ಗಂಡ, ಹೆಂಡತಿ ಜಗಳ, ಸಮಾಧಾನ ಮಾಡಲು ಬಂದಿದ್ದ ಸ್ನೇಹಿತೆಯರಿಗೆ ಚಾಕುವಿನಿಂದ ಹಲ್ಲೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 31 MAY 2023

SHIMOGA : ಗಂಡ, ಹೆಂಡತಿ ವೈಮನಸು ದೂರ ಮಾಡಲು ಹೋಗಿದ್ದ ಇಬ್ಬರು ಸ್ನೇಹಿತೆಯರಿಗೆ (friends) ಚಾಕುವಿನಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಬ್ಬರು ಮಹಿಳೆಯರು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

crime name image

ಅನುಷಾ (21) ಮತ್ತು ಜಾಹ್ನವಿ ಎಂಬುವವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ. ಅನುಷಾಳ ಸ್ನೇಹಿತೆ ಮತ್ತು ಆಕೆಯ ಗಂಡನ ಮಧ್ಯೆ ಜಗಳವಾಗಿತ್ತು. ಅನುಷಾಳ ಸ್ನೇಹಿತೆ (friends) ಮನೆ ಬಿಟ್ಟು ಹೋಗುವುದಾಗಿ ತಿಳಿಸಿ ಹೋಗಿದ್ದಳು. ಸ್ನೇಹಿತೆಯನ್ನು ಆಕೆಯ ಗಂಡನ ಬಳಿ ಕರೆದೊಯ್ದ ಅನುಷಾ ಸಮಾಧಾನಪಡಿಸಲು ಮುಂದಾಗಿದ್ದಳು. ಈ ವೇಳೆ ಮತ್ತೊಬ್ಬ ಸ್ನೇಹಿತೆ ಜಾಹ್ನವಿಯನ್ನೂ ಕರೆದೊಯ್ದಿದ್ದಳು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ಸುಗಳೇ ನಿಲ್ಲದ ಕಡೆ ಹೈಟೆಕ್‌ ತಂಗುದಾಣ, ನೂರಾರು ಪ್ರಯಾಣಿಕರು ನಿತ್ಯ ಕಾಯುವ ಕಡೆ ಕೇಳುವವರೇ ಇಲ್ಲ

ಈ ವೇಳೆ ಮಾತಿಗೆ ಮಾತು ಬೆಳೆದು ಸ್ನೇಹಿತೆಯ ಗಂಡ ಅನುಷಾಳಿಗೆ ಹೊಡೆದು, ಎಳೆದಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆತನೊಂದಿಗೆ ಬಂದಿದ್ದ ಮತ್ತೊಬ್ಬ ವ್ಯಕ್ತಿ ಚಾಕು ತೆಗೆದು ಅನುಷಾಳ ಕುತ್ತಿಗೆ ಬಳಿ ಮತ್ತು ಜಾಹ್ನವಿಯ ಬೆನ್ನಿಗೆ ಹಲ್ಲೆ ಮಾಡಿದ್ದಾನೆ. ಅ‍ಶ್ವಥನಗರದ ಚಾನಲ್‌ ಏರಿ ಮೇಲೆ ಘಟನೆ ಸಂಭವಿಸಿದೆ. ವಿನೋಬನಗರ ಠಾಣೆಯಲ್ಲಿ ಮಣಿಕಂಠ ಮತ್ತು ಕುಮಾರ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment