ಶಿಕ್ಷಣ ಸಂಸ್ಥೆ ಬಸ್‌ಗೆ ಬೈಕ್‌ ಡಿಕ್ಕಿ, 36 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಅಪಘಾತ?

ACCIDENT-NEWS-GENERAL-IMAGE.

ಶಿಕಾರಿಪುರ: ಶಿಕ್ಷಣ ಸಂಸ್ಥೆಯ ವಾಹನಕ್ಕೆ ಹಿಂಬದಿಯಿಂದ ಬೈಕ್‌ನಲ್ಲಿ ಬಂದು ಗುದ್ದಿದ ಯುವಕ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಇದನ್ನೂ ಓದಿ » ಅಂಜನಾಪುರ ಜಲಾಶಯದ ಹಿನ್ನೀರಿಗೆ ಹಾರಿದ ರೈತ ಶಿಕಾರಿಪುರ ಪಟ್ಟಣದ ಆಶ್ರಯ ಬಡಾವಣೆ ವಾಸಿ ವಿನಾಯಕ (36) ಮೃತಪಟ್ಟವರು. ಬೈಕಿನ ಹಿಂಬದಿ ಸವಾರ ಮೋಹನ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗ ರಸ್ತೆಯ ಶಾಹಿ ಗಾರ್ಮೆಂಟ್ಸ್‌ನಲ್ಲಿ ನಿತ್ಯದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಮೃತ ವಿನಾಯಕಗೆ ಗರ್ಭಿಣಿ ಪತ್ನಿ, ತಂದೆ, ತಾಯಿ ಇದ್ದಾರೆ. ಶಿಕಾರಿಪುರ ಪಟ್ಟಣ … Read more

ಅಂಜನಾಪುರ ಜಲಾಶಯದ ಹಿನ್ನೀರಿಗೆ ಹಾರಿದ ರೈತ

shikaripura-anjanapura-village-board

ಶಿಕಾರಿಪುರ: ಸಾಲದ ಹೊರೆ ತಾಳಲಾರದೆ ಶಿಕಾರಿಪುರ (Shikaripura) ತಾಲೂಕು ಹಿರೇಕೊರಲಹಳ್ಳಿ (Hirekoralahalli) ಗ್ರಾಮದ ವೃದ್ಧ ರೈತ ಪೀಕ್ಲಾ ನಾಯ್ಕ (70) ಅಂಜನಾಪುರ ಜಲಾಶಯದ (Anjanapura Dam) ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಜಮೀನಿಗೆ ಹೋದಾಗ ಸಮೀಪದ ಅಂಜನಾಪುರ ಜಲಾಶಯ ಹಿನ್ನೀರಿಗೆ ಹಾರಿದ್ದಾರೆ ಎಂದು ಆರೋಪಿಸಲಾಗಿದೆ. ಹಾರೋಗೊಪ್ಪ (Harogoppa) ಗ್ರಾಮೀಣ ಬ್ಯಾಂಕ್‌, ಫೈನಾನ್ಸ್‌ನಲ್ಲಿ (Finance) ಸಾಲ ಹಾಗೂ ಕೈಸಾಲವನ್ನು ಮಾಡಿಕೊಂಡಿದ್ದರು ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more

ಶಿಕಾರಿಪುರ ಪುರಸಭೆಯ ಮಹತ್ವದ ಆದೇಶ, ತಪ್ಪಿದಲ್ಲಿ ದಂಡ ಕಟ್ಟಿಸಿಕೊಳ್ಳುವ ಎಚ್ಚರಿಕೆ

291124 Shikaripura Purasabhe general image

ಶಿಕಾರಿಪುರ: ಪುರಸಭೆ ವ್ಯಾಪ್ತಿಯ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂರ್ಕೀಣಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳ ಆವರಣದಲ್ಲಿ ಬೀದಿ ನಾಯಿಗಳು ವಾಸವಿದ್ದಲ್ಲಿ ಅವುಗಳ ಸಂಖ್ಯೆಯನ್ನು ಲೆಕ್ಕ ಮಾಡಿ ಲಿಖಿತವಾಗಿ ಶಿಕಾರಿಪುರ ಪುರಸಭೆಯ ಮುಖ್ಯಾಧಿಕಾರಿಗಳಿಗೆ ತಿಳಿಸುವಂತೆ ಸೂಚಿಸಲಾಗಿದೆ. ಸಂಸ್ಥೆಯ ಆವರಣದಲ್ಲಿ ಬೀದಿನಾಯಿಗಳ ಉಪಟಳ ತಡೆಯಲು ಹಾಗೂ ಅವುಗಳ ಪ್ರವೇಶ ನಿಯಂತ್ರಿಸಲು ಕ್ರಮ ವಹಿಸಬೇಕು. ನಗರ ಸ್ಥಳೀಯ ಸಂಸ್ಥೆಯಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಸಹಕರಿಸಬೇಕು. ಅವುಗಳ ಪ್ರವೇಶ ನಿರ್ಭಂದಿಸುವುದನ್ನು ಮೇಲ್ವಿಚಾರಣೆ ಮಾಡಲು ಸಂಸ್ಥೆಯ ವತಿಯಿಂದ ಒಬ್ಬ … Read more

