ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
SHIMOGA NEWS, 18 NOVEMBER 2024 : ತಾಲೂಕಿನ ಹಾಡೋನಹಳ್ಳಿ ಗೋಡೌನಲ್ಲಿದ್ದ ಒಣ ಅಡಿಕೆ (Adike) ಕಳವು ಮಾಡಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತ್ಯೇಕ ಮೂರು ಅಡಿಕೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ 7.35 ಲಕ್ಷ ರೂ. ಮೌಲ್ಯದ 15.08 ಕ್ವಿಂಟಾಲ್ ಒಣ ಅಡಿಕೆ, 1.40 ಲಕ್ಷ ರೂ. ಮೌಲ್ಯದ ಎರಡು ಬೈಕ್ ಹಾಗೂ 1.50 ಲಕ್ಷ ರೂ. ಮೌಲ್ಯದ ಒಂದು ಪ್ಯಾಸೆಂಜರ್ ಆಟೋ ಸೇರಿ ಒಟ್ಟು 10.25 ಲಕ್ಷ ರೂ. ಮೌಲ್ಯದ ಮಾಲನ್ನು ಜಪ್ತಿ ಮಾಡಿದ್ದಾರೆ.

ಶಿವಮೊಗ್ಗದ ಬೊಮ್ಮನಕಟ್ಟೆಯ ಆರ್.ಅನಿಲ್ ಅಲಿಯಾಸ್ ಜಾಕ್(26), ಭದ್ರಾವತಿ ವಿಠಲಾಪುರದ ಲೋಕೇಶ್ ಅಲಿಯಾಸ್ ವಿಜಯ್(27), ಶಿವಮೊಗ್ಗ ಬಸವನಗುಡಿಯ ಮನೋಜ ಅಲಿಯಾಸ್ ಮುರಗೋಡು(20), ಹಾಡೋನಹಳ್ಳಿಯ ಪಿ.ನವೀನ್ ಅಲಿಯಾಸ್ ನುಗ್ಗೆ(23), ಮಡಿಕೆಚಿಲೂರಿನ ಎಸ್.ಚಂದು ಅಲಿಯಾಸ್ ಸುಣ್ಣ(20) ಬಂಧಿತರು. ಹಾಡೋನಹಳ್ಳಿಯ ಗಂಗಾಧರ್ ಕಡೆಮನೆ(48) ಅವರ ಮನೆ ಮುಂದಿನ ಗೋಡೌನ್‌ನಲ್ಲಿ ಒಣ ಅಡಿಕೆಯನ್ನು ಶೇಖರಿಸಿಟ್ಟಿದ್ದು, ನ. 5ರ ರಾತ್ರಿ 1.50 ಲಕ್ಷ ರೂ. ಮೌಲ್ಯದ 4 ಕ್ವಿಂಟಾಲ್ ಒಣ ಅಡಿಕೆ ಕಳವು ಮಾಡಿರುವ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ » ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಧಗಧಗ ಹೊತ್ತಿ ಉರಿದ ಓಮ್ನಿ
ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ಪಿಎಸ್‌ಐಗಳಾದ ಸ್ವಪ್ನಾ, ಎಂ.ಜಿ.ವಗ್ಗಣ್ಣನವರ್, ಸಿಬ್ಬಂದಿ ವೆಂಕಟೇಶ್, ಗಣೇಶ್, ಕಾಶಿನಾಥ್, ಶ್ರೀಕಾಂತ್ ಮತ್ತು ಕವನ್ ಅವರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Adike

