ಫೋಟೊ ತೆಗೆಯುತ್ತಿದ್ದಾಗಲೇ ಛಾಯಾಗ್ರಾಹಕನಿಗೆ ಹೃದಯಾಘಾತ

sagara graphics

SHIVAMOGGA LIVE NEWS | 12 DECEMBER 2022 ಸಾಗರ : ಧಾರ್ಮಿಕ ಕಾರ್ಯಕ್ರಮ ಒಂದರಲ್ಲಿ ಫೋಟೊ ತೆಗೆಯುತ್ತಿದ್ದಾಗಲೆ ಛಾಯಗ್ರಾಹಕನಿಗೆ (photographer) ಹೃದಯಾಘಾತ ಸಂಭವಿಸಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತ ಮೃತಪಟ್ಟಿದ್ದಾರೆ. ಸಾಗರದ ರಾಮನಗರದ ಚಂದ್ರಶೇಖರ್ (43) ಮೃತರು. ತಾಲೂಕಿನ ಹೆಗ್ಗೋಡು ಸಮೀಪದ ಹೆಬ್ಬೈಲಿನ ಸೋಮೇಶ್ವರ ದೇವಸ್ಥಾನದಲ್ಲಿ ಚಂದ್ರಶೇಖರ್ ಅವರು ಫೋಟೊ ತೆಗೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಇದನ್ನೂ ಓದಿ – ಗಂಡ, ಹೆಂಡತಿ ಜಗಳ ಬಿಡಿಸಿದ ವ್ಯಕ್ತಿ ಮೇಲೆ ಚಾಕುವಿನಿಂದ ಹಲ್ಲೆ ಕಾರ್ಯಕ್ರಮದ ಫೋಟೊ (photographer) ತೆಗೆಯುತ್ತಿದ್ದಾಗಲೆ ಚಂದ್ರಶೇಖರ್ ಅವರು … Read more

ಚಿರತೆ ಪ್ರತ್ಯಕ್ಷ, ಸೆರೆ ಹಿಡಿಯಲು ಬೋನ್ ಇಟ್ಟ ಅರಣ್ಯ ಇಲಾಖೆ

Talaguppa Graphics

SHIVAMOGGA LIVE NEWS | 9 DECEMBER 2022 ತಾಳಗುಪ್ಪ : ಚಿರತೆ (trap for cheetah) ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸುಳ್ಳೂರಿನಲ್ಲಿ ಬೋನ್ ಇಟ್ಟಿದ್ದು, 10ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಸಿದೆ. ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ಳೂರು ಗ್ರಾಮದ ಅಣ್ಣಪ್ಪ ಎಂಬುವವರ ಮನೆ ಆವರಣದ ದನದ ಕೊಟ್ಟಿಗೆ ಬಳಿಕ ಬುಧವಾರ ರಾತ್ರಿ ಚಿರತೆ ಕಾಣಿಸಿಕೊಂಡಿತ್ತು.  ಅಣ್ಣಪ್ಪ ಅವರು ಕೊಟ್ಟಿಗೆಗೆ ಹೋಗಿದ್ದ ವೇಳೆ ಚಿರತೆ ಬಂದಿದೆ. ಅವರು ಜೋರಾಗಿ ಕೂಗಾಡಿದ್ದರಿಂದ ಚಿರತೆ ಓಡಿ ಹೋಗಿದೆ. … Read more

ಶಿವಮೊಗ್ಗ ಲೋಕಾಯುಕ್ತ ಪೊಲೀಸರ ದಾಳಿ, ಲಂಚದ ಹಣ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಅಧಿಕಾರಿ

Corruption-ACB-Raid-1.jpg

SHIVAMOGGA LIVE NEWS | 9 DECEMBER 2022 ಸಾಗರ : ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಯೊಬ್ಬನ ಮೇಲೆ ಲೋಕಾಯುಕ್ತ ದಾಳಿಯಾಗಿದೆ (lokayuktha raid). ಸರ್ವೆಯರ್ ರಂಗನಾಥ್ ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಸಾಗರದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸರ್ವೇಯರ್ ರಂಗನಾಥ್ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಗುರುವಾರ ಸಂಜೆ ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. (lokayuktha raid) ಮೊದಲು 500 ರೂ. ಪಡೆದಿದ್ದ ಸಾಗರದಲ್ಲಿ … Read more

ಮೈಸೂರು ತಾಳಗುಪ್ಪ ರೈಲಿನಲ್ಲಿ ಅನಾಮಧೇಯ ಗಿಫ್ಟ್ ಬಾಕ್ಸ್ | ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – 3 ಫಟಾಫಟ್ ನ್ಯೂಸ್

Fatafat-News-Sagara-Taluk-Update.

SHIVAMOGGA LIVE NEWS | 6 DECEMBER 2022 NEWS 1 – ಮೈಸೂರು – ತಾಳಗುಪ್ಪ ರೈಲಿನಲ್ಲಿ ಅನಾಮಧೇಯ ಗಿಫ್ಟ್ ಬಾಕ್ಸ್ ತಾಳಗುಪ್ಪ : ಮೈಸೂರ – ತಾಳಗುಪ್ಪ ರೈಲಿನಲ್ಲಿ ಅನಾಮಧೇಯ ಗಿಫ್ಟ್ ಬಾಕ್ಸ್ (gift box in train) ಪತ್ತೆಯಾಗಿತ್ತು. ಪೊಲೀಸರು ಅದನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ತಾಳಗುಪ್ಪ ನಿಲ್ದಾಣದಲ್ಲಿ ರೈಲು ಪರಿಶೀಲನೆ ವೇಳೆ ಗಿಫ್ಟ್ ಬಾಕ್ಸ್ ಸಿಕ್ಕಿದೆ. ರೈಲ್ವೆ ಪೊಲೀಸ್ ಎಎಸ್ಐ ಕೆ.ರಮೇಶ್ ಅವರು ಗಿಫ್ಟ್ ಬಾಕ್ಸನ್ನು ಪರಿಶೀಲಿಸಿದ್ದಾರೆ. ಬಳಿಕ ವಾರಸುದಾರರನ್ನು ಪತ್ತೆ ಹಚ್ಚಿ … Read more

ಶಿವಮೊಗ್ಗದ ಮತ್ತಿಬ್ಬರು ನಾಯಕರು ಬಿಜೆಪಿಗೆ ಸೇರ್ಪಡೆ, ಯಾರೆಲ್ಲ ಸೇರ್ಪಡೆಯಾದರು? ಏನೇನು ಹೇಳಿದರು?

Dr-Dhananjaya-Sarji-and-Sagara-Prashanth-Joins-BJP

SHIVAMOGGA LIVE NEWS | 4 DECEMBER 2022 ಶಿವಮೊಗ್ಗ : ಜಿಲ್ಲೆಯ ಮತ್ತಿಬ್ಬರು ನಾಯಕರು ಇವತ್ತು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶಿವಮೊಗ್ಗದ ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ ಮತ್ತು ಮಾಜಿ ಸಂಸದ ಕೆ.ಜಿ.ಶಿವಪ್ಪ ಅವರ ಪುತ್ರ ಸಾಗರದ ಕೆ.ಎಸ್.ಪ್ರಶಾಂತ್ ಅವರು ಪಕ್ಷ (party joining) ಸೇರ್ಪಡೆಯಾದರು. ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಇಬ್ಬರು ಬಿಜೆಪಿಗೆ ಸೇರ್ಪಡೆಯಾದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ಡಿ.ಎಸ್.ಅರುಣ್ … Read more

ಶರಾವತಿ ಹಿನ್ನೀರು ಭಾಗದಲ್ಲಿ ಸಾಲು ಸಾಲು ಕಳ್ಳತನ, ರಸ್ತೆ ತಡೆ ಮಾಡಿ ಜನರ ಆಕ್ರೋಶ

031222 Protest at Karuru Hobli in Sagara Sasgolli road

SHIVAMOGGA LIVE NEWS | 3 DECEMBER 2022 ಬ್ಯಾಕೋಡು : ಶರಾವತಿ ಹಿನ್ನೀರಿನ ಕರೂರು ಹೋಬಳಿಯಲ್ಲಿ (karur hobli) ಕಳ್ಳತನ ಪ್ರಕರಣಗಳು ಹೆಚ್ಚಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಬ್ಯಾಕೋಡು ಸಮೀಪ ಸಸಿಗೊಳ್ಳಿಯಲ್ಲಿ ಗ್ರಾಮಸ್ಥರು ವಾಹನ ಸಂಚಾರ ತಡೆದು ಪ್ರತಿಭಟಿಸಿದರು. ಸಾಲು ಸಾಲು ಕಳ್ಳತನವಾಗುತ್ತಿದ್ದರೂ ಆರೋಪಿಗಳ ಬಂಧನವಾಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. (karur hobli) ಸಾಲು ಸಾಲು ಕಳ್ಳತನ ಕೇಸ್ … Read more

ಮದುವೆಗೆ ತೆರಳುತ್ತಿದ್ದಾಗ ಯಮನಂತೆ ಎದುರಾದ ಲಾರಿ, ಮನೆಗೆ ಬೆಂಕಿ, ಎಲ್ಲವು ಭಸ್ಮ – 3 ಕ್ರೈಮ್ ನ್ಯೂಸ್

three-top-crime-news-update

SHIVAMOGGA LIVE NEWS | 3 DECEMBER 2022 NEWS 1 – ಮದುವೆಗೆ ತೆರಳುತ್ತಿದ್ದವರಿಗೆ ಯಮನಂತೆ ಎದುರಾದ ಲಾರಿ ಸೊರಬ : ಸಹೋದರಿಯ ಮಗಳ ಮದುವೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ (truck accident) ಹೊಡೆದು ವ್ಯಕ್ತಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಸವಾರ ಗಾಯಗೊಂಡಿದ್ದಾರೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಹುರಳಿಕೊಪ್ಪದಲ್ಲಿ ಘಟನೆ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ಮುತ್ತಪ್ಪ ಮೃತಪಟ್ಟಿದ್ದಾರೆ. ಸಂಬಂಧಿ ರವಿ ಎಂಬುವವರು ಗಾಯಗೊಂಡಿದ್ದಾರೆ. ಬ್ಯಾಗವಾದಿ ಗ್ರಾಮದಿಂದ ಆನವಟ್ಟಿಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಇಬ್ಬರು … Read more

ನಗರಸಭೆಯಲ್ಲಿ ರಾದ್ಧಾಂತ, ಸಾಗರದಲ್ಲಿ ನೀರು ಪೂರೈಕೆ, ಕಸ ಸಂಗ್ರಹ ಸ್ಥಗಿತ, ಈತನಕ ಏನೇನೆಲ್ಲ ಆಗಿದೆ?

