SHIVAMOGGA LIVE NEWS | 26 ಮಾರ್ಚ್ 2022
ಶಿವಮೊಗ್ಗದ ನಗರದಲ್ಲಿ ಇವತ್ತು ಸಂಜೆ ಮಳೆಯಾಗಿದೆ. ಬಿಸಿಲ ಧಗೆಗೆ ಕಂಗೆಟ್ಟಿದ್ದ ನಗರವಾಸಿಗಳು ಮಳೆ ಕಂಡು ನಿಟ್ಟುಸಿರು ಬಿಟ್ಟರು.
ಸಂಜೆ ವೇಳೆಗೆ ಶಿವಮೊಗ್ಗದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಕೆಲವೆ ಹೊತ್ತಿನಲ್ಲಿ ಜೋರು ಮಳೆಯಾಗಿದೆ. ಜೋರು ಬಿಸಿಲು, ವಿಪರೀತ ಶಕೆಗೆ ಶಿವಮೊಗ್ಗ ನಗರದ ನಿವಾಸಿಗಳು ಬಸವಳಿದಿದ್ದರು.
ಐದು ದಿನದ ಹಿಂದೆ ಶಿವಮೊಗ್ಗ ನಗರದಲ್ಲಿ ಜಿಟಿ ಜಿಟಿ ಮಳೆಯಾಗಿತ್ತು. ಈಗ ಜೋರಾಗಿ ಮಳೆ ಸುರಿದಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200