ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

Published On : ಮಾರ್ಚ್ 23, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ನಗರದ ಗಾಂಧಿ ಬಜಾರ್‌ನ ಉದ್ಯಮಿಯೊಬ್ಬರಿಗೆ (businessman) ಐದು ಲಕ್ಷ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹಳೇ ದ್ವೇಷದ ಹಿನ್ನೆಲೆ ಜೈಲಿನಲ್ಲಿರುವ ಆರೋಪಿ ತನ್ನ ಸಹಚರನ ಮೂಲಕ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ – ರಾತ್ರಿ 11:45ಕ್ಕೆ ಅಮೀರ್‌ ಅಹಮದ್‌ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ಆರ್.ಎಂ.ಎಲ್ ನಗರದ ನಿವಾಸಿ ಹಾಗೂ ಚೋರ್ ಬಜಾರ್‌ನ ವ್ಯಾಪಾರಿ ಸೈಯದ್ ನಿಜಾಮುದ್ದೀನ್ ಅವರು ಈ ಸಂಬಂಧ ದೂರು ನೀಡಿದ್ದಾರೆ. ಮಾರ್ಚ್ 19ರಂದು ರಾತ್ರಿ 10:30ರ ಸುಮಾರಿಗೆ ನಿಜಾಮುದ್ದೀನ್ ಅವರು ಗಾಂಧಿ ಬಜಾರ್‌ನಲ್ಲಿದ್ದಾಗ, ಐುವಕನೊಬ್ಬ ಬಂದು ಅಣ್ಣ ಫೋನ್ ಮಾಡುತ್ತಿದ್ದಾರೆ ಮಾತನಾಡಿ ಎಂದು ಮೊಬೈಲ್ ನೀಡಿದ್ದಾನೆ.

Doddapete-Police-Station-Shimoga

ಸೈಯದ್ ನಿಜಾಮುದ್ದೀನ್ ಫೋನ್ ಸ್ವೀಕರಿಸಿದಾಗ ಮಾತನಾಡಿದ ವ್ಯಕ್ತಿ, ನಾಳೆ ಸಂಜೆಯೊಳಗೆ ₹5 ಲಕ್ಷ ಹಣ ಕೊಡಬೇಕು, ಇಲ್ಲದಿದ್ದರೆ ಹೊಡೆಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 23, 2026

Leave a Comment