ವಾಯುಸೇನೆ ಅಧಿಕಾರಿ ಮಂಜುನಾಥ್‌ ಪಂಚಭೂತಗಳಲ್ಲಿ ಲೀನ, ಇಲ್ಲಿದೆ ಇಡೀ ದಿನದ ಕಂಪ್ಲೀಟ್‌ ಮಾಹಿತಿ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS, 9 FEBRUARY 2025

ಹೊಸನಗರ : ಉತ್ತರ ಪ್ರದೇಶದ ಆಗ್ರಾದಲ್ಲಿ ಹುತಾತ್ಮರಾದ ವಾಯುಸೇನೆ ವಾರಂಟ್‌ ಆಫೀಸರ್‌ ಸಿ.ಜಿ.ಮಂಜುನಾಥ್‌ (36) ಅವರ ಅಂತ್ಯಕ್ರಿಯೆ (Last Rites) ಹುಟ್ಟೂರು ಸಂಕೂರು ಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಇದಕ್ಕೂ ಮುನ್ನ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯ ಜನರು ಪಾಲ್ಗೊಂಡಿದ್ದರು.

ಹೊಸನಗರ ತಾಲೂಕು ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕೂರು ಗ್ರಾಮದಲ್ಲಿ ಸಿ.ಜಿ.ಮಂಜುನಾಥ್‌ ಅವರ ಅಂತ್ಯಕ್ರಿಯೆ ನೆರವೇರಿತು.

Airforce-officer-manjunath-last-rites-a-hosanagara

ಹಳ್ಳಿ ಹಳ್ಳಿಯಲ್ಲೂ ಮಂಜುನಾಥ್‌ಗೆ ನಮನ

ಬೆಂಗಳೂರಿನಿಂದ ಇಂದು ಬೆಳಗ್ಗೆ ವಾಯುಸೇನೆ ಅಧಿಕಾರಿ ಸಿ.ಜಿ.ಮಂಜುನಾಥ್‌ ಅವರ ಪಾರ್ಥೀವ ಶರೀರ ಶಿವಮೊಗ್ಗಕ್ಕೆ ರವಾನಿಸಲಾಗಿತ್ತು. ಶಿವಮೊಗ್ಗದಿಂದ ಬೆಳಗ್ಗೆ ಹೊಸನಗರದತ್ತ ಹೊರಟ ಪಾರ್ಥೀವ ಶರೀರಕ್ಕೆ ಅಲ್ಲಲ್ಲಿ ಜನರು ನಮನ ಸಲ್ಲಿಸಿದರು. ಮಂಜುನಾಥ್‌ ಅಮರ್‌ ರಹೇ ಎಂದು ಘೋಷಣೆ ಮೊಳಗಿಸಿದರು.

Last Rites of Indian Airforce officer manjunath at hosangara in Shimoga

ಹೊಸನಗರದಿಂದ ಸಂಕೂರು ಗ್ರಾಮದವರೆಗೆ ತಾಲೂಕು ಅಡಳಿತದ ವತಿಯಿಂದ ಮೆರವಣಿಗೆ ನಡೆಸಲಾಯಿತು. ವಿವಿಧ ಗ್ರಾಮಗಳ ಜನರು, ಶಾಲೆ, ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಿದ್ದರು.

ಮನೆ ಆವರಣದಲ್ಲಿ ಅಂತಿಮ ದರ್ಶನ

ಸೇನಾ ವಾಹನದಲ್ಲಿ ಮೆರವಣಿಗೆ ಮೂಲಕ ಪಾರ್ಥೀವ ಶರೀರವನ್ನು ಸಂಕೂರಿನಲ್ಲಿರುವ ಮನೆಗೆ ತರಲಾಯಿತು. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಹೆಚ್.ಹಾಲಪ್ಪ, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ, ಸಾಗರ ಉಪ ವಿಭಾಗಾಧಿಕಾರಿ ಯತೀಶ್‌, ತಹಶೀಲ್ದಾರ್‌ ರಶ್ಮಿ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.

Last Rites of Indian Airforce officer manjunath at hosangara in Shimoga

ಬಳಿಕ ಪಾರ್ಥೀವ ಶರೀರಕ್ಕೆ ಕುಟುಂಬದವರು ಪೂಜೆ ಸಲ್ಲಿಸಲು ಅವಕಾಶ ನೀಡಲಾಯಿತು. ಮನೆಯೊಳಗೆ ಪಾರ್ಥೀವ ಶರೀರ ಕೊಂಡೊಯ್ದು ವಿಧಿವಿಧಾನ ನಡೆಸಲಾಯಿತು.