Sagara-Nagara-Sabhe-Clash

SHIVAMOGGA LIVE NEWS | 1 DECEMBER 2022 ಸಾಗರ : ಪಟ್ಟಣದಲ್ಲಿ ನೀರು ಸರಬರಾಜು ಇಲ್ಲ. ಮನೆ ಮನೆಯಿಂದ ಕಸ ಸಂಗ್ರಹವು ಸ್ಥಗಿತ. ನ್ಯಾಯಕ್ಕಾಗಿ ಪಟ್ಟು ಹಿಡಿದ ಪೌರ ಕಾರ್ಮಿಕರು, ನಗರಸಭೆ ಸಿಬ್ಬಂದಿ. (attack on commissioner) ಸಾಗರ ನಗರ ಸಭೆ ಪೌರಾಯುಕ್ತರ ಮೇಲಿನ ಹಲ್ಲೆ ಖಂಡಿಸಿ, ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲ್ಲೆಕೋರರನ್ನು ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೆ ಕಾರಣಕ್ಕೆ ಸಾಗರ ಪಟ್ಟಣದಲ್ಲಿ ಇವತ್ತು ಕಸ ಸಂಗ್ರಹ ಮಾಡದೆ, ನೀರು … Read more

ಕದ್ದ ಕೆಲವೇ ಗಂಟೆಯಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳ, 1 ಫೋನ್ ಕದ್ದವನ ಬಳಿ ಸಿಕ್ತು 8 ಫೋನ್

301122 Mobile Theft case at Sagara Police Station

SHIVAMOGGA LIVE NEWS | 30 NOVEMBER 2022 ಸಾಗರ : ಅಂಗಡಿಯಲ್ಲಿ ಒಂದು ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಕಳ್ಳತನವಾದ (mobile laptop theft) ಕೆಲವೇ ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಎಂಟು ಮೊಬೈಲ್ ಫೋನ್, ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ. ಸಾಗರದ ಜೆ.ಪಿ.ನಗರದ ಎಸ್.ಎಂ.ವಿನಯ್ (24) ಬಂಧಿತ. ಸಾಗರದ ಸೊರಬ ರಸ್ತೆಯಲ್ಲಿರುವ ಮೊಬೈಲ್ ವರ್ಡ್ ಶೋ ರೂಂನಿಂದ ವಿನಯ್, ಒಂದು ಮೊಬೈಲ್ ಮತ್ತು ಲ್ಯಾಪ್ ಟಾಪ್ ಕದ್ದಿದ್ದ. ಈ ಸಂಬಂಧ ಸಾಗರ … Read more

ಹುಂಡಿಗಳನ್ನು ಕದ್ದು ದೇವಸ್ಥಾನದ ಆವರಣದಲ್ಲೆ ಒಡೆದು ಕಾಣಿಕೆ ಕದ್ದೊಯ್ದ ಖದೀಮರು

271122 Hundi Theft at Keladi Rameshwara Temple 1

SHIVAMOGGA LIVE NEWS | 28 NOVEMBER 2022 ಸಾಗರ : ಇತಿಹಾಸ ಪ್ರಸಿದ್ಧ ಕೆಳದಿಯ ಶ್ರೀ ರಾಮೇಶ್ವರ ದೇವಸ್ಥಾನ, ಶ್ರೀ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ಹುಂಡಿ ಒಡೆದು (hundi theft) ಕಳ್ಳತನ ಮಾಡಲಾಗಿದೆ. ಕಳ್ಳರು ದೇವಸ್ಥಾನದ ಹಂಚು ತೆಗೆದು ಒಳ ನುಗ್ಗಿ 5 ಹುಂಡಿಗಳನ್ನು ಕಳ್ಳತನ ಮಾಡಿದ್ದಾರೆ. ದೇವಸ್ಥಾನದ ಆವರಣದಲ್ಲಿಯೆ ಹುಂಡಿಗಳನ್ನು (hundi theft) ಒಡೆದು ಹಣ ಕಳ್ಳತನ ಮಾಡಿದ್ದಾರೆ. ಒಂದು ಹುಂಡಿಯಲ್ಲಿ ಇಂಟರ್ ಲಾಕ್ ವ್ಯವಸ್ಥೆ ಇದ್ದಿದ್ದರಿಂದ ಅದನ್ನು ಒಡೆಯಲಾಗದೆ ಹಾಗೆ ಬಿಟ್ಟು ಪರಾರಿಯಾಗಿದ್ದಾರೆ. ಕಾರ್ತಿಕ … Read more