ಶಿವಮೊಗ್ಗ, ಭದ್ರಾವತಿಯಲ್ಲಿ ಏಕಕಾಲಕ್ಕೆ ನಾಲ್ಕು ಕಡೆ ಎಸಿಬಿ ದಾಳಿ, ಯಾರ ಮನೆ ಮೇಲೆ ದಾಳಿ? ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ‌ | SHIMOGA NEWS | 31 ಡಿಸೆಂಬರ್ 2020

ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆ ಅಧಿಕಾರಿಯೊಬ್ಬರ ಮನೆ, ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಿಶೀಲನೆ ಕಾರ್ಯ ನಡೆಯುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಜಿ.ಜಿ.ಸುರೇಶ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಸುರೇಶ್ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಾಲ್ಕು ಕಡೆ ದಾಳಿ

ದಾಳಿ 1 – ಮಲ್ಲೇಶ್ವರ ನಗರದಲ್ಲಿ ಇರುವ ಮನೆ
ದಾಳಿ 2 – ಗೋಪಾಲಗೌಡ ಬಡಾವಣೆಯಲ್ಲಿರುವ ಮನೆ
ದಾಳಿ 3 – ಭದ್ರಾವತಿ ಹುಣಸೇಕಟ್ಟೆಯಲ್ಲಿರುವ ತೋಟ ಮತ್ತು ತೋಟದ ಮನೆ
ದಾಳಿ 4 – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ

ದಾಖಲೆ, ಚಿನ್ನಾಭರಣ ಪರಿಶೀಲನೆ

ಜಿ.ಜಿ.ಸುರೇಶ್ ಅವರ ಮನೆಯಲ್ಲಿರುವ ದಾಖಲೆಗಳು, ಚಿನ್ನಾಭರಣದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.

ಭ್ರಷ್ಟಾಚಾರ ನಿಗ್ರಹದಳದ ಪೂರ್ವ ವಲಯ ಎಸ್‌.ಪಿ. ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಶಿವಮೊಗ್ಗ ಎಸಿಬಿ ಡಿಎಸ್‌ಪಿ ಲೋಕೇಶ್, ದಾವಣಗೆರೆ ಡಿಎಸ್‌ಪಿ ಪರಮೇಶ್ವರ್, ಇನ್ಸ್‌ಪೆಕ್ಟರ್ ವೀರೇಂದ್ರ ನೇತೃತ್ವದ ತಂಡ ದಾಳಿ ನಡೆಸಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 31, 2020

Leave a Comment