ಶಿವಮೊಗ್ಗದಲ್ಲಿ ರಾತ್ರೋರಾತ್ರಿ 250 ಕೆ.ಜಿ. ಅಡಕೆ ನಾಪತ್ತೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS | 1 ಮಾರ್ಚ್ 2022
➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ರಾತ್ರೋರಾತ್ರಿ ಸುಮಾರು 250 ಕೆ.ಜಿ.ಯಷ್ಟು ಸಿಪ್ಪೆಗೋಟು ಅಡಕೆ ಕಳ್ಳತನವಾಗಿದೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga Nanjappa Hospital covid care

ಹಳೆ ಹೊನ್ನಾಪುರದ ರಮೇಶ್ ಎಂಬುವವರಿಗೆ ಸೇರಿದ 250 ಕೆ.ಜಿ. ಸಿಪ್ಪೆಗೋಟು ಅಡಕೆ ಕಳವಾಗಿದೆ.

ರಮೇಶ್ ಅವರು ಮನೆ ಬಳಿಕ ಅಡಕೆಯನ್ನು ಒಣಗಿಸಲು ಹಾಕಿದ್ದರು. ರಾತ್ರಿ 11 ಗಂಟೆಗೆ ಅಡಕೆಯನ್ನು ಪರಿಶೀಲಿಸಿ ಬಂದಿದ್ದರು. ಬೆಳಗ್ಗೆ 6 ಗಂಟೆಗೆ ಎದ್ದು ನೋಡಿದಾಗ, ಸುಮಾರು 250 ಕೆ.ಜಿ.ಯಷ್ಟು ಅಡಕೆ ಕಳ್ಳತನವಾಗಿತ್ತು. ಇದರ ಮೌಲ್ಯ ಸುಮಾರು 20 ಸಾವಿರ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.

ತುಂಗಾ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ| ಕಣದಲ್ಲಿ ಒಣಗಿಸಲು ಹಾಕಿದ್ದ ಸಿಪ್ಪೆಗೋಟು ಅಡಕೆ ರಾತ್ರೋರಾತ್ರಿ ನಾಪತ್ತೆ

Shimoga Live Age Wise Reach

Leave a Comment