ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 13 ಆಗಸ್ಟ್ 2019
ಭಾರಿ ಮಳೆಗೆ ಗುಡ್ಡ ಕುಸಿದು ಸುಮಾರು 40 ಎಕರೆ ಜಮೀನು ಹಾನಿಯಾಗಿರುವ ಹೆಗಲತ್ತಿ ಗ್ರಾಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದರು. ಜಮೀನು ಹಾನಿಯಾಗಿರುವುದನ್ನು ಪರಿಶೀಲನೆ ನಡೆಸಿದ ಸಿಎಂ, ರೈತರಿಗೆ ಪರಿಹಾರದ ಭರವಸೆ ನೀಡಿದರು.
ಹೆಗಲತ್ತಿ ಗ್ರಾಮದಲ್ಲಿ ಗುಡ್ಡ ಕುಸಿತದಿಂದ 40 ಎಕರೆಯಷ್ಟು ಜಮೀನು ಹಾನಿಯಾಗಿದೆ. ಅಡಕೆ ಮರಗಳು ನೆಲಸಮವಾಗಿವೆ. ಬಾಳೆ ಬೆಳೆ ಹಾನಿಯಾಗಿದೆ.
ವರದಿ ಬಳಿಕ ಪರಿಹಾರ
ಇನ್ನು, ಹೆಗಲತ್ತಿ ಗ್ರಾಮದಲ್ಲಿ ಬೆಳೆಹಾನಿ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ವರದಿ ಸಿದ್ಧಪಡಿಸಲಿದ್ದಾರೆ. ಅದರ ಆಧಾರದ ಮೇಲೆ ಪರಿಹಾರ ವಿತರಿಸಲಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದರು. ಸಿಎಂ ಏನೆಲ್ಲ ಹೇಳಿದರು? ಅದರ ವಿಡಿಯೋ ರಿಪೋರ್ಟ್ ಇಲ್ಲಿದೆ
ಇದೆ ವೇಳೆ ನೆರೆಯಿಂದ ಜಾನುವಾರು ಕಳೆದುಕೊಂಡವರಿಗೆ ಸಿಎಂ ಯಡಿಯೂರಪ್ಪ ಪರಿಹಾರದ ಚೆಕ್ ವಿತರಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ರವಿಕುಮಾರ್, ಜಿಲ್ಲಾಧಿಕಾರಿ ಶಶಿಕುಮಾರ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494ಈ ಮೇಲ್ | [email protected]
