SHIMOGA NEWS, 9 NOVEMBER 2024 Advocate
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಹಬ್ಬದ ರಜೆ ಅವಧಿಯಲ್ಲಿ ಶಾಲೆಯಲ್ಲಿ ಕಳ್ಳತನ
ಶಿವಮೊಗ್ಗ : ಶಾಲೆಗೆ ದೀಪಾವಳಿ ಹಬ್ಬದ ರಜೆ ಇದ್ದಾಗ ಕಿಟಕಿಯ ಸರಳು ಮುರಿದು ಪಾತ್ರೆಗಳನ್ನು ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆ ಪಕ್ಕದಲ್ಲಿರುವ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃತ್ಯ ನಡೆದಿದೆ. ಹಬ್ಬದ ರಜೆ ಮುಗಿಸಿ ಶಾಲೆಯ ಸಿಬ್ಬಂದಿ ಹಿಂತಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 6 ಸಾವಿರ ರೂ. ಮೌಲ್ಯದ ಪಾತ್ರೆಗಳು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಹರು ಸ್ಟೇಡಿಯಂನಲ್ಲಿ ವಕೀಲರೊಬ್ಬರ ಬೈಕ್ ಕಳವು
ಶಿವಮೊಗ್ಗ : ನೆಹರು ಸ್ಟೇಡಿಯಂ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿದೆ. ವಕೀಲ ಸಂತೋಷ್ ಕುಮಾರ್ ಅವರು ಸ್ಟೇಡಿಯಂ ಒಳಗೆ ಹೋಂಡಾ ಆಕ್ಟೀವಾ ನಿಲ್ಲಸಿ ಕಚೇರಿಗೆ ಹೋಗಿದ್ದರು. ಕೋರ್ಟ್‌ಗೆ ತೆರಳುವುದಕ್ಕಾಗಿ ವಾಹನ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಸಂತೋಷ್ ಕುಮಾರ್ ಬಳಿಕ ಈ-ಎಫ್‌ಐಆರ್ ದಾಖಲಿಸಿದ್ದರು. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್, ಲಗೇಜ್ ಆಟೋ ಡಿಕ್ಕಿ, ಇಬ್ಬರಿಗೆ ಗಾಯ
ಶಿವಮೊಗ್ಗ : ಲಗೇಜ್ ಆಟೊ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ಬಿಕ್ಕೊನಹಳ್ಳಿ ಗ್ರಾಮದ ಸಮೀಪ ಘಟನೆ ನಡೆದಿದೆ. ಮಂಡಘಟ್ಟದ ಕಿರಣ್ ಮತ್ತು ಮೌನೇಶ್ ಎಂಬುವವರು ಬೈಕ್‌ನಲ್ಲಿ ಸವಳಂಗಕ್ಕೆ ತೆರಳುತ್ತಿದ್ದರು. ಎದುರಿನಿಂದ ಬಂದ ಲಗೇಜ್ ಆಟೋ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ಬೈಕ್ ಸವಾರರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಲಗೇಜ್ ಆಟೋ ಚಾಲಕನ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದ ಸುಬ್ಬಯ್ಯ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ನಿಧನ, ಗಣ್ಯರಿಂದ ಸಂತಾಪ
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






