ಸಿಗಂದೂರು ಜಾತ್ರೆಗೆ ಅದ್ಧೂರಿ ಚಾಲನೆ, ಹೇಗಿತ್ತು ವೈಭವ? ಯಾರೆಲ್ಲ ಭಾಗವಹಿಸಿದ್ದರು?

Sigandur Temple Jathre Sigekanive pooje

SHIVAMOGGA LIVE NEWS | 14 JANUARY 2024 SIGANDURU : ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಮೂಲ ಸನ್ನಿಧಿ ಸೀಗೆಕಣಿವೆಯಲ್ಲಿ ಪೂಜೆ ಸಲ್ಲಿಸಲಾಯಿತು. ಆ ಬಳಿಕ ಸಿಗಂದೂರು ಜಾತ್ರೆಗೆ ಚಾಲನೆ ದೊರೆಯಿತು. ಸಿಗಂದೂರು ಚೌಡಮ್ಮ ದೇವಿಯ ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವದ ಧರ್ಮಜ್ಯೋತಿಗೆ ಕೇರಳದ ಶಿವಗಿರಿಯ ನಾರಾಯಣ ಗುರು ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ ಚಾಲನೆ ನೀಡಿದರು. ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ. ತಿಮ್ಮೆ ಗೌಡ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. … Read more

ಸಿಗಂದೂರು ಜಾತ್ರೆಗೆ ಸಿದ್ಧತೆ ಪೂರ್ಣ, ಮೂಲ ಸ್ಥಾನದಲ್ಲಿ ಪೂಜೆ ಆರಂಭ

Sigandur-Jathre-Preparation

SHIVAMOGGA LIVE NEWS | 14 JANUARY 2024 SIGANDUR : ಸಾಗರ ತಾಲೂಕಿನ ಸಿಗಂದೂರಿನಲ್ಲಿ ಜ.14 ಮತ್ತು 15ರಂದು ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ ಆಗಿದೆ. ರಘುಪತಿ ಶಾಂತಿ ಮತ್ತು ಪುರೋಹಿತರ ತಂಡದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ಧತೆಯಾಗಿದೆ. ಭಕ್ತರಿಗೆ ಊಟ, ವಸತಿ ಮತ್ತು ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕರೂರು ಹೋಬಳಿಯ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸ್ವಯಂ ಪ್ರೇರಣೆಯಿಂದ ಶ್ರಮದಾನದ ಮೂಲಕ ರಸ್ತೆ ಸ್ವಚ್ಛತೆ, ತಳಿರು ತೋರಣದಿಂದ ಅಲಂಕಾರ ಮಾಡಿವೆ. ಇದನ್ನೂ ಓದಿ … Read more

ಶುಂಠಿ ಕಣದಲ್ಲಿ ನೀರು ಹಾಯಿಸುತ್ತಿದ್ದ ವ್ಯಕ್ತಿ ಕಾಲಿಗೆ ಗುಂಡು, ಯಾರು ಹೊಡೆದಿದ್ದು ಅನ್ನೋದೇ ನಿಗೂಢ

Crime-News-General-Image

SHIVAMOGGA LIVE NEWS | 12 JANUARY 2024 SAGARA : ಶುಂಠಿ ಕಣಕ್ಕೆ ನೀರು ಹಾಯಿಸುತ್ತಿದ್ದ ವ್ಯಕ್ತಿಯ ಕಾಲಿಗೆ ಗುಂಡು ತುಗಲಿದೆ. ಗುಂಡಿ ಹಾರಿಸಿದವರಾರು ಅನ್ನುವುದು ಗೊತ್ತಾಗಿಲ್ಲ. ಕಾಡು ಪ್ರಾಣಿ ಬೇಟೆಯಾಡಲು ಗುರಿ ಇಟ್ಟು ಹೊಡೆದ ಗುಂಡು ಕಾಲಿಗೆ ತಗುಲಿರುವ ಸಾಧ್ಯತೆ ಇದೆ. ಸಾಗರ ತಾಲೂಕು ಮಾಲ್ವೆ ಗ್ರಾಮದಲ್ಲಿ ಗುರುವಾರ ನಡೆದಿದೆ. ಮಾಲ್ವೆಯ ರವಿ, ಶುಂಠಿ ಕಣಕ್ಕೆ ನೀರು ಹಾಯಿಸುತ್ತಿದ್ದಾಗ ಗುಂಡು ಕಾಲಿಗೆ ತಗುಲಿದೆ. ಗಾಯಾಳುವನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಪಲ್ಸರ್‌ ಬೈಕ್‌ ಗಿಫ್ಟ್‌ ಕೊಟ್ಟು, ಸರ್ಕಾರಿ ಶಾಲೆ ಶಿಕ್ಷಕನಿಗೆ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು

Pulsar-Bike-gift-to-teacher-by-villagers-at-valuru-teacher-santosh-kanchan

SHIVAMOGGA LIVE NEWS | 11 JANUARY 2024 SAGARA : 16 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ಪಲ್ಸರ್‌ ಬೈಕ್‌ ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಶಿಕ್ಷಕ ಮತ್ತು ಅವರ ಪತ್ನಿ ಬೈಕ್‌ ಹತ್ತಿ ಶಾಲೆ ಬಳಿ ರೌಂಡ್‌ ಹಾಕುವುದನ್ನು ಕಂಡು ಗ್ರಾಮಸ್ಥರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಸಾಗರ ತಾಲೂಕಿನ ಕುಗ್ರಾಮ ವಳೂರಿನ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದ ಸಂತೋಷ್‌ ಕಾಂಚನ್‌ ಅವರು ಕುಂದಾಪುರದ ವಾರಾಹಿ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಶಾಲೆ … Read more

ಸಾಗರದ ಮಾರ್ಕೆಟ್‌ ರಸ್ತೆ ವಿಸ್ತರಣೆ, ಎಂಎಲ್‌ಎ, ಡಿಸಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ, ಜ.17ರಂದು ಮಹತ್ವದ ಸಭೆ

Sagara-Market-road-DC-Selvamani-MLA-Beluru-Gopalakrishna.

SHIVAMOGGA LIVE NEWS | 7 JANUARY 2024 SAGARA : ಮಾರ್ಕೆಟ್ ರಸ್ತೆ ನಿವಾಸಿಗಳು ತಮ್ಮ ಕಟ್ಟಡ ತೆರವುಗೊಳಿಸುವ ಸಂಬಂಧ ತಾಲ್ಲೂಕು ಆಡಳಿತದ ಎದುರು ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿರುವ ಬೇಡಿಕೆಗಳನ್ನು ಶೀಘ್ರ ಈಡೇರಿಸಲಾಗುತ್ತದೆ. ಇತರ ಬೇಡಿಕೆಗಳಿಗೆ ಕೂಡ ಆಡಳಿತ ಸಹಾನುಭೂತಿಯಿಂದ ಸ್ಪಂದಿಸಲಿದೆ. ಸ್ಥಳೀಯರ ನೆರವಿನೊಂದಿಗೆ ರಸ್ತೆ ವಿಸ್ತರಣೆ ಕಾರ್ಯ ಪೂರ್ಣಗೊಳಿಸಲಾಗುತ್ತದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಸಾಗರದ ಮಾರ್ಕೆಟ್ ರಸ್ತೆ ವಿಸ್ತರಣೆ ಕಾರ್ಯವನ್ನು ಪೂರ್ಣಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹಾಗೂ … Read more

ಹೊಸ ವರ್ಷದ ಮೊದಲ ದಿನ‌, ಮದ್ಯದ ಅಂಗಡಿ ಬಾಗಿಲು ತೆಗೆದು ಒಳಗೆ ತೆರಳಿದ ಮಾಲೀಕನಿಗೆ ಕಾದಿತ್ತು ಶಾಕ್

crime name image

SHIVAMOGGA LIVE NEWS | 5 JANUARY 2024 SAGARA : ಎಂಎಸ್‌ಐಎಲ್‌ ಮದ್ಯದ ಅಂಗಡಿಯ ಒಳಗಿದ್ದ ಲಾಕರ್‌ ಮೀಟಿ 2.95 ಲಕ್ಷ ರೂ. ಹಣ ಕಳ್ಳತನ ಮಾಡಲಾಗಿದೆ. ಅಂಗಡಿಯ ಮೋಲ್ಡ್‌ ಶೀಟ್‌ ಮೀಟಿ ಕಳ್ಳರು ಒಳ ನುಗ್ಗಿ ಹಣ ಕಳ್ಳತನ ಮಾಡಿದ್ದಾರೆ. ಸಾಗರ ಪಟ್ಟಣದ ಬಿ.ಹೆಚ್‌.ರಸ್ತೆಯ ಜಂಬಗಾರುವಿನಲ್ಲಿರುವ ಎಂಎಸ್‌ಐಎಲ್‌ ಮದ್ಯದ ಅಂಗಡಿಯಲ್ಲಿ ಕಳ್ಳತನ ಮಾಡಲಾಗಿದೆ. ಮಾಲೀಕ ಆನಂದಪ್ಪ ಅವರು ಆಯಾ ದಿನದ ವ್ಯಾಪಾರದ ಹಣವನ್ನು ಅಂಗಡಿಯಲ್ಲೇ ಇರುವ ಲಾಕರ್‌ನಲ್ಲಿ ಇರಿಸಿ ಮರುದಿನ ಬೆಳಗ್ಗೆ ಬ್ಯಾಂಕ್‌ಗೆ ಪಾವತಿಸುತ್ತಿದ್ದರು. … Read more

ಸಿಗಂದೂರು ಜಾತ್ರೆಗೆ ದಿನಾಂಕ ನಿಗದಿ, ಏನೆಲ್ಲ ಕಾರ್ಯಕ್ರಮ ಇರಲಿದೆ? ಯಾರೆಲ್ಲ ಭಾಗವಹಿಸ್ತಾರೆ?

Sigandur temple and Sharavathi river launch

SHIVAMOGGA LIVE NEWS | 4 JANUARY 2024 SAGARA : ಜ.14 ಮತ್ತು 15ರಂದು ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ಜಾತ್ರೆ ಮಹೋತ್ಸವ ನಡೆಯಲಿದೆ. ದೇವಸ್ಥಾನದಲ್ಲಿ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಏನೇನೆಲ್ಲ ಕಾರ್ಯಕ್ರಮ ಇರಲಿದೆ? ಜ.14 ರಂದು ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ದೇವಿಗೆ ಮಹಾಭಿಷೇಕ, ಹೂವು ಮತ್ತು ಆಭರಣದ ಅಲಂಕಾರ ನೆರವೇರಿಸಲಾಗುತ್ತದೆ. ಗೋಪೂಜೆ, ಗುರು ಪೂಜೆ ನಡೆಯಲಿದೆ. ರಥ ಮತ್ತು ಪಲ್ಲಕ್ಕಿಯನ್ನು ಮೂಲಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. ದೇವಿಯ ಮೂಲ ಸ್ಥಳ ಸೀಗೆ ಕಣಿವೆಯಲ್ಲಿ … Read more

BREAKING NEWS – ಶಿವಮೊಗ್ಗ – ಸಾಗರ ರಸ್ತೆಯಲ್ಲಿ ಅಪಘಾತ, ರಸ್ತೆ ಪಕ್ಕದ ಗುಂಡಿಗಿಳಿದ ಖಾಸಗಿ ಬಸ್‌, ಹೇಗಾಯ್ತು ಘಟನೆ?

Prakash-Travels-bus-mishap-at-Gilalagundi-in-sagra-road

SHIVAMOGGA LIVE NEWS | 4 JANUARY 2024 SAGARA : ಎದುರಿನಿಂದ ಬಂದ ಗೂಡ್ಸ್‌ ವಾಹನಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಖಾಸಗಿ ಬಸ್‌ ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ನುಗ್ಗಿದೆ. ಶಿವಮೊಗ್ಗ – ಸಾಗರ ರಸ್ತೆಯ ಗಿಳಾಲಗುಂಡಿ ಸಮೀಪ ಘಟನೆ ಸಂಭವಿಸಿದೆ. ಬಸ್ಸು ಸಾಗರದಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿತ್ತು. ಬಸ್ಸಿನಲ್ಲಿ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಆನಂದಪುರದಲ್ಲಿ ನಾಟಿ ಔಷಧಿ ಖರೀದಿಗೆ ತೆರಳುವವರು ಹೆಚ್ಚಿದ್ದರು ಎಂದು ತಿಳಿದು ಬಂದಿದೆ. ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಬಸ್‌ ಚಾಲಕನಿಗೆ … Read more

ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ, ಆನಂದಪುರ, ರಿಪ್ಪನ್‌ಪೇಟೆಯಲ್ಲಿ ಮೆರವಣಿಗೆ

Grand-Welcome-to-retired-soldier-at-Ananadapura-in-sagara

SHIVAMOGGA LIVE NEWS | 3 JANUARY 2023 ANANDAPURA : ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಹಿಂತಿರುಗಿದ ಯೋಧ ಸುಬೇದಾರ್ ಎಂ.ಗಣಪತಿ ಅವರಿಗೆ ನಾಗರಿಕರು ಭವ್ಯ ಸ್ವಾಗತ ನೀಡಿದರು. ಯಡೇಹಳ್ಳಿಯಿಂದ ಹಿರೇಹಾರಕ ಗ್ರಾಮದವರೆಗೆ ಮೆರವಣಿಗೆ ನಡೆಸಲಾಯಿತು. ಸೇನೆಯಲ್ಲಿ ಸುದೀರ್ಘ 28 ವರ್ಷ ಸೇವೆ ಸಲ್ಲಿಸಿರುವ ಗಣಪತಿ ಅವರು ನಿವೃತ್ತರಾಗಿ ತವರಿಗೆ ಮರಳಿದ್ದಾರೆ. ಪಂಜಾಬ್‌, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ನಾಗಲ್ಯಾಂ ಸೇರಿದಂತೆ ವಿವಿಧೆಡೆ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೆಲಸ ಮಾಡಿದ್ದಾರೆ. ಮಾಜಿ ಸೈನಿಕರಾದ … Read more

ಸರ್ಕಾರಿ ಹಾಸ್ಟೆಲ್‌ಗೆ ಬಾಡಿಗೆಗೆ ಬೇಕಿದೆ ಕಟ್ಟಡ, ಅರ್ಜಿ ಆಹ್ವಾನ

SMALL-NEWS-CHUTUKU-SUDDI-SHIVAMOGGA-LIVE.webp

SHIVAMOGGA LIVE NEWS | 3 JANUARY 2023 SAGARA : ಸಮಾಜ ಕಲ್ಯಾಣ ಇಲಾಖೆಯು ಸಾಗರ ತಾಲೂಕಿನಲ್ಲಿ ಮಂಜೂರಾತಿ ಸಂಖ್ಯೆಗಿಂತಲು ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಿದೆ. ಈ ಹಿನ್ನೆಲೆ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿನಿಲಯಗಳನ್ನು ತೆರೆಯಲು ಯೋಜಿಸಿದೆ. ಹೆಚ್ಚುವರಿ ವಿದ್ಯಾರ್ಥಿಗಳನ್ನು ಅಲ್ಲಿಗೆ ವರ್ಗಾಯಿಸಲಾಗುತ್ತದೆ. ಈ ಹಿನ್ನೆಲೆ ಸಾಗರ ತಾಲ್ಲೂಕಿನ ಆಸಕ್ತ ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳ ವಸತಿ ಸೌಲಭ್ಯಕ್ಕಾಗಿ ಬಾಡಿಗೆ ನೀಡಲು ಮೂಲ ಸೌಲಭ್ಯ ಒಳಗೊಂಡ ಸುಸಜ್ಜಿತ ಕಟ್ಟಡ ಲಭ್ಯವಿದ್ದಲ್ಲಿ ಅಗತ್ಯ ಮಾಹಿತಿಯೊಂದಿಗೆ ಸಾಗರದ ಸಮಾಜ … Read more