ಹಣಗೆರೆಯಲ್ಲಿ ಪೂಜೆ ಮುಗಿಸಿ ಹೊರ ಬಂದ ಹಾವೇರಿಯ ಭಕ್ತರಿಗೆ ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | THIRTAHALLI NEWS | 17 ಫೆಬ್ರವರಿ 2022

ಹಾವೇರಿಯ ಹಿರೇಕೆರೂರು ತಾಲೂಕಿನಿಂದ ತೀರ್ಥಹಳ್ಳಿಯ ಹಣಗೆರೆ ಕಟ್ಟೆ ದೇವಸ್ಥಾನಕ್ಕೆ ಬಂದಿದ್ದವರ ಬೈಕ್ ಕಳ್ಳತನವಾಗಿದೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹನುಮಗೌಡ ಪಾಟೀಲ್ ಎಂಬುವವರು ತಮ್ಮ ಊರಿನ ಒಬ್ಬರೊಂದಿಗೆ ಹಣಗೆರೆ ಕಟ್ಟೆ ದೇವಸ್ಥಾನಕ್ಕೆ ಆಗಮಿಸಿದ್ದರು. ತಮ್ಮ ಮಾವನ ಪ್ಯಾಷನ್ ಪ್ರೋ ಬೈಕ್ ಪಡೆದುಕೊಂಡು ಬಂದಿದ್ದ ಹನುಮಗೌಡ ಪಾಟೀಲ್ ಅವರು, ದೇವಸ್ಥಾನದ ಆವರಣದಲ್ಲಿ ನಿಲ್ಲಿಸಿದ್ದರು.

ಬೆಳಗ್ಗೆ ದೇಗುಲದ ಒಳಗೆ ಹೋಗಿ ಪೂಜೆ ಮುಗಿಸಿ ಬರುವಷ್ಟರಲ್ಲಿ ಬೈಕ್ ಕಣ್ಮರೆಯಾಗಿತ್ತು. ಎಲ್ಲೆಡೆ ಹುಡುಕಿದ ಹನುಮಗೌಡ ಪಾಟೀಲ್ ಅವರು, ಬಳಿಕ ಮಾಳೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನು ಓದಿ | ಗ್ರಾಮಸ್ಥರಿಂದ ಹಣಗೆರೆ ಕಟ್ಟೆಗೆ ಬರುವ ಭಕ್ತರ ವಾಹನಗಳ ತಪಾಸಣೆ

Shimoga Nanjappa Hospital Cancer Care Center

Shimoga Live News Website Country Wiser Reach graphics

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment