ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 13 ಜನವರಿ 2022
ಗಾಂಧಿ ಬಜಾರ್’ನಲ್ಲಿ ಬೈಕ್ ಕಳ್ಳತನ
ಗಾಂಧಿ ಬಜಾರ್’ನಲ್ಲಿಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಸ್ಪ್ಲೆಂಡರ್ ಬೈಕ್ ಕಳುವಾಗಿದೆ. ರಾಜೇಶ್ ಚಂದ್ರಕಾಂತ್ ಬಿದರಿ ಎಂಬುವವರಿಗೆ ಸೇರಿದ ಬೈಕ್ ನಾಪತ್ತೆಯಾಗಿದೆ. ಅಂಗಡಿಯೊಂದಕ್ಕೆ ಹೋಗಿ ಬರುವಷ್ಟರಲ್ಲು ಬೈಕ್ ನಾಪತ್ತೆಯಾಗಿದೆ. ಈ ಕುರಿತು ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಟೋ ಕದ್ದೊಯ್ದ ಕಳ್ಳರು
ಶಿವಮೊಗ್ಗದ ಸುಂದರ ಆಶ್ರಯ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ನಿಲ್ಲಿಸಿದ್ದ ಆಟೋ ಕಳ್ಳತನವಾಗಿದೆ. ಆನಂದಪ್ಪ ಎಂಬುವವರಿಗೆ ಸೇರಿದ ಆಟೋವನ್ನು ಭದ್ರಾವತಿಯ ಮುನಿಯಪ್ಪ ಎಂಬುವವರು ಬಾಡಿಗೆಗೆ ಓಡಿಸಿಕೊಂಡಿದ್ದರು. ಮುನಿಯಪ್ಪ ಅವರು ಆಟೋವನ್ನು ಸುಂದರ ಆಶ್ರಯ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ನಿಲ್ಲಿಸಿ, ಪರಿಚಿತರೊಂದಿಗೆ ಸೋಮಿನಕೊಪ್ಪಗೆ ತೆರಳಿದ್ದರು. ಮರಳಿ ಬಂದಾಗ ಆಟೋ ನಾಪತ್ತೆಯಾಗಿತ್ತು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

- ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

- ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

About The Editor
ನಿತಿನ್ ಆರ್.ಕೈದೊಟ್ಲು
















