ನಟ ದರ್ಶನ್‌ ಕೇಸ್‌, ಶಿವಮೊಗ್ಗ ಜೈಲಿನಿಂದ ಮತ್ತೊಬ್ಬ ಆರೋಪಿ ರಿಲೀಸ್‌

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS, 18 DECEMBER 2024

ಶಿವಮೊಗ್ಗ : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಜಗದೀಶ್‌ ಅಲಿಯಾಸ್‌ ಜಗ್ಗು ಇವತ್ತು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾನೆ (Release). ಶೂರಿಟಿ ಸಿಗುವುದು ವಿಳಂಬವಾದ ಹಿನ್ನೆಲೆ ಒಂದು ದಿನ ತಡವಾಗಿ ಜೈಲಿನಿಂದ ಹೊರ ಬಂದಿದ್ದಾನೆ. ಆತನನ್ನು ಕರೆದೊಯ್ಯಲು ಕುಟುಂಬದವರು ಜೈಲು ಬಳಿ ಆಗಮಿಸಿದ್ದರು.

ಜಗದೀಶ ಚಿತ್ರದುರ್ಗದಲ್ಲಿ ಆಟೋ ಚಾಲಕನಾಗಿದ್ದ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದ ತಂಡದಲ್ಲಿದ್ದ. ಹಾಗಾಗಿ ಪ್ರಕರಣದಲ್ಲಿ ಜಗದೀಶ್‌ 6ನೇ ಆರೋಪಿಯಾಗಿದ್ದಾನೆ.

-Renukaswamy-Case-Actor-Darshan-fan-Auto-Driver-jagdish-released-from-jail.

ಇದನ್ನೂ ಓದಿ » ನಟ ದರ್ಶನ್‌ ಚಾಲಕ ಶಿವಮೊಗ್ಗ ಜೈಲಿಂದ ರಿಲೀಸ್‌, ಓಡೋಡಿ ಹೋಗಿ ಕಾರು ಹತ್ತಿದ ಆರೋಪಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಆರೋಪದ ಹಿನ್ನೆಲೆ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾಯಿಸಲಾಗಿತ್ತು. ಆಗಸ್ಟ್‌ 29ರಂದು ಆರೋಪಿಗಳಾದ ಜಗದೀಶ ಮತ್ತು ಲಕ್ಷ್ಮಣನನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ನ್ಯಾಯಾಲಯ ಜಾಮೀನು ಪ್ರಕಟಿಸಿದ ಹಿನ್ನೆಲೆ ಡಿ.17ರಂದು ಲಕ್ಷ್ಮಣ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿದ್ದ. ಶೂರಿಟಿ ಸಿಗುವುದು ತಡವಾದ ಹಿನ್ನೆಲೆ ಜಗದೀಶ್‌ ಇವತ್ತು ರಿಲೀಸ್‌ ಆಗಿದ್ದಾನೆ.

Shimoga-Central-Jail-Front-General-Image

ಇದನ್ನೂ ಓದಿ » ಕಚೇರಿಗೆ ಬಂದ ಪತ್ರ ಓದಿದ ಅಧಿಕಾರಿಗೆ ಕಾದಿತ್ತು ಶಾಕ್‌, ಏನಿತ್ತು ಲೆಟರ್‌ನಲ್ಲಿ?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment