆಳದಿ ರಾಜಗುರು ಬಂದಗದ್ದೆ ಹಿರೇಮಠದಲ್ಲಿ ವಿಜಯ ದಶಮಿಯಂದು ಅಪರೂಪದ, ಶಕ್ತಿಶಾಲಿ ಪಚ್ಚೆ ಲಿಂಗದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 22 ವರ್ಷದ ಬಳಿಕ ದರ್ಶನಕ್ಕೆ ವ್ಯವಸ್ಥೆ ಮಾಡಿರುವುದರಿಂದ ಮಠಕ್ಕೆ ಭಾರಿ ಭಕ್ತರು ಆಗಮಿಸುತ್ತಿದ್ದಾರೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಸಂಜೆವರೆಗೆ ನಡೆಯಲಿದೆ … Read more

ಊರಿಗೆ ನೀರು ಬಿಡಲು ಮೋಟರ್ ಹಾಕಲು ಹೋದ ನೀರುಗಂಟಿಗೆ ಶಾಕ್, ಸ್ಥಳದಲ್ಲೇ ಸಾವು

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA | 7 ಅಕ್ಟೋಬರ್ 2019 ಗ್ರಾಮಕ್ಕೆ ನೀರು ಬಿಡಲು ಮೋಟರ್ ಸ್ವಿಚ್ ಹಾಕಲು ಹೋದಾಗ ನೀರುಗಂಟಿಗೆ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿಕಾರಿಪುರದ ಮುಚಡಿ ಗ್ರಾಮದಲ್ಲಿ ಘಟನೆ ನಡೆದಿದೆ. ನೀರುಗಂಟಿ ಮಲ್ಲೇಶಪ್ಪ (62) ಮೃತ ದುರ್ದೈವಿ. ಮುಚಡಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಬೋರ್’ವೆಲ್ ಮೋಟರ್ ಸ್ವಿಚ್ ಹಾಕಲು ಹೋದಾಗ ವಿದ್ಯುತ್ ಶಾಕ್ ಹೊಡೆದಿದೆ. ಚಪ್ಪಲಿ ಹಾಕದೆ ಕೆಸರಿನಲ್ಲಿ ನಿಂತು ಸ್ವಿಚ್ ಹಾಕಿದಾಗ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಶಿರಾಳಕೊಪ್ಪ … Read more

ಸಿನಿಮೀಯ ರೀತಿಯಲ್ಲಿ ಯುವತಿ ಕಿಡ್ನಾಪ್, ನಡುದಾರಿಯಲ್ಲೆ ಕಾರು, ಯುವತಿ ಬಿಟ್ಟು ಎಸ್ಕೇಪ್, ಅಪಹರಣಕಾರರು ಯಾರು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | HOSANAGARA | 4 ಅಕ್ಟೋಬರ್ 2019 ಸಿನಿಮೀಯ ರೀತಿಯಲ್ಲಿ ಯುವತಿಯೊಬ್ಬಳನ್ನು ಅಪಹರಿಸಿದ ಯುವಕ, ಆಕೆಯನ್ನು ನಡುದಾರಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಲಾಂಗ್ ತೋರಿಸಿ, ಯುವತಿಯನ್ನು ಬೆದರಿಸಿ ಅಪಹರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ತೀರ್ಥಹಳ್ಳಿಯ ಕುರುವಳ್ಳಿ ನಾಗರಾಜ್ ಮತ್ತು ಆತನ ಮೂವರು ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಹೊಸನಗರ ಯಡೂರಿನಲ್ಲಿ ಯುವತಿ ಮನೆ ಬಳಿ ದೇವಸ್ಥಾನಕ್ಕೆ ತೆರಳಿದ್ದಾಗ ಅಪಹರಣ ಮಾಡಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಯುವತಿಯ ಮನೆಯವರು ಅಪಹರಣಕಾರರ ಕಾರನ್ನು ಹಿಂಬಾಲಿಸಿದ್ದಾರೆ. ಭಯಗೊಂಡ ಅಪಹೃತರು … Read more

ಭದ್ರಾವತಿಯಲ್ಲಿ ಎರಡು ಇಂದಿರಾ ಕ್ಯಾಂಟೀನ್ ಓಪನ್, ಎಲ್ಲೆಲ್ಲಿ ಸ್ಥಾಪನೆಯಾಗಿವೆ ಗೊತ್ತಾ ಕ್ಯಾಂಟೀನ್’ಗಳು?