ಹಬ್ಬದ ವೇಳೆ ಕೆರೆಗೆ ಹಾರಿ ‘ಮುಗಳಿಕೊಪ್ಪದ ಮುತ್ತು’ ಸಾವು

mugalikoppa-muttu-incident-at-hulaginakoppa-in-shikaripura.

ಶಿಕಾರಿಪುರ: ಹೋರಿ ಬೆದರಿಸುವ ಹಬ್ಬದ ವೇಳೆ ಹೋರಿಯೊಂದು ಓಡುವ ಭರದಲ್ಲಿ ಕೆರೆಗೆ ಹಾರಿ ಮೃತಪಟ್ಟಿದೆ. ಶಿಕಾರಿಪುರ ತಾಲೂಕು ಹುಲಗಿನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಹಬ್ಬದಲ್ಲಿ ಘಟನೆ ಸಂಭವಿಸಿದೆ. ಹುಲಗಿನಕೊಪ್ಪದಲ್ಲಿ ಶುಕ್ರವಾರ ಆಯೋಜಿಸಿದ್ದ ಹೋರಿ ಹಬ್ಬದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಅನೇಕ ಹೋರಿಗಳು ಪಾಲ್ಗೊಂಡಿದ್ದವು. ಹೋರಿಗಳಿಗೆ ಕೊಬ್ಬರಿ ಹಾಗೂ ಬಲೂನ್‌ಗಳನ್ನು ಕಟ್ಟಿ ಅಖಾಡಕ್ಕೆ ಬಿಡಲಾಗುತ್ತಿತ್ತು. ಈ ವೇಳೆ ನಾಗರಾಜ್‌ ಜಂಬೂರು ಎಂಬುವರ ಮುಗಳಿಕೊಪ್ಪದ ಮುತ್ತು ಎಂಬ ಹೆಸರಿನ ಹೋರಿ ಹುಲಗಿನಕಟ್ಟೆ ಕೆರೆಗೆ ಹಾರಿದೆ. ಕೂಡಲೆ ಕೆರೆಗೆ ಇಳಿದು ಹೋರಿಯನ್ನು … Read more

ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್‌ ದಾಳಿ, ಇಬ್ಬರ ಬಂಧನ

Shikaripura-Town-Police-Station

ಶಿರಾಳಕೊಪ್ಪ: ಪಟ್ಟಣದ ಪೊಲೀಸರು ಮಟ್ಕಾ ಅಡ್ಡೆ ಮೇಲೆ ದಾಳಿ (Raid) ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ. ಹೆಚ್‌.ಕೆ.ರಸ್ತೆಯ ಹಳೆ ಪೆಟ್ರೋಲ್ ಬಂಕ್ ಸರ್ಕಲ್ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನ ಸರ್ಕಲ್ ಪ್ರದೇಶದಲ್ಲಿ ಮಟ್ಕಾ ಬರೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ ದಾಳಿ ನಡೆಸಲಾಗಿದೆ. ರಿಯಾಜ್ ಮತ್ತು ವೀರಭದ್ರಪ್ಪ ಎಂಬುವರನ್ನು ಸಬ್ ಇನ್ಸ್‌ಪೆಕ್ಟರ್ ಟಿ.ಬಿ.ಪ್ರಶಾಂತ್ ಕುಮಾ‌ರ್ ನೇತೃತ್ವದ ತಂಡ ಬಂಧಿಸಿದೆ. ಬಂಧಿತರಿಂದ ₹5,000 ನಗದು ಹಾಗೂ ಮಟ್ಕಾ ಬರವಣಿಗೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ  … Read more

ಅಬಕಾರಿ ಇಲಾಖೆ ಚಾಲಕ ಅಮಾನತು, ಕಚೇರಿಗೆ ಹಾಜರಾಗಿ ವಿವರಣೆಗೆ ಸೂಚನೆ, ಕಾರಣವೇನು?

