ಹೊಲ, ಗದ್ದೆಯಲ್ಲಿ ಕಾಡಾನೆಗಳ ಸಂಚಾರ, ರೈತರಲ್ಲಿ ಅತಂಕ, ಅರಣ್ಯಾಧಿಕಾರಿಗಳ ಗಸ್ತು ಹೆಚ್ಚಳ
ಸೊರಬ: ಕಳೆದ ಎರಡು ದಿನಗಳ ಹಿಂದೆ ಸೊರಬ ತಾಲೂಕಿನ ಉಳವಿ ಹೋಬಳಿ (Uluvi Hobli) ಸುತ್ತಮುತ್ತಲಿನ ಗ್ರಾಮಗಳ ಜಮೀನಿನಲ್ಲಿ ಕಾಡಾನೆಗಳು (Wild Elephants) ಲಗ್ಗೆ ಇಟ್ಟಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿವೆ. ಎಲ್ಲೆಲ್ಲಿ ಕಾಡಾನೆ ಲಗ್ಗೆ? ಕಾನಹಳ್ಳಿ, ಕಣ್ಣೂರು ಮತ್ತು ಮೈಸಾವಿ ಗ್ರಾಮಗಳ ಸುತ್ತಮುತ್ತ ಬೆಳೆ ಕಟಾವು ಮಾಡಿದ ರೈತರ ಜಮೀನಿನಲ್ಲಿ (farmland) ಆನೆಗಳು ಸಂಚರಿಸಿರುವ ಬಗ್ಗೆ ಹೆಜ್ಜೆ ಗುರುತು ಹಾಗೂ ಲದ್ದಿ ಕಾಣಿಸಿದೆ. ಅಲ್ಲದೇ ಕೆಲವು ತೋಟದಲ್ಲಿ ಬಾಳೆಗಿಡಗಳನ್ನು ಕಿತ್ತು ತಿಂದು ಹಾನಿ ಮಾಡಿವೆ. ಇದನ್ನೂ ಓದಿ … Read more