ಕತ್ತು ಕೊಯ್ದು ವೃದ್ಧ ದಂಪತಿಯ ಬರ್ಬರ ಹತ್ಯೆ, ಚಿನ್ನಾಭರಣ ವ್ಯಾಪಾರಿಯ ಕೊಲೆಯಿಂದ ಆತಂಕ

Murder-General-Image-1.jpg

ಶಿವಮೊಗ್ಗ ಲೈವ್.ಕಾಂ | SAGARA NEWS | 13 ಸೆಪ್ಟಂಬರ್ 2020 ಸಾಗರ ತಾಲೂಕು ಬ್ಯಾಕೋಡು ಗ್ರಾಮದಲ್ಲಿ ಶನಿವಾರ ರಾತ್ರಿ ದಂಪತಿಯ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಚಿನ್ನದ ವ್ಯಾಪಾರ ಮಾಡುತ್ತಿದ್ದ ಇವರ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬ್ಯಾಕೋಡಿನ ಸುಂದರ್ ಶೇಟ್ (88) ಮತ್ತು ಪತ್ನಿ ಸುಲೋಚನಾ ಶೇಟ್ (70) ಅವರ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಕರೂರು ಹೋಬಳಿ ಭಾಗದಲ್ಲಿ ಬಹು ವರ್ಷದಿಂದ ಸುಂದರ್ ಶೇಟ್ ಅವರು ಚಿನ್ನಾಭರಣದ ವ್ಯಾಪಾರ ನಡೆಸುತ್ತಿದ್ದರು. ಶನಿವಾರ … Read more

ಸಾಗರ, ಭದ್ರಾವತಿ, ಶಿಕಾರಿಪುರದಲ್ಲಿ ಪೊಲೀಸರ ದಾಳಿ, ಅಪಾರ ಪ್ರಮಾಣದ ಗಾಂಜಾ ವಶಕ್ಕೆ

110920 Ganja Seized in Shikaripura 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಸೆಪ್ಟಂಬರ್ 2020 ಗಾಂಜಾ ಮಾರಾಟಗಾರರು, ಬೆಳಗಾರರ ವಿರುದ್ಧ ಶಿವಮೊಗ್ಗ ಪೊಲೀಸರು ಕಾರ್ಯಾಚರಣೆ ಬಿರುಸುಗೊಳಿಸಿದ್ದಾರೆ. ಜಿಲ್ಲೆಯ ಮೂರು ಕಡೆ ದಾಳಿ ನಡೆಸಿ ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಎಲ್ಲೆಲ್ಲಿ ದಾಳಿಯಾಗಿದೆ? ಪ್ರಕರಣ 1 | ಭದ್ರಾವತಿ ಹಳೇನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಎಂಜಿನಿಯರಿಂಗ್ ವಿದ್ಯಾರ್ಥಿ ಶೇಖ್ ಅಬೂಬ್, ವೆಲ್ಡಿಂಗ್ ಕೆಲಸಗಾರ ಜಾಫರ್, ಸಾದಿಕ್, ಸಾದಿಕ್ ಪಾಷಾ ಎಂಬುವವರನ್ನು ಬಂಧಿಸಿದ್ದಾರೆ. ಇವರಿಂದ 1.250 ಕೆ.ಜಿ ಗಾಂಜಾ, ಎರಡು ಬೈಕ್‍ಗಳನ್ನು … Read more

ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗುತ್ತೆ ಜೋಗ, ಇಲ್ಲಿ ಏನೇನೆಲ್ಲ ನಿರ್ಮಾಣವಾಗುತ್ತೆ? ಯಾವೆಲ್ಲ ಸೌಲಭ್ಯ ಸಿಗಲಿವೆ?

100920 Jog Falls Meeting in Sagara 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಸೆಪ್ಟಂಬರ್ 2020 ವಿಶ್ವ ವಿಖ್ಯಾತ ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಾಗಲೇ 120 ಕೋಟಿ ರೂ. ಅನುಮೋದನೆ ನೀಡಿದ್ದು, ಎಲ್ಲಾ ಮೂಲಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇದನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸಬೇಕಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು. ಜೋಗ ಅಭಿವೃದ್ಧಿಗೆ ನೀಲ ನಕಾಶೆ ರೂಪಿಸುವ ಕುರಿತು ಜೋಗದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು. ಜೋಗದಲ್ಲಿ ಪ್ರವಾಸಿಗರು ಇಡೀ … Read more

ಡ್ರಗ್ಸ್ ದಂಧೆಕೋರರ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಿ, ಸಾಗರದಲ್ಲಿ ಪ್ರತಿಭಟನೆ, ಸರ್ಕಾರಕ್ಕೆ ಒತ್ತಾಯ