ಶಿವಮೊಗ್ಗ ಲೈವ್.ಕಾಂ | BHADRAVATHI | 2 ಅಕ್ಟೋಬರ್ 2019 ಗಾಂಧಿ ಜಯಂತಿಯಂದು ಭದ್ರಾವತಿಯಲ್ಲಿ ಎರಡು ಇಂದಿರಾ ಕ್ಯಾಂಟೀನ್’ಗಳಿಗೆ ಚಾಲನೆ ಸಿಕ್ಕಿದೆ. ಶಾಸಕ ಬಿ.ಕೆ.ಸಂಗಮೇಶ್ವರ ಅವರು ಇವತ್ತು ಇಂದಿರಾ ಕ್ಯಾಂಟೀನ್’ಗಳನ್ನು ಉದ್ಘಾಟನೆ ಮಾಡಿದರು. ಹೊಸ ಸೇತುವೆ ಸಮೀಪ ಮತ್ತು ಸಂತ ಮೈದಾನದ ಬಳಿಕ ಇಂದಿರಾ ಕ್ಯಾಂಟೀನ್’ಗಳನ್ನು ತೆರೆಯಾಗಲಿದೆ. ಕ್ಯಾಂಟೀನ್ ಉದ್ಘಾಟನೆ ಮಾಡಿದ ಶಾಸಕ ಸಂಗಮೇಶ್ವರ ಅವರು ಜನರಿಗೆ ತಿಂಡಿ ಬಡಿಸಿದರು. ಬಳಿಕ ಮಾತನಾಡಿದ ಶಾಸಕ ಸಂಗಮೇಶ್ವರ, ಕಡಿಮೆ ದರದಲ್ಲಿ ಗುಣಮಟ್ಟದ ಊಟ ಮತ್ತು ತಿಂಡಿಯನ್ನು ನೀಡಲಾಗುತ್ತದೆ. ಎಲ್ಲ … Read more

ಶಿಕಾರಿಪುರದಲ್ಲಿ ಸಿಎಂ ಯಡಿಯೂರಪ್ಪ ಜನತಾ ದರ್ಶನ, ಅಹವಾಲು ಹಿಡಿದು ಬಂದರು ಭಾರಿ ಸಂಖ್ಯೆಯ ಜನ

ಶಿವಮೊಗ್ಗ ಲೈವ್.ಕಾಂ | SHIKARIPURA | 30 ಸೆಪ್ಟೆಂಬರ್ 2019 ಶಿಕಾರಿಪುರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇವತ್ತು ಜನತಾ ದರ್ಶನ ನಡೆಸಿದರು. ಭಾರಿ ಸಂಖ್ಯೆಯಲ್ಲಿ ಬಂದಿದ್ದ ಜನರು ಸಿಎಂಗೆ ತಮ್ಮ ಅಹವಾಲು ಸಲ್ಲಿಸಿದರು. ಪ್ರತಿಯೊಬ್ಬರ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ, ಕೂಡಲೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜನತಾ ದರ್ಶನದಲ್ಲಿ ಸಿಎಂ ಏನೆಲ್ಲ ಹೇಳಿದರು? ಜಿಲ್ಲೆಯ ಎಲ್ಲಾ ಪ್ರಮುಖ ನೀರಾವರಿ ಯೋಜನೆಗಳನ್ನು ಒಂದು ವರ್ಷದ ಒಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಹೊಸೂರು ಉಡುಗಣಿ ತಾಳಗುಂದ ನೀರಾವರಿ ಯೋಜನೆಗೆ ಈಗಾಗಲೇ … Read more

‘ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ರಾಜ್ಯದ ಪಾಲು ಹಣ ರಿಲೀಸ್, ಕಲ್ಲೊಡ್ಡು, ಮೂಡಿ ಯೋಜನೆಯು ಜಾರಿಗೆ’

ಶಿವಮೊಗ್ಗ ಲೈವ್.ಕಾಂ | SHIKARIPURA | 30 ಸೆಪ್ಟೆಂಬರ್ 2019 ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗದ ಭೂಸ್ವಾಧೀನಕ್ಕೆ ಶಿಕಾರಿಪುರದಲ್ಲಿ ಕಚೇರಿ ತೆರೆಯಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇವತ್ತು ಕಚೇರಿ ಉದ್ಘಾಟನೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ರಾಜ್ಯದ ಪಾಲು 750 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಕಲ್ಲೊಡ್ಡು, ಮೂಡಿಗೆ ಜಾರಿಗೆ ಬರಲಿವೆ ರಾಜ್ಯದಲ್ಲಿ ನೀರಿನ ಸಮಸ್ಯೆಯನ್ನು ನೀಗಿಸಲು … Read more

ಸಿಗಂದೂರು ಲಾಂಚ್ ಬಳಿ ಕಳಸವಳ್ಳಿಯಲ್ಲಿನ ನಕಲಿ ರಸೀದಿ ಕೇಸ್, ಪಿಡಿಒ ವಿರುದ್ಧ ಕೇಸ್ ಕೈಬಿಡುವಂತೆ ಅಗ್ರಹ

ಶಿವಮೊಗ್ಗ ಲೈವ್.ಕಾಂ | SAGARA | 27 ಸೆಪ್ಟೆಂಬರ್ 2019 ಸಿಗಂದೂರು ಲಾಂಚ್ ಬಳಿ, ಕಳಸವಳ್ಳಿ ಗ್ರಾಮದಲ್ಲಿನ ನಕಲಿ ರಸೀದಿ ಪ್ರಕರಣದಲ್ಲಿ ತುಮರಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಇವತ್ತು ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಅಧಿಕಾರಿಗಳು, ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ಶಾಸಕರು, ಉಪವಿಭಾಗಾಧಿಕಾರಿ ಕಚೇರಿ ಮತ್ತು ತಾಲೂಕು ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು. ತುಮರಿ ಪ್ರಭಾರ ಪಿಡಿಒ ಇಮ್ತಿಯಾಜ್ ಪಾಷಾ … Read more

ಗಾಂಜಾ ಪತ್ತೆಗೆ ಮತ್ತೆ ಡ್ರೋಣ್ ಹಾರಿಬಿಟ್ಟ ಅಬಕಾರಿ ಇಲಾಖೆ, ಎಲ್ಲೆಲ್ಲಿ ಕಾರ್ಯಾಚರಣೆ ನಡೆಸಲಾಯ್ತು ಗೊತ್ತಾ?

270919 Drone To Find Ganja 1

ಶಿವಮೊಗ್ಗ ಲೈವ್.ಕಾಂ | ಸೊರಬ | 27 ಸೆಪ್ಟೆಂಬರ್ 2019 ಜೋಳ ಮತ್ತು ಶುಂಠಿ ಬೆಳೆ ನಡುವೆ ಗಾಂಜಾ ಬೆಳೆ ಬೆಳೆದಿರುವುದನ್ನು ಪತ್ತೆ ಹಚ್ಚಲು ಅಬಕಾರಿ ಇಲಾಖೆ ಪುನಃ ಡ್ರೋಣ್ ಕಾರ್ಯಾಚರಣೆ ಆರಂಭಿಸಿದೆ. ಸೊರಬ ತಾಲೂಕಿನ ವಿವಿಧೆಡೆ ಮೊದಲ ಹಂತದ ಡ್ರೋಣ್ ಆಪರೇಷನ್ ನಡೆಸಲಾಗಿದೆ. ಸಾಗದ್ದೆ, ಕೊಡಕಣಿ, ಮಾಳೆಕೊಪ್ಪ, ಸಾರೆಕೊಪ್ಪ ಗ್ರಾಮಗಳಲ್ಲಿ ಜೋಳ ಮತ್ತು ಶುಂಠಿ ಬೆಳೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಡ್ರೋಣ್ ಹಾರಿಸಿಬಿಟ್ಟರು. ಆದರೆ ಗಾಂಜಾ ಪತ್ತೆ ಆಗಿಲ್ಲ. ಈ ನಡುವೆ ಡ್ರೋಣ್ ಕಾರ್ಯಾಚರಣೆ … Read more

ಸಿಗಂದೂರು ಲಾಂಚ್ ಬಳಿ ನಕಲಿ ಟೋಲ್ ರಶೀದಿ, ಸರ್ಕಾರದ ಹಣ ಗುಳಂ, ಎಸಿಬಿ ತನಿಖೆ ಸಾಧ್ಯತೆ

Sigandur Launch with people 1

ಶಿವಮೊಗ್ಗ ಲೈವ್.ಕಾಂ | ಸಾಗರ | 27 ಸೆಪ್ಟೆಂಬರ್ 2019 ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸವಳ್ಳಿ ಲಾಂಚ್ ಟೋಲ್ ಮತ್ತು ಪಾರ್ಕಿಂಗ್ ಶುಲ್ಕ ವಸೂಲಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಅವ್ಯವಹಾರದ ತನಿಖೆಯನ್ನು ಲೋಕಾಯುಕ್ತ ಅಥವಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವಹಿಸಬೇಕು ಎಂದು ಸಾಗರ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಿಗಂದೂರಿಗೆ ತೆರಳುವ ಪ್ರವಾಸಿ ವಾಹನಗಳಿಗೆ ಶರಾವತಿ ಹಿನ್ನೀರು ಭಾಗದಲ್ಲಿ ಕಳಸವಳ್ಳಿಯಲ್ಲಿ ಟೋಲ್ ಸಂಗ್ರಹಿಸಲಾಗುತ್ತಿತ್ತು. ಇದರಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸರ್ಕಾರಕ್ಕೆ ಸೇರಬೇಕಾದ ಲಕ್ಷಾಂತರ … Read more

ಸಾಗರ ಗಣಪತಿ ಕರೆಗೆ ಎಂಎಲ್ಎ ಭೇಟಿ, ಒತ್ತುವರಿ ತಡೆಗೆ ಕ್ರಮ, ಕೆರೆ ಒತ್ತುವರಿ ತಡೆಗೆ ಕೈಗೊಂಡ ಕ್ರಮವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಸಾಗರ | 26 ಸೆಪ್ಟೆಂಬರ್ 2019 ಸಾಗರದ ಗಣಪತಿ ಕೆರೆ ಕಾಮಗಾರಿ ಸ್ಥಳವನ್ನು ಶಾಸಕ ಹರತಾಳು ಹಾಲಪ್ಪ ಪರಿಶೀಲನೆ ನಡೆಸಿದರು. ಕೆರೆ ಭಾಗ ಒತ್ತುವರಿ ಆಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಗಣಪತಿ ಕೆರೆ ಸುತ್ತಲು ಡ್ರೈನೇಜ್ ತೆಗೆಸಲಾಗುತ್ತಿದೆ. ಕೊಳಚೆ ನೀರು ಗಣಪತಿ ಕೆರೆ ಸೇರಬಾರದು ಮತ್ತು ಕೆರೆ ಜಾಗ ಒತ್ತವರಿ ಮಾಡಬಾರದು ಅನ್ನುವ ಉದ್ದೇಶದಿಂದ ಡ್ರೈನೇಜ್ ತೆಗೆಸಲಾಗುತ್ತಿದೆ. ಈಗಾಗಲೆ ಒಂದು ಭಾಗದಲ್ಲಿ ಡ್ರೈನೇಜ್ ಕೆಲಸ ಪೂರ್ಣಗೊಂಡಿದೆ. ಮತ್ತೊಂದು ಭಾಗದಲ್ಲಿ … Read more