ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 18 DECEMBER 2024
ಭದ್ರಾವತಿ : ಬೈಕ್ (Bike) ಶಬ್ದದ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಸಯ್ಯದ್ ಜಫರುಲ್ಲಾ ತನ್ನ ಪಲ್ಸರ್ ಬೈಕಿನಲ್ಲಿ ಕಾಚಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ಜೋರು ಶಬ್ದ ಮಾಡಿಕೊಂಡು ತೆರಳುತ್ತಿದ್ದ. ಹೊಸಮನೆಯ ರಘು ಎಂಬಾತ ಬೈಕ್ ಅಡ್ಡಗಟ್ಟಿ ಇಷ್ಟು ಶಬ್ದ ಮಾಡಿಕೊಂಡು ಹೋಗುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಸಯ್ಯದ್ ಜಫರುಲ್ಲಾ ತಲೆಗೆ ಗಾಯವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿಲಾಗಿತ್ತು. ಘಟನೆ ಸಂಬಂಧ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೈಕಿನ ಶಬ್ದದ ವಿಚಾರಕ್ಕೆ ಕಿರಿಕ್, ಬಡಿದಾಟ
ಶಿವಮೊಗ್ಗ : ಮೂರು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಬೇಡರಹೊಸಹಳ್ಳಿ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಕೊಪ್ಪಳಕ್ಕೆ ತೆರಳುತ್ತಿದ್ದ ಕಿಯಾ ಸೆಲ್ಟೋಸ್ ಕಾರಿಗೆ ಎದುರಿನಿಂದ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರು ಕಿಯಾ ಸೆಲ್ಟೋಸ್ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕಿಯಾ ಕಾರಿನಲ್ಲಿದ್ದ ಗಂಗಾವತಿಯ ಸುಲೋಚನಾ (60) ಗಂಭೀರ ಗಾಯಗೊಂಡಿದ್ದು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂರು ಕಾರುಳಲ್ಲಿದ್ದ ಒಟ್ಟು ಏಳು ಮಂದಿ ಗಾಯಗೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೇಡರ ಹೊಸಹಳ್ಳಿ ಬಳಿ ಸರಣಿ ಅಪಘಾತ, ಮಹಿಳೆ ಸಾವು
ಇದನ್ನೂ ಓದಿ » ಶಿವಮೊಗ್ಗದ ಕಾಲೇಜಿನಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು
ಶಿವಮೊಗ್ಗ : ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕನ ಕಾಲಿನ ಮೂಳೆ ಮುರಿದಿದೆ. ಶಿವಮೊಗ್ಗ ತಾಲೂಕು ಅಬ್ಬಲಗೆರೆ ಮತ್ತು ಬೆಳಲಕಟ್ಟೆ ನಡುವೆ ಘಟನೆ ಸಂಭವಿಸಿದೆ. ಸಂದೀಪ್ (27) ಎಂಬಾತನ ಕಾಲಿನ ಮೂಳೆ ಮುರಿದಿದೆ. ಸಂಜಯ್ ಎಂಬುವವರ ಬೈಕಿನಲ್ಲಿ ಸಂದೀಪ್ ತೆರಳುತ್ತಿದ್ದಾಗ ಜೀವನ್ ಎಂಬುವವರ ಬೈಕ್ ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ. ಸಂದೀಪ್‌ಗೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೈಕುಗಳು ಡಿಕ್ಕಿ, ಯುವಕನ ಕಾಲಿನ ಮೂಳೆ ಕಟ್
ಇದನ್ನೂ ಓದಿ » ಶಿವಮೊಗ್ಗದಲ್ಲಿ ಲಾಡ್ಜ್ ಮೇಲೆ ಪೊಲೀಸ್ ರೇಡ್, 11 ಮಂದಿ ವಿರುದ್ಧ ಕೇಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422