ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 08 JANUARY 2021
ಗಾಂಧಿ ಪಾರ್ಕ್‍ನಲ್ಲಿ ಜೂಸ್ ಕುಡಿದು ಇಬ್ಬರು ಮಕ್ಕಳು ಮೃತಪಟ್ಟ ಬೆನ್ನಿಗೆ, ತಾಯಿಯು ಸಾವನ್ನಪ್ಪಿದ್ದಾಳೆ. ಮೆಗ್ಗಾನ್ ಆಸ್ಪತ್ರೆಯ ಸಾಂತ್ವನ ಕೇಂದ್ರದಲ್ಲಿ ಗೀತಾ ಕೊನೆಯುಸಿರೆಳೆದಿದ್ದಾಳೆ.
ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದ ಗೀತಾ ಇವತ್ತು ಮೃತಪಟ್ಟಿದ್ದಾಳೆ. ಮೆಗ್ಗಾನ್ ಆಸ್ಪತ್ರೆ ಸಾಂತ್ವನ ಕೇಂದ್ರದಲ್ಲಿ ಗೀತಾಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಊಟ ತ್ಯಜಿಸಿದ್ದ ಗೀತಾ
ಮಕ್ಕಳು ಮೃತಪಟ್ಟ ಬೆನ್ನಿಗೆ ಗೀತಾ ಅಸ್ವಸ್ಥಳಾಗಿದ್ದಳು. ಹಾಗಾಗಿ ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಇಲ್ಲಿ ಗೀತಾ, ಊಟ ತ್ಯಜಿಸಿದ್ದರು ಎಂದು ತಿಳಿದು ಬಂದಿದೆ. ವೈದ್ಯರು, ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಮನವೊಲಿಸಲು ಪ್ರಯತ್ನಿಸಿದರೂ ಆಹಾರ ಸೇವಿಸಿರಲಿಲ್ಲ.
ಇದನ್ನೂ ಓದಿ | ತಾಯಿ ಜೊತೆ ಗಾಂಧಿ ಪಾರ್ಕ್‌ಗೆ ಬಂದ ಮಕ್ಕಳಿಬ್ಬರು ಅಸ್ವಸ್ಥ, ಆಸ್ಪತ್ರೆಯಲ್ಲಿ ಸಾವು, ಏನಿದು ಪ್ರಕರಣ?
ವಿಚಾರಣೆಯೂ ನಡೆದಿರಲಿಲ್ಲ
ಮಕ್ಕಳು ಮೃತಪಟ್ಟ ಬಗ್ಗೆ ಗೀತಾಳನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಸಿದ್ಧವಿದ್ದರು. ಆದರೆ ಆಕೆಯ ಆರೋಗ್ಯ ಸ್ಥಿತಿ ಸರಿ ಇಲ್ಲದೆ ಇದ್ದಿದ್ದರಿಂದ ಚಿಕಿತ್ಸೆ ಬಳಿಕ ವಿಚಾರಣೆ ನಡೆಸುವಂತೆ ವೈದ್ಯರು ತಿಳಿಸಿದ್ದರು.
ಜೂಸ್‍ನಲ್ಲಿ ಇತ್ತಾ ವಿಷ
ಜನವರಿ 4ರಂದು ತಾಯಿ ಗೀತಾಳೊಂದಿಗೆ ಗಾಂಧಿ ಪಾರ್ಕ್‍ಗೆ ಬಂದಿದ್ದ ಅಶ್ವಿನ್ (8), ಆಕಾಂಕ್ಷಾ (4) ಜೂಸ್ ಸೇವಿಸಿದ್ದರು. ಕೆಲವೇ ಹೊತ್ತಿನಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಕೂಡಲೇ ಇವರನ್ನು ಸಮೀಪದ ಕ್ಲಿನಿಕ್‍ಗೆ ಚಿಕಿತ್ಸೆಗೆ ಕರೆ ತರಲಾಗಿತ್ತು. ಬಳಿಕ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಇಬ್ಬರು ಮಕ್ಕಳು ಮೃತಪಟ್ಟಿದ್ದರು.
ತಾಯಿ ಗೀತಾಳೆ ಮಕ್ಕಳಿಗೆ ವಿಷ ಹಾಕಿದ್ದಾಳೆ ಎಂದು ಆರೋಪಿಸಲಾಗಿತ್ತು. ಮತ್ತೊಂದೆಡೆ ಜೂಸ್‍ನಿಂದಾಗಿ ಫುಡ್ ಪಾಯ್ಸನ್ ಆಗಿರುವ ಕುರಿತು ಶಂಕೆ ಇತ್ತು. ಹಾಗಾಗಿ ಪೊಲೀಸರು ಸ್ಯಾಂಪಲ್‍ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422