ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS, 10 FEBRUARY 2025
ಶಿವಮೊಗ್ಗ : ನಗರದ ವಿವಿಧೆಡೆ ಬೈಕುಗಳ (Bike) ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಒಂದು ವಾರದಿಂದ ಈಚೆಗೆ ವಿವಿಧ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ.
ಎಲ್ಲೆಲ್ಲಿ ಬೈಕ್ ಕಳ್ಳತನವಾಗಿದೆ?
ಶರಾವತಿ ನಗರದ 7ನೇ ಅಡ್ಡರಸ್ತೆಯಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿ ಪ್ರಶಿಕುಮಾರ್ ಎಂಬುವವರ ಟಿವಿಎಸ್ ವಿಕ್ಟರ್ ಬೈಕ್ ಕಳ್ಳತನವಾಗಿದೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಬೆಳಗ್ಗೆ ನಾಪತ್ತೆಯಾಗಿತ್ತು ಎಂದು ಆರೋಪಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನೋಬನಗರದ ಇಂದಿರಾ ಕ್ಯಾಂಟೀನ್ ಬಳಿ ಅರುಣ್ ಕೋರಿ ಎಂಬುವವರ ಬೈಕ್ ಕಳ್ಳತನವಾಗಿದೆ. ಖಾನಾವಳಿ ನಡೆಸುತ್ತಿರುವ ಅರುಣ್ ಕೋರಿ ಬೈಕ್ ನಿಲ್ಲಿಸಿ ಬೆಳಗ್ಗೆ ಖಾನಾವಳಿಗೆ ತೆರಳಿದ್ದರು. ಸಂಜೆ ಕೆಲಸ ಮುಗಿಸಿ ಬಂದಾಗ ಬೈಕ್ ಇರಲಿಲ್ಲ. ಸಮೀಪದ ಪಿ.ಜಿ.ಯ ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ ಎಂದು ಆರೋಪಿಸಿ ವಿನೋಬನಗರದ ಠಾಣೆಗೆ ದೂರು ನೀಡಿದ್ದಾರೆ.
ರಂಗನಾಥ ಬಡಾವಣೆಯಲ್ಲಿ ಶರತ್ ಕುಮಾರ್ ಎಂಬುವವರ ರಾಯಲ್ ಎನ್ಫೀಲ್ಡ್ ಬೈಕ್ ಕಳ್ಳತನಾಗಿದೆ. ಶರತ್ ಅವರು ಚಿಕ್ಕಮ್ಮನ ಆರೋಗ್ಯ ವಿಚಾರಿಸಲು ಮನೆಗೆ ಬಂದಾಗ ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ವಾಯುಸೇನೆ ಅಧಿಕಾರಿ ಮಂಜುನಾಥ್ ಪಂಚಭೂತಗಳಲ್ಲಿ ಲೀನ, ಇಲ್ಲಿದೆ ಇಡೀ ದಿನದ ಕಂಪ್ಲೀಟ್ ಮಾಹಿತಿ






