ಗಾಜನೂರಿನ ತುಂಗಾ ಜಲಾಶಯದಿಂದಲೂ ಹೆಚ್ಚಿನ ಪ್ರಮಾಣದ ನೀರು ಹೊರಕ್ಕೆ

Gajanur-Tunga-Dam-water-release.

ಶಿವಮೊಗ್ಗ | ತೀರ್ಥಹಳ್ಳಿ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ತುಂಗಾ ಜಲಾಶಯದ (tunga dam) ಒಳ ಹರಿವು ಏರಿಕೆಯಾಗಿದೆ. ಹಾಗಾಗಿ ಹೆಚ್ಚುವರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ ಪ್ರಸ್ತುತ 46,600 ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯ ಭರ್ತಿ ಆಗಿರುವುದರಿಂದ ಬಂದಷ್ಟು ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಇದರಿಂದ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಸಂಜೆ ವೇಳೆಗೆ ಹೆಚ್ಚಿನ ನೀರು ತುಂಗಾ ಜಲಾಶಯಕ್ಕೆ 39,250 ಕ್ಯೂಸೆಕ್ ಒಳ ಹರಿವು ಇತ್ತು. … Read more

ಶಿವಮೊಗ್ಗ – ರಿಪ್ಪನ್ ಪೇಟೆ ರಸ್ತೆಯಲ್ಲಿ ಹಿಟ್ ಅಂಡ್ ರನ್ ಕೇಸ್, ಬೈಕ್ ಸವಾರ ಸಾವು

crime name image

ಶಿವಮೊಗ್ಗ | ಕಾರು, ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಚಾಲಕ ಕಾರನ್ನು ನಿಲ್ಲಿಸದೆ (HIT AND RUN) ಪರಾರಿಯಾಗಿದ್ದಾನೆ. ಬೈಕ್ ಸವಾರ ಸುರೇಂದ್ರ (45) ಮೃತ ದುರ್ದೈವಿ. ಹೊಸನಗರ ತಾಲೂಕು ಅರಸಾಳು ಗ್ರಾಮದ ತಮ್ಮಡಿಕೊಪ್ಪದಿಂದ ಸುರೇಂದ್ರ ಅವರು ಬೈಕಿನಲ್ಲಿ ಶಿವಮೊಗ್ಗದ ಕಡೆಗೆ ಬರುತ್ತಿದ್ದರು. ಮಂಡಘಟ್ಟದ ಬಳಿ ಕಾರೊಂದು ಸುರೇಂದ್ರ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದವಾದರೂ ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಕೂಡಲೆ ಸ್ಥಳೀಯರು ಮತ್ತು ದಾರಿಯಲ್ಲಿ ಹೋಗುತ್ತಿದ್ದವರು … Read more

ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಸರ್ಕಾರಿ ಬಸ್ಸಿಗೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರು

crime name image

ಶಿವಮೊಗ್ಗ | ಉಡುಪಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಸರ್ಕಾರಿ ಬಸ್’ಗೆ ಎದುರಿನಿಂದ ಬಂದ ಸ್ವಿಫ್ಟ್ (SWIFT) ಕಾರು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯ ಹೊಸಳ್ಳಿ ಗ್ರಾಮದ ದರ್ಗಾ ಬಳಿ ಘಟನೆ ಸಂಭವಿಸಿದೆ. ಆ.4ರಂದು ರಾತ್ರಿ 8.30ರ ಹೊತ್ತಿಗೆ ಉಡುಪಿಯಿಂದ ಸರ್ಕಾರಿ ಬಸ್ ಶಿವಮೊಗ್ಗಕ್ಕೆ ಬರುತ್ತಿತ್ತು. ಈ ವೇಳೆ ಎದುರಿನಿಂದ ಬಂದ ಸ್ವಿಫ್ಟ್ (SWIFT) ಕಾರು ಬಸ್ಸಿಗೆ ಡಿಕ್ಕಿ ಹೊಡೆದಿದೆ. ಘಟನೆಲ್ಲಿ ಬಸ್ಸಿನ ಹೆಡ್ ಲೈಟ್, ಬಂಪರ್ ಜಖಂ ಆಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ … Read more

ಬೈಕಿನಲ್ಲಿ ತೆರಳುತ್ತಿದ್ದ ದಂಪತಿ ಕಣ್ಣಿಗೆ ಖಾರದ ಪುಡಿ ಎರಚಿ, ಮನಸೋಯಿಚ್ಛೆ ಹಲ್ಲೆ

Tunga-Nagara-Police-Station-Shimoga

ಶಿವಮೊಗ್ಗ | ಬೈಕ್’ನಲ್ಲಿ ತೆರಳುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ (ASSAULT) ನಡೆಸಲಾಗಿದೆ. ಜಮೀನು ವಿಚಾರವಾಗಿ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ನಾಗರಾಜು ಮತ್ತು ಅವರ ಪತ್ನಿ ನಿರ್ಮಲಾ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಜಮೀನು ವಿಚಾರವಾಗಿ ಗಲಾಟೆ ಜಮೀನು ವಿಚಾರ ಸಂಬಂಧ ಸ್ಥಳೀಯರೊಬ್ಬರ ಜೊತೆಗೆ ನಾಗರಾಜು ಅವರಿಗೆ ಆಗಾಗ ಜಗಳವಾಗುತ್ತಿತ್ತು. ಇದೆ ಘಟನೆ ಸಂಬಂಧ ನಿಖಿಲ್ ಎಂಬಾತ … Read more

ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಬಸ್ ಪಲ್ಟಿ

Bus-Accident-At-Sanyasi-kodamaggi-near-Holehonnur

ಹೊಳೆಹೊನ್ನೂರು | ಖಾಸಗಿ ಬಸ್ ಉರುಳಿ (BUS ACCIDENT) ಬಿದ್ದು 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಹೊಳೆಹೊನ್ನೂರು ಸಮೀಪದ ಸಿದ್ಲಿಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಸಿದ್ಲಿಪುರ ಗ್ರಾಮದಲ್ಲಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ (BUS ACCIDENT). ಹೇಗಾಯ್ತು ಘಟನೆ? ಸಿದ್ಲಿಪುರ ಗ್ರಾಮದ ಬಳಿ ಎದುರಿನಿಂದ ಬಂದ ಲಾರಿಗೆ ದಾರಿ ಬಿಡುವಾಗ ಬಸ್ಸು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ. ಕೂಡಲೆ ಅವರನ್ನು ಸರ್ಕಾರಿ ಸಮುದಾಯ … Read more

ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಅಪಘಾತ, ಆಶ್ಚರ್ಯಕರ ರೀತಿಯಲ್ಲಿ ಪಾರಾದ ಬೈಕ್ ಸವಾರ

crime name image

ಶಿವಮೊಗ್ಗ| ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ಅಪಘಾತ (BIKE BUS ACCIDENT) ಸಂಭವಿಸಿದೆ. ಬೈಕ್ ಸವಾರ ಅದೃಷ್ಟವಶಾತ್ ಪಾರಾಗಿದ್ದಾರೆ. ಸಚಿನ್ ಅವರು ಚಲಾಯಿಸುತ್ತಿದ್ದ ಬೈಕ್ ಮತ್ತು ಸರ್ಕಾರಿ ಬಸ್ ಮಧ್ಯೆ ಅಪಾಘತವಾಗಿದೆ. ಮಿಲಿಟರಿ ಕ್ಯಾಂಪ್ ಬಳಿ ಘಟನೆ ಸಂಭವಿಸಿದೆ. ಸಚಿನ್ ಅವರು ಚಲಾಯಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಬಸ್ಸಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಸಚಿನ್ ಅವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಬೈಕು ಬಸ್ಸಿನ ಅಡಿಗೆ ಸಿಲುಕಿದೆ. ಗಾಯಗೊಂಡಿದ್ದ ಸಚಿನ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ … Read more

ಬೆಳಗಿನ ಜಾವದ ಮಳೆಗೆ ಶಿವಮೊಗ್ಗ ತತ್ತರ, ಹಲವೆಡೆ ತೋಟ, ಗದ್ದೆಗೆ ನೀರು

Rain-Havoc-in-Shimoga-City

SHIVAMOGGA LIVE NEWS | SHIMOGA | 30 ಜುಲೈ 2022 ಬೆಳಗಿನ ಜಾವ ಶಿವಮೊಗ್ಗದಲ್ಲಿ ಸುರಿದ ಭಾರಿ ಮಳೆಗೆ (RAINFALL) ತಗ್ಗು ಪ್ರದೇಶದ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ನಿದ್ರೆಯಲ್ಲಿದ್ದ ಜನರಿಗೆ ಮಳೆ ಆತಂಕ ಮೂಡಿಸಿದೆ. ಶಿವಮೊಗ್ಗದಲ್ಲಿ ಇವತ್ತು ಬೆಳಗಿನ ಜಾವ ಸತತ ಎರಡು ಗಂಟೆ ಮಳೆ ಸುರಿದಿದೆ. ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಜೋರು ಮಳೆಯಿಂದಾಗಿ ಚರಂಡಿಗಳು ಭರ್ತಿಯಾಗಿ ಮನೆಗಳಿಗೆ ನೀರು ನುಗ್ಗಿದೆ. ಅಣ್ಣಾನಗರದ (ANNA NAGARA) ಹಲವು ಮನೆಗಳಿಗೆ ನೀರು ನುಗ್ಗಿದೆ. … Read more

ತೀರ್ಥಹಳ್ಳಿ ತಾಲೂಕು ಕಚೇರಿವರೆಗೆ ಮಂಜುನಾಥಗೌಡ ನೇತೃತ್ವದಲ್ಲಿ ಪಾದಯಾತ್ರೆ

RM-Manjunatha-Gowda

SHIVAMOGGA LIVE NEWS | GAJANURU | 24 ಜುಲೈ 2022 ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗಾಗಿ ತೀರ್ಥಹಳ್ಳಿಯಲ್ಲಿ (THIRTHAHALLI) ನಡೆಯುವ ಬೃಹತ್ ಪಾದಯಾತ್ರೆಗೆ (PADAYATHRE) ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾಗೃತಿ ಸಮಾವೇಶಕ್ಕೆ ಮೆರಗು ನೀಡಬೇಕು ಎಂದು ಕೆಪಿಸಿಸಿ ಸಹಕಾರಿ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥಗೌಡ ಮನವಿ ಮಾಡಿದರು. ಗಾಜನೂರಿನಲ್ಲಿ ನಡೆದ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಆರ್.ಎಂ.ಮಂಜುನಾಥಗೌಡ ಮಾತನಾಡಿದರು. ಸಮಾಜಕ್ಕಾಗಿ ಹೋರಾಡಿದವರ ನೆನಪು ಮಾಡಿಕೊಳ್ಳುವುದು ಅಗತ್ಯವಾಗಿದೆ. ಮುಖ್ಯವಾಗಿ ಯುವ ಪೀಳಿಗೆಗೆ … Read more

ಹೊಳೆಹೊನ್ನೂರು ಪೊಲೀಸ್ ಠಾಣೆ ಗೇಟ್ ಮುಂದೆ ಗ್ರಾಮಸ್ಥರ ಪ್ರತಿಭಟನೆ

Holehonnur Temple Protest in front of Police station.

SHIVAMOGGA LIVE NEWS | HOLEHONNURU | 21 ಜುಲೈ 2022 ಮುಜರಾಯಿ ದೇವಸ್ಥಾನದ ಹೆಸರಿನಲ್ಲಿ ಅನಧಿಕೃತವಾಗಿ ಟ್ರಸ್ಟ್ ನಿರ್ಮಿಸಿಕೊಂಡು ಗ್ರಾಮಸ್ಥರಿಗೆ ತೊಂದರೆ ಉಂಟು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ದಾನವಾಡಿ ಗ್ರಾಮಸ್ಥರು ಹೊಳೆಹೊನ್ನೂರು ಠಾಣೆ ಎದುರು ಪ್ರತಿಭಟನೆ (PROTEST) ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ದಾನವಾಡಿ ಗುಡ್ಡದಲ್ಲಿರುವ ಗಿರಿ ರಂಗನಾಥ ದೇವಸ್ಥಾನ ಹೆಸರಿನಲ್ಲಿ ಅನಧಿಕೃತವಾಗಿ ಟ್ರಸ್ಟ್ ತೆರೆಯಲಾಗಿದೆ. ಅವರು ತಿರುಪತಿಗೆ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಸ್ಥಳೀಯರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ. … Read more

ಬೇಡರ ಹೊಸಳ್ಳಿ ಬಳಿ ಚಲಿಸುತ್ತಿದ್ದ ಬೈಕ್’ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು

crime name image

SHIVAMOGGA LIVE NEWS | SHIMOGA | 20 ಜುಲೈ 2022 ಚಲಿಸುತ್ತಿದ್ದ ಬೈಕ್’ಗೆ (BIKE) ಹಿಂಬದಿಯಿಂದ ಕಾರು (CAR) ಡಿಕ್ಕಿ ಹೊಡೆದು ಸವಾರ ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ನಂಜಪ್ಪ ಆಸ್ಪತ್ರೆಗೆ (NANJAPPA HOSPITAL) ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ರುದ್ರಮೂರ್ತಿ ಗಾಯಗೊಂಡಿರುವ ಬೈಕ್ ಸವಾರ. ಹೊಸಳ್ಳಿ ಫಸ್ಟ್ ಕ್ಯಾಂಪ್’ನಲ್ಲಿರುವ ಮನೆಗೆ ಬಂದಿದ್ದ ರುದ್ರಮೂರ್ತಿ, ಬೈಕ್’ನಲ್ಲಿ ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ಬೇಡರ ಹೊಸಳ್ಳಿ (BEDARA HOSALLI) ಗ್ರಾಮದ ಬಳಿ ರುದ್ರಮೂರ್ತಿ ಚಲಿಸುತ್ತಿದ್ದ … Read more