Shimoga-News-update

ಶಿವಮೊಗ್ಗ: ಅಬಕಾರಿ ಇಲಾಖೆಯ ಶಿಕಾರಿಪುರ ವಲಯದ ಉಪ ಆಯುಕ್ತರ ಕಚೇರಿ ಚಾಲಕ ಸೋಮೇಶ್ವರ್‌.ಕೆ.ಎ ಅವರನ್ನು ಅಮಾನತು (Suspend) ಮಾಡಿ ಉಪ ಆಯುಕ್ತರು ಆದೇಶಿಸಿದ್ದಾರೆ. 2024ರ ಆ.26ರಿಂದ ಅನಧಿಕೃತವಾಗಿ ಗೈರಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೋಮೇಶ್ವರ್ ಕೆ.ಎ ಅವರಿಗೆ ಗೈರು ಹಾಜರಾದ ಕುರಿತು ಕಾರಣ ಕೇಳಿ ಕಚೇರಿಯಿಂದ ಅಂತಿಮ ನೋಟಿಸ್ ನೀಡಲಾಗಿತ್ತು. ಶಿವಮೊಗ್ಗದಲ್ಲಿ ಮನೆ ಬಳಿ ವಿಚಾರಣೆ ನಡೆಸಿದಾಗ ಅವರು ಅಲ್ಲಿ ವಾಸವಾಗಿಲ್ಲ ಎಂದು ತಿಳಿದು ಬಂದಿತ್ತು. ಸ್ಥಳ ಮಹಜರ್‌ ಮಾಡಿ ಶಿಕಾರಿಪುರ ವಲಯದ … Read more

ಮಾಜಿ MLAಯನ್ನು ಕೆಳಗೆ ಉರುಳಿಸಿದ ಹೋರಿ, ವಿಡಿಯೋ ವೈರಲ್

251025-Hori-Hits-former-MLA-at-Shikaripura.webp

ಶಿಕಾರಿಪುರ: ಹೋರಿ ಹಬ್ಬ ವೀಕ್ಷಿಸಲು ತೆರಳಿದ್ದ ಮಾಜಿ ಶಾಸಕ (Former MLA) ಮಹಲಿಂಗಪ್ಪ ಅವರಿಗೆ ಹೋರಿ ತಿವಿದಿದೆ. ಅದೃಷ್ಟವಶಾತ್‌ ಅವರು ಪಾರಾಗಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ. ಮಾಜಿ ಶಾಸಕ ಮಹಾಲಿಂಗಪ್ಪ ಶಿಕಾರಿಪುರದ ಬಳ್ಳಿಗಾವಿಯ ಹೋರಿ ಹಬ್ಬಕ್ಕೆ ತೆರಳಿದ್ದರು. ಹೋರಿಯೊಂದು ಜನರನ್ನು ಓಡಿಸಿಕೊಂಡು ಬಂದಿತ್ತು. ಕೂಡಲೆ ಮಹಾಲಿಂಗಪ್ಪ ಅವರು ಮನೆಯೊಂದರ ಬಾಗಿಲಿನ ಬಳಿ ತೆರಳಿ ನಿಂತಿದ್ದರು. ಅವರತ್ತ ನುಗ್ಗಿದ ಹೋರಿ ಕೊಂಬಿನಲ್ಲಿ ಮಹಾಲಿಂಗಪ್ಪ ಅವರ ಬಟ್ಟೆಗೆ ಚುಚ್ಚಿ ಮೇಲೆ ಎತ್ತಿ ಕೆಳಗೆ ಬೀಳಿಸಿತ್ತು. ಅದೃಷ್ಟವಶಾತ್‌ ಮಹಾಲಿಂಗಪ್ಪ ಪಾರಾಗಿದ್ದಾರೆ. … Read more

ಸ್ಪರ್ಧೆ ವೇಳೆ ಬಸ್‌ಗೆ ಡಿಕ್ಕಿಯಾಗಿ ಹೋರಿ ಸಾವು, ಹೇಗಾಯ್ತು ಘಟನೆ?

Bus-collides-with-Hori-at-Shikaripura.

ಶಿಕಾರಿಪುರ: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಓಡಿಬಂದ ಹೋರಿಯೊಂದು ಚಲಿಸುತ್ತಿದ್ದ ಬಸ್‌ಗೆ (Bus) ಗುದ್ದಿ ಸ್ಥಳದಲ್ಲೇ ಸಾವನ್ನಪ್ಪಿದೆ. ಪಟ್ಟಣದ ದೊಡ್ಡಕೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಹೋರಿ ಬೆದರಿಸುವ ಹಬ್ಬದ ವೇಳೆ ಓಡಿಬಂದ ಹೋರಿಯೊಂದು ಚಲಿಸುತ್ತಿದ್ದ ಬಸ್‌ಗೆ ಗುದ್ದಿ ಸ್ಥಳದಲ್ಲೇ ಮೃತಪಟ್ಟಿದೆ. ಪಟ್ಟಣದ ವಿನಾಯಕ ನಗರದ ಹೋರಿಯೊಂದು ಅಖಾಡದಿಂದ ತಪ್ಪಿಸಿಕೊಂಡು ಬರುವಾಗ ಶಿವಮೊಗ್ಗ ರಸ್ತೆಯ ಕಾಮಧೇನು ಪೆಟ್ರೋಲ್ ಬಂಕ್ ಬಳಿ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆಯಿತು. ಹೋರಿಯನ್ನು ಕ್ರೇನ್ ಮೂಲಕ ಸಾಗಿಸಲಾಯಿತು. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more

ತಡರಾತ್ರಿ ಮನೆ ಮುಂದೆ ಕಟ್ಟಿದ್ದ ನಾಯಿ ಕೂಗಾಟ, ಹೊರ ಬಂದ ಮನೆಯವರಿಗೆ ಆಘಾತ, ಗ್ರಾಮದಲ್ಲಿ ಆತಂಕ

Leopard-found-at-mulukoppa-tanda-village-in-Shikaripura

ಶಿಕಾರಿಪುರ: ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ (Leopard) ದಾಳಿ ನಡೆಸಿದೆ. ಮನೆಯವರು ಹೊರ ಬರುತ್ತಿದ್ದಂತೆ ಚಿರತೆ ಓಡಿ ಹೋಗಿದೆ. ಶಿಕಾರಿಪುರ ತಾಲೂಕು ಮುಳುಕೊಪ್ಪ ತಾಂಡದಲ್ಲಿ ಚಿರತೆ ಕಾಣಿಸಿಕೊಂಡಿದೆ. ಇಲ್ಲಿನ ಮನೆಯೊಂದರ ಮುಂದೆ ಕಟ್ಟಿ ಹಾಕಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ. ನಾಯಿ ಕೂಗಾಟ ಕೇಳಿ ಅಕ್ಕಪಕ್ಕದವರೆಲ್ಲ ಮನೆಯಿಂದ ಹೊರ ಬಂದಾಗ ಚಿರತೆ ಓಡಿ ಹೋಗಿದೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಮುಳುಕೊಪ್ಪ ತಾಂಡ ವಾಸಿಗಳಲ್ಲಿ ಆತಂಕ ಮೂಡಿಸಿದೆ. ಕೂಡಲೆ … Read more

ಸರ್ಕಾರಿ ಶಾಲೆ ಆವರಣದಲ್ಲಿ ಹೆಜ್ಜೇನು ದಾಳಿ, ವಿದ್ಯಾರ್ಥಿಗಳಿಗೆ ಗಾಯ

Baganakatte-students-at-government-hospital

ಶಿಕಾರಿಪುರ: ತಾಲೂಕಿನ ಬಗನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು (Bee) ದಾಳಿ ನಡೆಸಿವೆ. ಘಟನೆಯಲ್ಲಿ ಒಟ್ಟು 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ‌ ಇಂದು ಬೆಳಗ್ಗೆ ಶಾಲೆ ಆರಂಭವಾಗುತ್ತಿದ್ದಂತೆ ಸಮೀಪದ ಮರದಲ್ಲಿ ಗೂಡು ಕಟ್ಟಿರುವ ಹೆಜ್ಜೇನುಗಳು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿವೆ. ವಿದ್ಯಾರ್ಥಿಗಳು ಮತ್ತು ಓರ್ವ ಮಹಿಳಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೂಡಲೆ ಗ್ರಾಮಸ್ಥರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ತೀವ್ರ ಗಾಯಗೊಂಡಿರುವ 6 ವಿದ್ಯಾರ್ಥಿಗಳನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ » ಖಾಸಗಿ … Read more