ಸಿಗಂದೂರು ಸೇತುವೆ, ಮತ್ತೊಂದು ಡ್ರೋಣ್‌ ವಿಡಿಯೋ ರಿಲೀಸ್‌ ಮಾಡಿದ ಸಂಸದ ರಾಘವೇಂದ್ರ

Sigandur-Bridge-new-drone-video.

ಸಾಗರ : ಸಿಗಂದೂರು ಸೇತುವೆ (Bridge) ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ಈ ನಡುವೆ ಸಂಸದ ರಾಘವೇಂದ್ರ ಮತ್ತೆ ಎರಡು ಡ್ರೋಣ್‌ ವಿಡಿಯೋಗಳನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರು ನಿಮಿಷದ ವಿಡಿಯೋದಲ್ಲಿ ಸಿಗಂದೂರು ಸೇತುವೆಯ (Bridge) ಕುರಿತು ಪ್ರಮುಖ ಮಾಹಿತಿಗಳನ್ನು ಷೇರ್‌ ಮಾಡಲಾಗಿದೆ.ಇಲ್ಲಿದೆ ವಿಡಿಯೋ.. ಇದನ್ನೂ ಓದಿ » ಜೋಗ ಜಲಪಾತ, ಪ್ರವಾಸಿಗರಿಗೆ ಮತ್ತೆ ನಿಷೇಧ, ಎಷ್ಟು ದಿನ? ಕಾರಣವೇನು?  

ಸಾಗರದಲ್ಲಿ ಮದ್ಯದಂಗಡಿ ಮುಂದೆ ನಾಗರಿಕರ ಪ್ರತಿಭಟನೆ, ಕಾರಣವೇನು?

sagara-vijayanagara-residents-protest-against-liquor-shop

  ಸಾಗರ : ಭೀಮನಕೋಣೆ ರಸ್ತೆಯಲ್ಲಿ ಹೊಸದಾಗಿ ಮದ್ಯದಂಗಡಿ (Shop) ತೆರೆಯಲು ಅವಕಾಶ ನೀಡಿದ್ದನ್ನು ಖಂಡಿಸಿ ವಿಜಯನಗರ ನಾಗರಿಕ ವೇದಿಕೆ ವತಿಯಿಂದ ಮದ್ಯದಂಗಡಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಮದ್ಯದ ಅಂಗಡಿಯನ್ನು ಕೂಡಲೆ ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಈ ಭಾಗದಲ್ಲಿ ವಿಜಯನಗರ, ರಾಮನಗರ ಸೇರಿದಂತೆ ಅನೇಕ ಬಡಾವಣೆಗಳಿವೆ. ಶಾಂತಿ, ಸುವ್ಯವಸ್ಥೆ ಕಾಡುವ ಹಿನ್ನೆಲೆ ಮದ್ಯದಂಗಡಿ (Shop) ತೆರೆಯಲು ಅವಕಾಶ ನೀಡಬಾರದು. – ಕೆ.ಆರ್.ಗಣೇಶ್‌ ಪ್ರಸಾದ್‌, ನಗರಸಭೆ ಸದಸ್ಯ ಇದನ್ನೂ ಓದಿ » ಗೋವಾ ನಂಬರ್‌ ಕಾರು ತಡೆದ … Read more

ಜೋಗ ಜಲಪಾತ, ಪ್ರವಾಸಿಗರಿಗೆ ಮತ್ತೆ ನಿಷೇಧ, ಎಷ್ಟು ದಿನ? ಕಾರಣವೇನು?

JOG FALLS GENERAL IMAGE

ಶಿವಮೊಗ್ಗ : ಕಾಲಮಿತಿಯೊಳಗೆ ಮುಖ್ಯ ದ್ವಾರದ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ ಜೋಗ ಜಲಪಾತ (Jog Falls) ವೀಕ್ಷಣೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶ ನಿರ್ಬಂಧವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಜೋಗ ಜಲಪಾತದಲ್ಲಿ (Jog Falls) ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಮುಖ್ಯದ್ವಾರದ ಕಾಮಗಾರಿ ಹಿನ್ನೆಲೆ ಸುರಕ್ಷತೆ ದೃಷ್ಟಿಯಿಂದ ಜ.1 ರಿಂದ ಮಾ.15ರವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ ಕಾಲಮಿತಿಯೊಳಗೆ ಮುಖ್ಯದ್ವಾರದ … Read more

ಭೂಮಿಗಾಗಿ ಬೀದಿಗಿಳಿದ ಆನಂದಪುರದ ರೈತರು, ಅರಣ್ಯಾಧಿಕಾರಿ ಕಚೇರಿ ಮುಂಭಾಗ ಆಕ್ರೋಶ, ಏನಿದು ಪ್ರಕರಣ?

Anandapura-farmers-protest-in-Sagara.