Last Rites of Indian Airforce officer manjunath at hosangara in Shimoga

ಪೊಲೀಸ್‌ ಗೌರವ ವಂದನೆ

ವಾಯುಸೇನೆ ಅಧಿಕಾರಿ ಸಿ.ಜಿ.ಮಂಜುನಾಥ್‌ ಅವರಿಗೆ ಹೊಸನಗರ ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಪೊಲೀಸ್‌ ಬ್ಯಾಂಡ್‌ ತಂಡ ರಾಷ್ಟ್ರಗೀತೆ ನುಡಿಸಿತು. ಇದೇ ವೇಳೆ ಪೊಲೀಸರು ಮೂರು ಬಾರಿ ಕುಶಾಲುತೋಪು ಸಿಡಿಸಿದರು.

Last Rites of Indian Airforce officer manjunath at hosangara in Shimoga

ವಾಯುಸೇನೆಯಿಂದಲು ಕುಶಾಲುತೋಪು

ವಾಯು ಸೇನೆಯಿಂದಲು ವಾರಂಟ್‌ ಆಫೀಸರ್‌ ಸಿ.ಜಿ.ಮಂಜುನಾಥ್‌ ಅವರ ಪಾರ್ಥೀವ ಶರೀರಕ್ಕೆ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭ ಪಾರ್ಥೀವ ಶರೀರದ ಮುಂಭಾಗ ವಾಯುಸೇನೆಯಿಂದಲು ಮೂರು ಸುತ್ತು ಕುಶಾಲುತೋಪು ಸಿಡಿಸಲಾಯಿತು.

Last Rites of Indian Airforce officer manjunath at hosangara in Shimoga

ಆಘಾತದಲ್ಲಿ ತಾಯಿ, ಪತ್ನಿಯಿಂದ ಮುತ್ತಿನ ವಿದಾಯ

ಮಂಜುನಾಥ್‌ ಅವರು ಮೃತರಾದ ವಿಷಯ ತಿಳಿದಾಗಿನಿಂದ ಅವರ ತಾಯಿ ನಾಗರತ್ನ ಆಘಾತಕ್ಕೊಳಗಾಗಿದ್ದರು. ಇವತ್ತು ಮಗನ ಮುಖ ದರ್ಶನವಾಗುತ್ತಿದ್ದಂತೆ ನಾಗರತ್ನ ಅವರು ಕಣ್ಣೀರಾದರು. ಇತ್ತ, ಮಂಜುನಾಥ್‌ ಅವರ ಪತ್ನಿ ಕಲ್ಪಿತಾ ಸಾಕಿಯಾ ಕಣ್ಣೀರಿಟ್ಟರು. ಮಂಜುನಾಥ್‌ ಅವರ ಹಣೆಗೆ ಮುತ್ತಿಟ್ಟು ಪತಿಗೆ ವಿದಾಯ ತಿಳಿಸಿದರು.

Last Rites of Indian Airforce officer manjunath at hosangara in Shimoga

ಪತ್ನಿಗೆ ರಾಷ್ಟ್ರಧ್ವಜ ಹಸ್ತಾಂತರ

ಮಂಜುನಾಥ್‌ ಅವರ ಪಾರ್ಥೀವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಪತ್ನಿ ಕಲ್ಪಿತಾ ಸಾಕಿಯಾ ಅವರಿಗೆ ಹಸ್ತಾಂತರ ಮಾಡಲಾಯಿತು. ಅಂತ್ಯಸಂಸ್ಕಾರದ ಸಂದರ್ಭ ವಾಯುಸೇನೆಯ ಅಧಿಕಾರಿಗಳು ರಾಷ್ಟ್ರಧ್ವಜವನ್ನು ಒಪ್ಪಿಸಿದರು.

Last Rites of Indian Airforce officer manjunath at hosangara in Shimoga

ಸಹೋದರನಿಂದ ಅಗ್ನಿಸ್ಪರ್ಶ

ಸಂಕೂರಿನಲ್ಲಿ ಮನೆಯ ಆವರಣದಲ್ಲಿಯೆ ಸಿ.ಜಿ.ಮಂಜುನಾಥ್‌ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈಡಿಗ ಸಂಪ್ರದಾಯದಂತೆ ವಿಧಿವಿಧಾನಗಳು ನಡೆದವು. ಸಹೋದರ ಯುವರಾಜ್‌, ಮಂಜುನಾಥ್‌ ಅವರ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.

Last Rites of Indian Airforce officer manjunath at hosangara in Shimoga

ಇದನ್ನೂ ಓದಿ » ಹೊಸನಗರದಲ್ಲಿ ನೀರವ ಮೌನ, ಊರ ಮಗನನ್ನು ಕಳೆದುಕೊಂಡು ದುಃಖ, ಪ್ರಕರಣದ ತನಿಖೆಗೆ ಒತ್ತಾಯ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment