ಶಿವಮೊಗ್ಗ ಲೈವ್.ಕಾಂ | SHIMOGA | 27 ಸೆಪ್ಟೆಂಬರ್ 2019

ಶಿವಮೊಗ್ಗ ದಸರಾಗೆ ಈ ಬಾರಿ ತಾರಾ ಮೆರಗು ಬಂದಿದೆ. ನಮ್ಮೂರ ನಾಡಹಬ್ಬಕ್ಕೆ ದೊಡ್ಡ ದೊಡ್ಡ ಸ್ಟಾರ್’ಗಳು ಆಗಮಿಸುತ್ತಿದ್ದಾರೆ.

ಯಾವ್ಯಾವ ಸ್ಟಾರ್’ಗಳು ಬರ್ತಿದ್ದಾರೆ ಗೊತ್ತಾ?
ಸೆಪ್ಟೆಂಬರ್ 30ರಂದು ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಮಹಿಳಾ ದಸರಾಗೆ ಮಗಳು ಜಾನಕಿ ಸೀರಿಯಲ್’ನ ನಟಿ ಸುಪ್ರಿಯಾ ಸುರೇಶ್ ರಾವ್ ಚಾಲನೆ ನೀಡಲಿದ್ದಾರೆ.
ಚಲನಚಿತ್ರ ನಟಿ ಭಾವನಾ ರಾವ್ ಅವರು ಸೆಪ್ಟೆಂಬರ್ 30ರಂದು ಮಂಜುನಾಥ ಚಿತ್ರಮಂದಿರದಲ್ಲಿ ನಡೆಯಲಿರುವ ದಸರಾ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟಿ ದಿವ್ಯಾ ಉರುಡುಗ, ಕಿರುತೆರೆ ನಟಿ ನಿಹಾರಿಕ ಗೌಡ, ನಟ ಶಿವಮೊಗ್ಗ ರಾಮಣ್ಣ ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 5ರಂದು ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಚಲನಚಿತ್ರದ ಕಾರ್ಯಾಗಾರದಲ್ಲಿ, ನಿರ್ದೇಶಕರಾದ ಬಿ.ಸುರೇಶ್, ಲಿಂಗದೇವರು, ಪಿ.ಶೇಷಾದ್ರಿ ಅವರು ಪಾಲ್ಗೊಳ್ಳಲಿದ್ದಾರೆ.

ಅಕ್ಟೋಬರ್ 4ರಂದು ಯುವ ದಸರಾದಲ್ಲಿ ಲೇಸರ್ ಶೋ ಮತ್ತು ನೃತ್ಯ ಸ್ಪರ್ಧೆ ನಡೆಯಲಿದೆ. ನೆಹರೂ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಉದ್ಘಾಟನೆ ನಡೆಯಲಿದ್ದು, ನಟ ನಿರ್ದೇಶಕ ಎ.ಪಿ.ಅರ್ಜುನ್, ನಟ ಪ್ರಭು ಮುಂಡ್ಕುರ್ ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 5ರಂದು ಸಂಜೆ 5ಗಂಟೆ ನೆಹರು ಕ್ರೀಡಾಂಗಣದಲ್ಲಿ ಮ್ಯೂಸಿಕಲ್ ನೈಟ್ಸ್ ಆಯೋಜಿಸಲಾಗಿದೆ. ನಟ ವಿಜಯ ರಾಘವೇಂದ್ರ ಮತ್ತು ಮಾಲ್ಗುಡಿ ಸಿನಿಮಾ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸರಿಗಮಪ ಖ್ಯಾತಿ ಗಾಯಕ ಸಂಜಿತ್ ಹೆಗ್ಡೆ ಮ್ಯೂಸಿಕಲ್ ನೈಟ್ಸ್ ನಡೆಸಿಕೊಡಲಿದ್ದಾರೆ.
ಅಕ್ಟೋಬರ್ 6ರಂದು ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ದೃಶ್ಯ ಕಾವ್ಯ ನಾಟ್ಯ ಸಂಭ್ರಮಕ್ಕೆ ನಟಿ ಸುಧಾರಾಣಿ ಚಾಲನೆ ನೀಡಲಿದ್ದಾರೆ. ಅಕ್ಟೋಬರ್ 7ರಂದು ನಟಿ ಪ್ರೇಮಾ ಜಾನಪದ ವೈಭವ ಕಾರ್ಯಕ್ರಮ ಉದ್ಘಾಟಿಸುತ್ತಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]