ಶಿವಮೊಗ್ಗ ಲೈವ್.ಕಾಂ | SHIMOGA | 5 ಏಪ್ರಿಲ್ 2020
ಲಾಕ್’ಡೌನ್ ಆದೇಶ ಉಲ್ಲಂಘಿಸಿ ಕಾರಣವೇ ಇಲ್ಲದೆ ಸುತ್ತಾಡುತ್ತಿದ್ದವರ ಬೈಕ್’ಗಳ ಸೀಜ್ ಮುಂದುವರೆದಿದೆ. ಈವರೆಗೆ ಶಿವಮೊಗ್ಗ ಜಿಲ್ಲಾ ಪೊಲೀಸರು ವಶಕ್ಕೆ ಪಡೆದ ಬೈಕ್’ಗಳ ಸಂಖ್ಯೆ 600ಕ್ಕೂ ತಲುಪಿದೆ.
ಏಪ್ರಿಲ್ 4ರಂದು 56 ಬೈಕ್’ಗಳನ್ನು ಜಿಲ್ಲೆಯ ವಿವಿಧೆಡೆ ಪೊಲೀಸ್ ಠಾಣೆಗಳಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಲಾಕ್’ಡೌನ್ ಸಂದರ್ಭ ಅಗತ್ಯ ವಸ್ತುಗಳ ಖರೀದಿಗಷ್ಟೆ ವಿನಾಯಿತಿ ನೀಡಿದೆ. ಆದರೆ ಸರ್ಕಾರದ ಆದೇಶ ಉಲ್ಲಂಘಿಸಿ ಯಾವುದೇ ಅಗತ್ಯ ಕೆಲಸವಿಲ್ಲದಿದ್ದರೂ ವಿನಾ ಕಾರಣ ರಸ್ತೆಗಳಲ್ಲಿ ಅಡ್ಡಾಡುವ ಯುವಕರಿಗೆ ಬಿಸಿ ಮುಟ್ಟಿಸಲು ಬೈಕ್’ಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]