ಶಿವಮೊಗ್ಗ : ಊಟದ ಹಣ (Money) ಕೊಡುವಂತೆ ಕೇಳಿದ ಹೊಟೇಲ್ ಮಾಲೀಕನಿಗೆ ಗ್ರಾಹಕನೊಬ್ಬ ಚಾಕುವಿನಿಂದ ಇರುದಿದ್ದಾನೆ. ಹೊಟೇಲ್ ಮಾಲೀಕನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಹೊಟೇಲ್ ಮಾಲೀಕ ಕೃಷ್ಣಪ್ಪ ಗಾಯಗೊಂಡಿದ್ದಾರೆ. ಶಿವಮೊಗ್ಗ – ಹೊನ್ನಾಳಿ ರಸ್ತೆಯ ದೀಪಕ್ ವೈನ್ ಸ್ಟೋರ್ ಪಕ್ಕದಲ್ಲಿರುವ ಖುಷಿ ಫಾಸ್ಟ್ ಫುಡ್ ಹೊಟೇಲ್‌ನಲ್ಲಿ ಘಟನೆ ಸಂಭವಿಸಿದೆ.
ಕುತ್ತಿಗೆಗೆ ಚಾಕು ಇರಿದ ಗ್ರಾಹಕ

ಕೃಷ್ಣಪ್ಪ ಅವರ ಫಾಸ್ಟ್ ಫುಡ್ ಹೊಟೇಲ್‌ಗೆ ಬಂದ ವ್ಯಕ್ತಿಯೊಬ್ಬ ಮುದ್ದೆ ಮತ್ತು ತಲೆ ಮಟನ್ ಸೇವಿಸಿದ್ದ. ಬಿಲ್ (Money) ಪಾವತಿಸುವಂತೆ ಕೃಷ್ಣಪ್ಪ ಕೇಳಿದಾಗ, ಕೆರಳಿದ ಆತ ಮಾತಿಗೆ ಮಾತು ಬೆಳೆಸಿ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಕುತ್ತಿಗೆಗೆ ಇರಿದಿದ್ದಾನೆ. ಅಲ್ಲೇ ಇದ್ದವರು ಆ ವ್ಯಕ್ತಿಯ ಕೈಯಿಂದ ಚಾಕು ಕಸಿದುಕೊಂಡು, ಕೃಷ್ಣಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ದುರ್ಗಿಗುಡಿಯಲ್ಲಿ ವಿಜೃಂಭಣೆಯ ರಥೋತ್ಸವ, ರಣ ಬಿಸಿಲಲ್ಲೂ ಸೇರಿದ್ದರು ದೊಡ್ಡ ಸಂಖ್ಯೆಯ ಜನ
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






