ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್‌ 10 ಜಾಗಗಳು ಇಲ್ಲಿದೆ – ಕಳೆದ 24 ಗಂಟೆಯ ರಿಪೋರ್ಟ್‌

Shivamogga-Rain-General-Image

SHIVAMOGGA LIVE | 7 JULY 2023 SHIMOGA : ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಹಲವು ಕಡೆ ಸಾಧಾರಣದಿಂದ ಭಾರೀ ಪ್ರಮಾಣದ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್‌ 10 ಜಾಗಗಳು (Top 10) ಇಲ್ಲಿದೆ. ಟಾಪ್‌ 1 : ತೀರ್ಥಹಳ್ಳಿಯ ಹೊನ್ನೇತಾಳು – 91.5 ಮಿ.ಮೀ ಟಾಪ್‌ 2 : ತೀರ್ಥಹಳ್ಳಿಯ ಬಿದರಗೋಡು – 78 ಮಿ.ಮೀ ಟಾಪ್‌ 3 : ಹೊಸನಗರದ … Read more

ಮಾಜಿ ಸಚಿವರ ಪುತ್ರಿ, ಮಾಜಿ ಜಿಲ್ಲಾಧ್ಯಕ್ಷ ಸೇರಿ 13 ಮಂದಿ ಕಾಂಗ್ರೆಸ್‌ ಪಕ್ಷದಿಂದ ಉಚ್ಚಾಟನೆ, ಕಾರಣವೇನು?

Dr-Rajanandini-Kagodu-Daughter-of-Kagodu-Thimmappa

SHIVAMOGGA LIVE | 6 JULY 2023 SHIMOGA : ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಸೇರಿದಂತೆ 13 ಮಂದಿಯನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷ ಉಚ್ಚಾಟನೆ (Expelled) ಮಾಡಲಾಗಿದೆ. ಈ ಸಂಬಂಧ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್‌ ಆದೇಶ ಹೊರಡಿಸಿದ್ದಾರೆ. ಉಚ್ಚಾಟನೆಗೆ ಕಾರಣವೇನು? ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ತೊರೆದ ಮತ್ತು ಪಕ್ಷದಲ್ಲಿ ಇದ್ದುಕೊಂಡು ಚುನಾವಣೆ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆಪಾದನೆ ಮೇಲೆ 13 ಮಂದಿಯನ್ನು ಉಚ್ಚಾಟನೆ (Expelled) … Read more

ಶಿವಮೊಗ್ಗ – ತಾಳಗುಪ್ಪ ಪ್ಯಾಸೆಂಜರ್‌ ರೈಲು ಒಂದು ದಿನ ಕುಂಸಿ ಮಾರ್ಗದಲ್ಲಿ ಸಂಚಾರ ರದ್ದು, ಕಾರಣವೇನು?

Shimoga-Yeshwanthapura-Train-South-Western-Railway

SHIVAMOGGA LIVE | 6 JULY 2023 SHIMOGA : ಶಿವಮೊಗ್ಗ – ಕುಂಸಿ ರೈಲ್ವೆ (Railway) ವಿಭಾಗದಲ್ಲಿ ತಾಂತ್ರಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಜುಲೈ 7ರಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 3.30ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರವಿರುವುದಿಲ್ಲ. ಶಿವಮೊಗ್ಗ ಟೌನ್‌ – ತಾಳಗುಪ್ಪ – ಶಿವಮೊಗ್ಗ ಟೌನ್‌ (ರೈಲು ಸಂಖ್ಯೆ 07349 – 07350) ರೈಲನ್ನು ಈ ಮಾರ್ಗದಲ್ಲಿ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ – ತಾಳಗುಪ್ಪ – ಶಿವಮೊಗ್ಗ – … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಕಳೆದ 24 ಗಂಟೆಯಲ್ಲಿ ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?

night-rain-in-shimoga

SHIVAMOGGA LIVE | 5 JULY 2023 SHIMOGA : ಜಿಲ್ಲೆಯಾದ್ಯಂತ ಮಳೆ ಜೋರಾಗಿದೆ. ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಸರಾಸರಿ 33.9 ಮಿ.ಮೀ ಮಳೆಯಾಗಿದೆ (Rain Report). ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ? ಭದ್ರಾವತಿಯಲ್ಲಿ 8.5 ಮಿ.ಮೀ, ಹೊಸನಗರದಲ್ಲಿ 53.2 ಮಿ.ಮೀ, ಸಾಗರದಲ್ಲಿ 57.1 ಮಿ.ಮೀ, ಶಿಕಾರಿಪುರದಲ್ಲಿ 10.6 ಮಿ.ಮೀ, ಶಿವಮೊಗ್ಗದಲ್ಲಿ 10.5 ಮಿ.ಮೀ, ಸೊರಬದಲ್ಲಿ 15.2 ಮಿ.ಮೀ, ತೀರ್ಥಹಳ್ಳಿಯಲ್ಲಿ 44.8 ಮಿ.ಮೀ ಮಳೆಯಾಗಿದೆ. … Read more

