ಶಿವಮೊಗ್ಗ : ನಿವೃತ್ತ ಉದ್ಯೋಗಿಯೊಬ್ಬರ ಮೊಬೈಲ್ನ ವಾಟ್ಸಪ್ಗೆ ಟ್ರಾಫಿಕ್ ಚಲನ್ ಎಂದು ಎ.ಪಿ.ಕೆ ಫೈಲ್ (APK File) ಕಳುಹಿಸಿ ಮೂರು ಬ್ಯಾಂಕ್ ಖಾತೆಗಳಿಂದ 7.42 ಲಕ್ಷ ರೂ. ಲಪಟಾಯಿಸಿದ್ದಾರೆ. ಈ ಕುರಿತು ನಿವೃತ್ತ ಉದ್ಯೋಗಿಯು ಶಿವಮೊಗ್ಗ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಏ.2ರಂದು ನಿವೃತ್ತ ಉದ್ಯೋಗಿಯ ವಾಟ್ಸಪ್ಗೆ ಟ್ರಾಪಿಕ್ ಚಲನ್ 1000 ಎಂದು ಪಿಡಿಎಫ್ ಫೈಲ್ ಮಾದರಿಯಲ್ಲಿರುವ ಎ.ಪಿ.ಕೆ ಫೈಲ್ (APK File) ಬಂದಿತ್ತು. ಇದನ್ನು ಕ್ಲಿಕ್ ಮಾಡಿದಾಗ ಕರ್ನಾಟಕ ಸರ್ಕಾರದ ಚಿಹ್ನೆ ಇತ್ತು. ಏ.8ರಂದು ನಿವೃತ್ತ ಉದ್ಯೋಗಿಯ ಮೊಬೈಲ್ಗೆ ಕರೆ ಮಾಡಿದ ಅಪರಿಚಿತನೊಬ್ಬ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ ಎಂದು ತಿಳಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಿವೃತ್ತ ಉದ್ಯೋಗಿಯು ಬ್ಯಾಂಕ್ಗೆ ತೆರಳಿ ಪರಿಶೀಲಿಸಿದಾಗ ಎಸ್.ಬಿ.ಐ ಬ್ಯಾಂಕ್ನ ಒಂದು ಖಾತೆಯಿಂದ 7 ಬಾರಿ ಹಣ ಕಡಿತವಾಗಿತ್ತು. ಎಸ್.ಬಿ.ಐ ಬ್ಯಾಂಕ್ನ ಮತ್ತೊಂದು ಖಾತೆಯಿಂದ 9 ಬಾರಿ ಹಣ ಕಡಿತವಾಗಿತ್ತು. ಕರ್ಣಾಟಕ ಬ್ಯಾಂಕ್ನ ಖಾತೆಯಿಂದ ಒಟ್ಟು 6 ಬಾರಿ ಹಣ ಕಡಿತವಾಗಿತ್ತು. ಮೂರು ಬ್ಯಾಂಕ್ ಖಾತೆಗಳಿಂದ ಒಟ್ಟು 7.42 ಲಕ್ಷ ರೂ. ಹಣ ಕಡಿತವಾಗಿರುವುದು ಗೊತ್ತಾಗಿತ್ತು. ಕೂಡಲೆ 1930 ಹೆಲ್ಪ್ಲೈನ್ ನಂಬರ್ಗೆ ಕರೆ ಮಾಡಿದ ನಿವೃತ್ತ ಉದ್ಯೋಗಿ, ಬಳಿಕ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎ.ಪಿ.ಕೆ ಫೈಲ್ ಬಗ್ಗೆ ಇರಲಿ ಜಾಗೃತಿ
ವಾಟ್ಸಪ್ಗೆ ಎ.ಪಿ.ಕೆ ಫೈಲ್ಗಳನ್ನು ಕಳುಹಿಸಿ, ಅದರ ಮೂಲಕ ನಿಮ್ಮ ಮೊಬೈಲ್ನ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿಕೊಂಡು ಹಣ ವರ್ಗಾಯಿಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆ ಅಪರಿಚಿತ ಲಿಂಕುಗಳು, ಎ.ಪಿ.ಕೆ ಫೈಲುಗಳನ್ನು ಬಂದಾಗ ಎಚ್ಚರಿಕೆಯಿಂದ ಇರಬೇಕು. ಅಂತಹ ಫೈಲ್ಗಳನ್ನು ಓಪನ್ ಮಾಡದೆ ಇರುವುದು ಸೂಕ್ತ.
ಇದನ್ನೂ ಓದಿ » ಅಂಗಡಿಗಳಿಗೆ ನುಗ್ಗಿದ ನೀರು, ವಾಹನಗಳು ಜಲಾವೃತ, ಕಾರಗಳ ಮೇಲೆ ಬಿದ್ದ ರೆಂಬೆ, ಮಳೆಯಿಂದ ಏನೆಲ್ಲ ಹಾನಿಯಾಗಿದೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200