100920 ABVP Protest Against Drugs in Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 10 ಸೆಪ್ಟಂಬರ್ 2020 ಡ್ರಗ್ಸ್ ಜಾಲದ ಹಿಂದಿರುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸಾಗರ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಸೇವನೆ ಆರೋಪ ಕೇಳಿ ಬಂದಿದೆ. ಇದರ ಹಿಂದೆ ರಾಜಕಾರಣಿಗಳ ಮಕ್ಕಳು ಇರುವ ಕುರಿತು ಹೇಳಲಾಗುತ್ತಿದೆ. ಯಾರ ಪ್ರಭಾವಕ್ಕೂ ಮಣಿಯದೆ ತಪ್ಪಿತಸ್ಥರ … Read more

ಸಾಗರದ ವಿವಿಧೆಡೆ ಅಬಕಾರಿ ಇಲಾಖೆಯಿಂದ ದಿಢೀರ್ ದಾಳಿ, ನೂರು ಲೀಟರ್ ಬೆಲ್ಲದ ಕೊಳೆ, ನಾಲ್ಕು ಲೀಟರ್ ಕಳ್ಳಭಟ್ಟಿ ವಶಕ್ಕೆ

090920 Excise Department Raid At Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 9 ಸೆಪ್ಟಂಬರ್ 2020 ಸಾಗರ ತಾಲೂಕಿನ ವಿವಿಧೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ನೂರು ಲೀಟರ್ ಬೆಲ್ಲದ ಕೊಳೆ ಮತ್ತು ನಾಲ್ಕು ಲೀಟರ್ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ. ತಡಗಳಲೆ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಕನ್ನಪ್ಪ (40) ಎಂಬುವವರ ಮನೆ ಮತ್ತು ಆವರಣದಲ್ಲಿ ದಾಸ್ತಾನು ಮಾಡಿದ್ದ ಬೆಲ್ಲದ ಕೊಳೆ ಮತ್ತು ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯದ 11,500 ರಂದು ಅಂದಾಜು ಮಾಡಲಾಗಿದೆ. … Read more

ಸಿಗಂದೂರು ಚೌಡೇಶ್ವರಿ ದೇಗುಲ ಮುಜರಾಯಿಗೆ ಬೇಡ, ಅಂತಹ ಪ್ರಯತ್ನವಾದರೆ ಉಗ್ರ ಹೋರಾಟ

090920 Protest in Favour of Siganduru 1

ಶಿವಮೊಗ್ಗ ಲೈವ್.ಕಾಂ | SAGARA NEWS | 9 ಸೆಪ್ಟಂಬರ್ 2020 ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿಗೆ ಸೇರಿಸದಂತೆ ಆಗ್ರಹಿಸಿದ ಸಾಗರದಲ್ಲಿ ನಾಗರಿಕ ವೇದಿಕೆ ವತಿಯಿಂದ ಉಪ ವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಗಂದೂರು ಕ್ಷೇತ್ರಕ್ಕೆ ಶತಮಾನಗಳ ಐತಿಹ್ಯವಿದೆ. ಧರ್ಮದರ್ಶಿ ರಾಮಪ್ಪ ಅವರು ಸುಮಾರು 30 ವರ್ಷದಿಂದ ದೇಗುಲದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಿಗಂದೂರು ಚೌಡೇಶ್ವರಿ ಟ್ರಸ್ಟ್‍ ಮೂಲಕ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ದೇಗುಲಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಶ್ರಮಿಸುತ್ತಿದ್ದಾರೆ … Read more

ಲಿಂಗನಮಕ್ಕಿ ಜಲಾಶಯದ ವ್ಯಾಪ್ತಿಯ ಜನರಿಗೆ ಮುನ್ನೆಚ್ಚರಿಕೆ

ಶಿವಮೊಗ್ಗ ಲೈವ್.ಕಾಂ | SAGARA NEWS | 8 ಸೆಪ್ಟಂಬರ್ 2020 ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಹಾಗಾಗಿ ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟವು ಏರುತ್ತಿದೆ. ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿ ಶೀಘ್ರದಲ್ಲೆ ಜಲಾಶಯವು ಗರಿಷ್ಠ ಮಟ್ಟವನ್ನು ತಲುಪುವ ಸಂಭವವಿದ್ದು, ಆಣೆಕಟ್ಟೆಯ ಸುರಕ್ಷತಾ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ಅಣೆಕಟ್ಟೆಯ … Read more

ಗಜಾನನ ಸಾರಿಗೆ ಸಂಸ್ಥೆಯಲ್ಲಿ ಗುಂಪುಗಳ ನಡುವೆ ಹೊಡೆದಾಟ, ಇಬ್ಬರಿಗೆ ಗಾಯ, ಗಲಾಟೆಗೇನು ಕಾರಣ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 8 ಸೆಪ್ಟಂಬರ್ 2020 ಗಜಾನನ ಸಾರಿಗೆ ಸಂಸ್ಥೆಯ ಎರಡು ಗುಂಪುಗಳ ನಡುವೆ ಹೊಡೆದಾಟ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ಸಂಬಂಧ ಸಾಗರ ನಗರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಗಲಾಟೆಗೆ ಕಾರಣವೇನು? ಲಾಕ್‍ಡೌನ್ ಹಿನ್ನೆಲೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸೋಮವಾರದಿಂದ ಹಲವು ಮಾರ್ಗದಲ್ಲಿ ಬಸ್ ಸಂಚಾರ ಪುನಾರಂಭವಾಗಲಿದೆ ಎಂಬ ಮಾಹಿತಿ ಹಿನ್ನೆಲೆ ಕಾರ್ಮಿಕರು ಕಂಪನಿಗೆ ಆಗಮಿಸಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಮುಸುಕಿನ ಗುದ್ದಾಟ ಬಹಿರಂಗ … Read more

ಆನಂದಪುರದ ಕೆರೆಕೊಪ್ಪದಲ್ಲಿ ಪ್ರಭಾವಿಗಳಿಂದ ಸೊಪ್ಪಿಪನಬೆಟ್ಟ ಅತಿಕ್ರಮ, ತೆರವಿಗೆ ಆಗ್ರಹ

080920 Soppina Betta Encroachment 1

ಶಿವಮೊಗ್ಗ ಲೈವ್.ಕಾಂ | SAGARA NEWS | 8 ಸೆಪ್ಟಂಬರ್ 2020 ಸೊಪ್ಪಿನಬೆಟ್ಟ ಅತಿಕ್ರಮ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭೀಮನಕೋಣೆ ಗ್ರಾಮ ಸೇವಾ ಸಂಘದ ವತಿಯಿಂದ ಸಾಗರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಆನಂದಪುರ ಹೋಬಳಿ ಕೆರೆಕೊಪ್ಪ ಗ್ರಾಮದಲ್ಲಿ ಕೆಲವು ಪ್ರಭಾವಿಗಳು ಸೊಪ್ಪನಬೆಟ್ಟವನ್ನು ಅತಿಕ್ರಮ ಮಾಡಿಕೊಂಡಿದ್ದಾರೆ. ಗಿಡಮರಗಳನ್ನು ಬೇಲಿ ಹಾಕಿಕೊಳ್ಳುತ್ತಿದ್ದಾರೆ. ಇದರಿಂದ ಸೊಪ್ಪನಬೆಟ್ಟಕ್ಕೆ ಆತಂಕ ಎದುರಾಗಿದೆ. ಸೊಪ್ಪಿನಬೆಟ್ಟ ಅತಿಕ್ರಮ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭೀಮನಕೋಣೆ ಗ್ರಾಮ ಸೇವಾ … Read more

ಸಾಗರ ಶಾಸಕ ಹರತಾಳು ಹಾಲಪ್ಪ ಮತ್ತೆ ಆಸ್ಪತ್ರೆಗೆ ದಾಖಲು

Haratalu-Halappa

ಶಿವಮೊಗ್ಗ ಲೈವ್.ಕಾಂ | SAGARA NEWS | 8 ಸೆಪ್ಟಂಬರ್ 2020 ಕೆಲವು ದಿನದ ಹಿಂದೆಯಷ್ಟೆ ಕರೋನದಿಂದ ಗುಣವಾಗಿ ಸಾಗರಕ್ಕೆ ಮರಳಿದ್ದ ಶಾಸಕ ಹರತಾಳು ಹಾಲಪ್ಪ ಅವರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದಿದೆ. ಹಾಗಾಗಿ ಅವರು ಬೆಂಗಳೂರಿಗೆ ತೆರಳಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್‍ಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಹರತಾಳು ಹಾಲಪ್ಪ ಅವರಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಆದರೆ ಹಾಲಪ್ಪ ಅವರು ಕ್ಷೇತ್ರದ ವಿವಿಧೆಡೆ ಸಂಚರಿಸಿ, ಪರಿಶೀಲನೆ ನಡೆಸಿದ್ದರು. ಊಟದಲ್ಲಿ ವ್ಯತ್ಯಾಸವಾದ … Read more