ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 1 APRIL 2021
‘ತುಂಬಾ ಕಷ್ಟದಲ್ಲಿದ್ದೇನೆ. ತನ್ನ ಬಳಿ ಇರುವ ಚಿನ್ನಾಭರಣವನ್ನು ಅತ್ಯಂತ ಕಡಿಮೆ ಬೆಲೆಗೆ ಮಾರುತ್ತಿದ್ದೇನೆ’ ಎಂದು ನಂಬಿಸಿ ಚಿನ್ನಾಭರಣ ವ್ಯಾಪಾರಿಯೊಬ್ಬರಿಂದ 7.50 ಲಕ್ಷ ರೂ. ದರೋಡೆ ಮಾಡಲಾಗಿದೆ.
ಸಾಗರದ ಗಣಪತಿ ದೇವಸ್ಥಾನ ರಸ್ತೆಯ ನಿವಾಸಿ, ಚಿನ್ನಾಭರಣ ವ್ಯಾಪಾರಿ ಅಶೋಕ್ ಅವರು ಹಣ ಕಳೆದುಕೊಂಡವರು.
ಹೇಗಾಯ್ತು ದರೋಡೆ?
ಇತ್ತೀಚೆಗೆ ಅಶೋಕ್ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ಆರ್ಥಿಕವಾಗಿ ಕಷ್ಟದಲ್ಲಿದ್ದೇನೆ. ತನ್ನ ಬಳಿ ಇರುವ ಚಿನ್ನಾಭರಣ ಮಾರಾಟ ಮಾಡುತ್ತಿದ್ದೇನೆ. ಹತ್ತು ಲಕ್ಷ ಕೊಟ್ಟರೆ ಮಾತ್ರ ಚಿನ್ನಾಭರಣ ಕೊಡುತ್ತೇನೆ ಎಂದು ತಿಳಿಸಿದ್ದ.
ಅಪರಿಚಿತನ ಮಾತು ನಂಬಿ, ಕಡಿಮೆ ಬೆಲೆ ಚಿನ್ನಾಭರಣ ಸಿಗಲಿದೆ ಎಂದು ಭಾವಿಸಿ, ಅಶೋಕ್ ಅವರು ಪರಿಚಿತರಿಂದ 7.50 ಲಕ್ಷ ರೂ. ಸಾಲ ಪಡೆದಿದ್ದರು.
ಮಂಗಳವಾರ ಮಧ್ಯಾಹ್ನ ಬಂದ ಅಪರಿಚಿತ ವ್ಯಕ್ತಿ, ಚಿನ್ನಾಭರಣವನ್ನು ತರಲು ಕಷ್ಟವಾಗುತ್ತದೆ. ತಮ್ಮ ಮನೆಗೆ ಬರುವಂತೆ ಮನವಿ ಮಾಡಿದ. ಅಶೋಕ ಅವರ ದ್ವಿಚಕ್ರ ವಾಹನದಲ್ಲಿಯೇ ಶಿರವಾಳ ರಸ್ತೆಯಲ್ಲಿ ಕರೆದೊಯ್ದಿದ್ದಾನೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ವಾಹನ ನಿಲ್ಲಿಸಿ ನಡೆದು ಹೋಗೋಣ ಎಂದು ತಿಳಿಸಿದ್ದಾನೆ.
ದ್ವಿಚಕ್ರ ವಾಹನದಿಂದ ಕೆಳಗಿಳಿದು ಹಣದ ಬ್ಯಾಗ್ ತೆಗೆದುಕೊಳ್ಳುತ್ತಿದ್ದಂತೆ ಅಶೋಕ್ ಅವರ ಕುತ್ತಿಗೆಗೆ ಚಾಕು ಹಿಡಿದ ಅಪರಿಚಿತ, ಹಣದ ಬ್ಯಾಗ್ ಹಸ್ತಾಂತರಿಸುವಂತೆ ಬೆದರಿಸಿದ್ದಾನೆ. ಕಾರಿನಲ್ಲಿ ಬಂದ ಮತ್ತಿಬ್ಬರು ಹಣದ ಬ್ಯಾಗ್ ಕಸಿದುಕೊಂಡಿದ್ದು, ಮೂವರು ಪರಾರಿಯಾಗಿದ್ದಾರೆ.
ಅಶೋಕ್ ಅವರು ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422