ಸಾಗರ : ಏಳು ಗ್ರಾಮಗಳ (Villages) ವ್ಯಾಪ್ತಿಯನ್ನು ಮೀಸಲು ಅರಣ್ಯ ಪ್ರಸ್ತಾವನೆಯಿಂದ ಕೈ ಬಿಡುವಂತೆ ಆಗ್ರಹಿಸಿ ಆನಂದಪುರ ಹೋಬಳಿ ರೈತ ಸಂಘಟನೆಗಳ ನೇತೃತ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ‌ ಆನಂದಪುರ ಹೋಬಳಿಯಲ್ಲಿ ದಶಕಗಳಿಂದ ವಾಸವಾಗಿರುವ 650ಕ್ಕೂ ಹೆಚ್ಚು ಕುಟುಂಬಗಳಿಗೆ ನೊಟೀಸ್‌ ನೀಡಲಾಗಿದೆ. ಈ ಹಿಂದೆ ರೈತರಿಗೆ ಹಕ್ಕುಪತ್ರ ನೀಡಲಾಗಿತ್ತು. ಆದರೆ ಈಗ ಈ ಜಾಗವನ್ನು ಅರಣ್ಯ ಪ್ರದೇಶ ಎಂದು ಹೇಳಲಾಗುತ್ತಿದೆ ಎಂದು ರೈತರು ಆರೋಪಿಸಿದರು. ಯಾರೆಲ್ಲ ಏನೆಲ್ಲ ಹೇಳಿದರು? ಕಾಗೋಡು ತಿಮ್ಮಪ್ಪ … Read more

ಅಡಿಕೆ ಖೇಣಿದಾರರ ಸಮಾವೇಶ | ಕಾಗೋಡು ತಿಮ್ಮಪ್ಪಗೆ ಸನ್ಮಾನ – 3 ಫಟಾಫಟ್‌ ಸುದ್ದಿಗಳು

9-AM-FATAFAT-NEWS.webp

ಇದನ್ನೂ ಓದಿ » ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮನ್ಮಥನ ಪ್ರತಿಷ್ಠಾಪನೆ, ಎಲ್ಲೆಲ್ಲಿ? ಹೇಗಿದೆ ಹೋಳಿ ಹಬ್ಬದ ಸಿದ್ಧತೆ?

ಗೋವಾ ನಂಬರ್‌ ಕಾರು ತಡೆದ ಅಧಿಕಾರಿಗಳು, ಸಿಕ್ತು ನಾನಾ ಬ್ರಾಂಡ್‌ನ ಮದ್ಯ, ಎಷ್ಟು ಲೀಟರ್‌ ಇತ್ತು?

goa-liquor-seized-in-sagara.

ಸಾಗರ : ಗೋವಾದಿಂದ (Goa) ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಿಶ್ವನಾಥ್ ಎಂಬ ವ್ಯಕ್ತಿಯನ್ನು  ನಗರದ ಕಾಗೋಡು ತಿಮ್ಮಪ್ಪ ಬಡಾವಣೆ ಸಮೀಪದ ಲೇಔಟ್‌ವೊಂದರ ಬಳಿ ಅಬಕಾರಿ ಇಲಾಖೆ ಸಿಬ್ಬಂದಿ ಗುರುವಾರ ಬಂಧಿಸಿದ್ದಾರೆ. ಮದ್ಯ ಸಾಗಿಸಲು ಬಳಸಲಾಗಿದ್ದ ಕಾರು ಹಾಗೂ 138.06 ಲೀ. ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಡಿವೈಎಸ್‌ಪಿ ಶೀಲಾ ದರ್ಜಕರ್, ಇನ್‌ಸ್ಪೆಕ್ಟರ್ ಭಾಗ್ಯಲಕ್ಷ್ಮಿ, ಸಂದೀಪ್ ಎಲ್.ಸಿ., ಸಿಬ್ಬಂದಿ ಗುರುಮೂರ್ತಿ, ದೀಪಕ್, ಮಲ್ಲಿಕಾರ್ಜುನ ಹಾಗೂ ಸಚಿನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ » ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮನ್ಮಥನ ಪ್ರತಿಷ್ಠಾಪನೆ, … Read more

ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮನ್ಮಥನ ಪ್ರತಿಷ್ಠಾಪನೆ, ಎಲ್ಲೆಲ್ಲಿ? ಹೇಗಿದೆ ಹೋಳಿ ಹಬ್ಬದ ಸಿದ್ಧತೆ?

all-set-for-holi-festival-in-Shimoga-city

ಶಿವಮೊಗ್ಗ : ಹೋಳಿ (Holi) ಹಬ್ಬದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಮನ್ಮಥ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ಹಲವು ಕಡೆ ಗುರುವಾರ ಮನ್ಮಥನ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸಲಾಗಿದೆ. ಹಬ್ಬದ ನಂತರ ಕಾಮದಹನ ಮಾಡಲಾಗುತ್ತದೆ. ಶಿವಮೊಗ್ಗದಲ್ಲಿ ಮಾ.15ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸಂಭ್ರಮದ ಹೋಳಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಗೋಪಿ ವೃತ್ತದಲ್ಲಿ ರೈನ್‌ ಡಾನ್ಸ್‌ ಆಯೋಜಿಸಲಾಗಿದೆ. ಕಾಮಣ್ಣನ ಪ್ರತಿಮೆ ಪ್ರತಿಷ್ಠಾಪನೆ ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನ, … Read more

ಗುಡ್ಡದಿಂದ ಇಳಿದು ಬಂದ ಹುಲಿ, ಹಸುವಿನ ಮೇಲೆ ದಾಳಿ

Sagara-News-Update.

ಸಾಗರ : ತಾಲೂಕಿನ ಕರೂರು ಹೋಬಳಿಯ ಕುದರೂರು ಗ್ರಾಮದಲ್ಲಿ ಹಸುವೊಂದರ ಮೇಲೆ ಹುಲಿ (Tiger) ದಾಳಿ ನಡೆಸಿ ಕೊಂದಿದೆ. ಹಸು ಕುದರೂರು ಗ್ರಾಮದ ಗಣಪತಿ ತೇಕಲೆ ಅವರಿಗೆ ಸೇರಿದ್ದಾಗಿದೆ. ಗೋಮಾಳದಲ್ಲಿ ಹಸುವನ್ನು ಮೇಯಲು ಬಿಡಲಾಗಿತ್ತು. ಈ ಸಂದರ್ಭ ತೇಕಲೆ ಗುಡ್ಡದಿಂದ ಬಂದ ಹುಲಿಯು ದಾಳಿ ನಡೆಸಿದೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ಅತಿ ಹೆಚ್ಚು ಬಿಸಿಲು, ಉಳಿದ ತಾಲೂಕುಗಳಲ್ಲಿ ಹೇಗಿದೆ ಸೂರ್ಯನ ಅಬ್ಬರ?

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ, ಸಮರ್ಪಕ ವಿದ್ಯುತ್‌ಗೆ ಎಂಎಲ್‌ಎ ಪತ್ರ

Ashok-Beluru-submits-memorandum-to-Hescom-md.

ಸಾಗರ : ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾಗರ ತಾಲೂಕು ಭಾರಂಗಿ ಹೋಬಳಿಯಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಿರಂತರ ಸಿಂಗಲ್‌ ಫೇಸ್‌ ವಿದ್ಯುತ್‌ (Power) ಪೂರೈಕೆ ಮಾಡಬೇಕು ಎಂದು ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಮನವಿ ಮಾಡಿದ್ದಾರೆ. ಭಾರಂಗಿ ಹೋಬಳಿಯ ನಾಗವಳ್ಳಿ ಭಾಗಕ್ಕೆ ಭಟ್ಕಳದಿಂದ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಹಿನ್ನೆಲೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆ ಆಗದಂತೆ ಮಾರ್ಚ್‌ ತಿಂಗಳು ಪೂರ್ತಿ ಸಂಜೆ 6 ರಿಂದ ರಾತ್ರಿ … Read more

ಸಾಗರ ನಗರಸಭೆಯಲ್ಲಿ ಗದ್ದಲ, ಶಿವಮೊಗ್ಗದಲ್ಲಿ ಡಿಸಿಗೆ ದೂರು ಕೊಟ್ಟ ಕಾಂಗ್ರೆಸ್‌ ನಿಯೋಗ, ಕಾರಣವೇನು?

Congress-and-BJP-members-verbal-spat-at-sagara-nagarasabhe

ಸಾಗರ : ನಗರಸಭೆ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಸಂಬಂಧ ಸಾಮಾನ್ಯ ಸಭೆಯಲ್ಲಿ ಗದ್ದಲ (Altercation) ಉಂಟಾಗಿದೆ. ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ಆರೋಪ, ಪ್ರತ್ಯಾರೋಪ ಮಾಡಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ ಸದಸ್ಯರ ನಿಯೋಗ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಭೇಟಿಯಾಗಿ ದೂರು ನೀಡಿದ್ದಾರೆ. ಸಾಮಾನ್ಯ ಸಭೆಯಲ್ಲಿ ಗದ್ದಲ ನಗರಸಭೆ ನೂತನ ಅಧ್ಯಕ್ಷೆ ಮೈತ್ರಿ ಪಾಟೀಲ್‌ ಅಧ್ಯಕ್ಷತೆಯಲ್ಲಿ ಇವತ್ತು ಮೊದಲ ಸಾಮಾನ್ಯ ಸಭೆ ನಡೆಯಿತು. ಈ ವೇಳೆ ಸ್ಥಾಯಿ ಸಮಿತಿಗೆ 11 ಸದಸ್ಯರ ಹೆಸರನ್ನು ಬಿಜೆಪಿ ಸದಸ್ಯ ಗಣೇಶ್‌ … Read more