ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 DECEMBER 2022
ಶಿವಮೊಗ್ಗ : ಕಂಟ್ರಿ ಕ್ಲಬ್ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಅನುಪಿನಕಟ್ಟೆಯ ನರಸಿಂಹ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಪ್ಲಸ್ (splendor plus bike) ಬೈಕ್ ಕಳುವುವಾಗಿದೆ.
ಕಂಟ್ರಿ ಕ್ಲಬ್ ಮುಂಭಾಗ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ (splendor plus bike) ನಿಲ್ಲಿಸಿದ್ದರು. ಕೆಲಸ ಮುಗಿಸಿ ಅರ್ಧ ಗಂಟೆಗೆ ಹಿಂತಿರುಗಿ ಬಂದಾಗ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಾಡಿದ ನರಸಿಂಹ ಅವರು ಇ – ಎಫ್ಐಆರ್ ಪೋರ್ಟಲ್ ಮೂಲಕ ದೂರು ದಾಖಲಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಅಪ್ರಾಪ್ತ ಬಾಲಕನ ಕೈಗೆ ಬೈಕ್ ಕೊಟ್ಟು ಪೇಚಿಗೆ ಸಿಲುಕಿದ ಪೋಷಕರು, ಭಾರಿ ದಂಡ ವಿಧಿಸಿದ ಕೋರ್ಟ್
ಶಿವಮೊಗ್ಗ ನಗರದಲ್ಲಿ ಸ್ಪ್ಲೆಂಡರ್ ಬೈಕುಗಳ ಕಳ್ಳತನ ಹೆಚ್ಚಾಗಿದೆ. ನಗರದ ವಿವಿಧೆಡೆ ಸ್ಪ್ಲೆಂಡರ್ ಬೈಕುಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422