ತೀರ್ಥಹಳ್ಳಿ, ಹೊಸನಗರದ ವಿವಿಧೆಡೆ ಭಾರಿ ಮಳೆ, ಉಳಿದ ತಾಲೂಕಿನಲ್ಲಿ ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

Rain-at-Shimoga-Kote-Road

SHIVAMOGGA LIVE | 4 JULY 2023 SHIMOGA : ಜಿಲ್ಲೆಯಾದ್ಯಂತ ಸಂಜೆ ವೇಳೆ ಜೋರು (Heavy Rain) ಮಳೆಯಾಗುತ್ತಿದೆ. ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ವಿವಿಧೆಡೆ, ಶಿವಮೊಗ್ಗದ ಕೆಲವು ಕಡೆ ಭಾರಿ ಮಳೆಯಾಗುತ್ತಿರುವ ವರದಿಯಾಗಿದೆ. ತೀರ್ಥಹಳ್ಳಿ ತಾಲೂಕಿನ ಬಿದರಗೋಡು, ಹೊನ್ನೇತಾಳು, ಅರೇಹಳ್ಳಿ, ಕಮ್ಮರಡಿ, ತೀರ್ಥಮತ್ತೂರು, ಹೊಸಹಳ್ಳಿ, ಮೇಗರವಳ್ಳಿ. ಹೊಸನಗರ ತಾಲೂಕಿನ ಸುಳಗೋಡು, ನಗರ, ಹೊಸೂರು ಸಂಪೇಕಟ್ಟೆಯಲ್ಲಿ ಭಾರಿ ಮಳೆಯಾಗುತ್ತಿರುವ (Heavy Rain) ವರದಿಯಾಗಿದೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಗೆ ಎರಡು ದಿನ ಆರೆಂಜ್‌ ಅಲರ್ಟ್‌, ಇನ್ನೆರಡು … Read more

ಸಿನಿಮಾ ನಟಿ ಮೇಲೆ ಸಾಗರದಲ್ಲಿ ಹಲ್ಲೆ ಆರೋಪ, ಆಸ್ಪತ್ರೆಗೆ ದಾಖಲು, ಏನಿದು ಕೇಸ್?

Actress-Anitha-Gowda-attacked-in-Sagara.

SHIVAMOGGA LIVE | 4 JULY 2023 ANANDAPURA : ಭೂ ವಿವಾದ ಸಂಬಂಧ ಸಿನಿಮಾ ನಟಿ (Actress) ಮತ್ತು ಆಕೆಯ ತಂದೆಯ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಟಿ ಚಿಕಿತ್ಸೆ ಪಡೆದಿದ್ದಾರೆ. ನಟಿ ಅನಿತಾ ಗೌಡ ಮತ್ತು ಆಕೆಯ ತಂದೆ ಶ್ರೀನಿವಾಸ ಗೌಡ ಅವರ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ. ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಏನಿದು ಪ್ರಕರಣ? ಸಾಗರ ತಾಲೂಕು ಕಾಸ್ಪಾಡಿ ಗ್ರಾಮದ … Read more

ಮನೆ ಒಳಗೆ ನುಗ್ಗಿದ ಹುಲಿ, ಗಾಢ ನಿದ್ರೆಯಲ್ಲಿದ್ದ ವ್ಯಕ್ತಿ ಮೇಲೆ ದಾಳಿ, ಬ್ಯಾಕೋಡಿನಲ್ಲಿ ಭೀತಿ

Bykodu-SS-Bhog-Tiger-Attack-on-a-person

SHIVAMOGGA LIVE | 29 JUNE 2023 BYKODU : ನಡುರಾತ್ರಿ ಮನೆಯೊಳಗೆ ನುಗ್ಗಿದ ಹುಲಿಯೊಂದು ಮಲಗಿದ್ದ ವ್ಯಕ್ತಿಯೊಬ್ಬರ ಮೇಲೆ ದಾಳಿ (Tiger Attack) ನಡೆಸಿದೆ. ಗಾಯಾಳುವನ್ನು ಕುಂದಾಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬ್ಯಾಕೋಡು ಸಮೀಪದ ಎಸ್.ಎಸ್.ಬೋಗ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಾಠಿ ಗ್ರಾಮದ ಕಂಚಿಕೇರಿ ಗಣೇಶ್ (47) ಎಂಬುವವರ ಮೇಲೆ ಹುಲಿ ದಾಳಿ ಮಾಡಿದೆ. ಬುಧವಾರ ಮಧ್ಯರಾತ್ರಿ ಸುಮಾರು 2 ಗಂಟೆ ಹೊತ್ತಿಗೆ ಹುಲಿ ಮನೆಯೊಳಗೆ ನುಗ್ಗಿದೆ. ನಿದ್ರೆಯಲ್ಲಿದ್ದ ಗಣೇಶ್ ಮೇಲೆ ದಾಳಿ (Tiger Attack) … Read more

ಸಿಗಂದೂರು ಲಾಂಚ್‌ ಇನ್ನು ಮೂರ್ನಾಲ್ಕು ದಿನದಲ್ಲಿ ಬಂದ್‌, ಯಾಕೆ?

Sigandur-Launch-Ambaragodlu-Kalasavalli-Sharavathi-River

SHIVAMOGGA LIVE | 29 JUNE 2023 SAGARA : ಮಳೆ ಕೊರತೆಯಿಂದಾಗಿ ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಇನ್ನು ಮೂರ್ನಾಲ್ಕು ದಿನದಲ್ಲಿ ಲಾಂಚ್‌ (launch) ಸೇವೆ ಸ್ಥಗಿತಗೊಳ್ಳಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಕಡವು ನಿರೀಕ್ಷಕರ ಜೊತೆ ಸಭೆ ನಡಸಿದ್ದೇನೆ. ನೀರಿನ ಮಟ್ಟ ಇಳಿಕೆಯಾಗಿರುವುದರಿಂದ ಲಾಂಚ್‌ (launch) ಸಂಚಾರ ಕಷ್ಟವಾಗಲಿದೆ. ಈ ಹಿನ್ನೆಲೆ ಮೂರ್ನಾಲ್ಕು ದಿನದಲ್ಲಿ ಲಾಂಚ್‌ ಸೇವೆ … Read more

ಮದುವೆ ಮನೆಯಲ್ಲಿ ಸೂತಕದ ಛಾಯೆ, ಮರುಗಿದ ಜನತೆ, ಆಗಿದ್ದೇನು?

ACCIDENT-NEWS-GENERAL-IMAGE.

SHIVAMOGGA LIVE | 28 JUNE 2023 ANANDAPURA : ಇಬ್ಬರು ಹೆಣ್ಮಕ್ಕಳ ಮದುವೆಗೆ (Marriage) ಅಂತಿಮ ಸಿದ್ಧತೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದುವೆ ಹಿಂದಿನ ದಿನ ಘಟನೆ ಸಂಭವಿಸಿದ್ದು, ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸೂತಕ ಆವರಿಸಿದೆ. ಬನವಾಸಿ ನಿವಾಸಿ ಮಂಜುನಾಥ ಗೌಡ (58) ಮೃತ ದುರ್ದೈವಿ. ಆನಂದಪುರ ಸಮೀಪದ ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದು ಹೋಗುತ್ತಿದ್ದಾಗ ಮಂಜುನಾಥ ಗೌಡ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ … Read more

ಸಿಗಂದೂರು ಲಾಂಚ್‌, ಸ್ಥಳೀಯರಿಗೆ ಸಂಕಷ್ಟ, ಪ್ರವಾಸಿಗರಿಗೆ ಸಮಸ್ಯೆ ನಿಶ್ಚಿತ, ವಾಹನಗಳಿಗೆ ಇಲ್ಲಿದೆ ಪರ್ಯಾಯ ಮಾರ್ಗ

Sigandur-Launch-Ambaragodlu-Kalasavalli-Sharavathi-River

SHIVAMOGGA LIVE | 14 JUNE 2023 TUMARI : ಮುಂಗಾರು ವಿಳಂಬದಿಂದಾಗಿ ಶರಾವತಿ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ. ಜೂ.14ರಿಂದ ಲಾಂಚ್‌ನಲ್ಲಿ (Sigandur Launch) ಜನ ಸಂಚಾರಕ್ಕೆ ಮಾತ್ರ ಅವಕಾಶವಿರಲಿದೆ. ಮುಂದಿನ ಆದೇಶದವರೆಗೆ ವಾಹನಗಳನ್ನು ಲಾಂಚ್‌ಗೆ ಹತ್ತಿಸುವುದನ್ನು ನಿಷೇಧಿಸಲಾಗಿದೆ. ವಾಹನ ಹತ್ತಿಸದಿರಲು ಕಾರಣವೇನು? ಅಂಬಾರಗೋಡ್ಲು – ಕಳಸವಳ್ಳಿ ಭಾಗದಲ್ಲಿ ಲಾಂಚ್‌ಗಳ ನಿಲುಗಡೆ, ಜನ ಮತ್ತು ವಾಹನಗಳನ್ನು ಹತ್ತಿಸಲು ಕಾಂಕ್ರಿಟ್‌ ರ‍್ಯಾಂಪ್‌ಗಳನ್ನು ನಿರ್ಮಿಸಲಾಗಿದೆ. ನದಿಯಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದ ಈ ರ‍್ಯಾಂಪ್‌ಗಳ … Read more