ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಸೆಪ್ಟೆಂಬರ್ 2021
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬೈಕ್ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಮನೆ ಮುಂದೆ ನಿಲ್ಲಿಸಿದ್ದ ಬೈಕುಗಳನ್ನೆ ಟಾರ್ಗೆಟ್ ಮಾಡಿ ಕಳವು ಮಾಡಲಾಗಿದೆ.
ಪಟ್ಟಣ ಮಾತ್ರವಲ್ಲದೆ ಹಳ್ಳಿಗಳಲ್ಲೂ ಬೈಕ್ ಕಳವಾಗಿದೆ. ಈ ಸಂಬಂಧ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ.
ರಾತ್ರಿ ನಿಲ್ಲಿಸಿದ ಬೈಕ್ ಬೆಳಗ್ಗೆ ಇಲ್ಲ
ವಿನೋಬನಗರ ಮೊದಲ ಹಂತದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಿಕ್ಟರ್ ಬೈಕ್ ಕಳ್ಳತನವಾಗಿದೆ. ನಾಗರಾಜ ರಾವ್ ಎಂಬುವವರಿಗೆ ಸೇರಿದ ಬೈಕನ್ನು ರಾತ್ರಿ ತಂದು ಮನೆ ಮುಂದೆ ನಿಲ್ಲಿಸಿದ್ದರು. ಬೆಳಗ್ಗೆದ್ದು ಹೊರಗೆ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು ಎಂದು ನಾಗರಾಜ ರಾವ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗ್ಗೆನೆ ಬೈಕ್ ಕದ್ದ ಖದೀಮರು
ಶಿವಮೊಗ್ಗ ಎಲ್’ಬಿಎಸ್ ನಗರದ ಗಂಗಾಧರಪ್ಪ ಎಂಬುವವರು ಬೆಳಗ್ಗೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಬೆಳಗ್ಗೆ 9 ಗಂಟೆಗೆ ಮನೆ ಮುಂದೆ ಬೈಕ್ ತಂದು ನಿಲ್ಲಿಸಿದ್ದಾರೆ. ಹತ್ತು ಗಂಟೆಗೆ ಹೊರಗೆ ಬಂದಾಗ ಬೈಕ್ ಕಣ್ಮರೆಯಾಗಿತ್ತು. ಎಲ್ಲೆಡೆ ಹುಡುಕಾಡಿ, ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ವಿನೋಬನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾತ್ರಿ ನಿಲ್ಲಿಸಿದ್ದ ಬೈಕ್ ನಡುರಾತ್ರಿ ಇಲ್ಲ
ಹಾರನಹಳ್ಳಿ ಕೋಟೆ ಗ್ರಾಮದಲ್ಲಿ ಬೈಕ್ ಕಳ್ಳತನವಾಗಿದೆ. ನಾಗರಾಜ್ ಎಂಬುವವರಿಗೆ ಸೇರಿದ ಬೈಕನ್ನು ರಾತ್ರಿ ತಂದು ಮನೆ ಮುಂದೆ ನಿಲ್ಲಿಸಿದ್ದರು. ನಡುರಾತ್ರಿ ಎದ್ದು ನೋಡಿದಾಗ ಬೈಕ್ ಕಾಣಿಸಲಿಲ್ಲ. ಬಜಾಜ್ ಡಿಸ್ಕವರ್ ಬೈಕ್ ಕಳ್ಳತನವಾಗಿರುವ ಬಗ್ಗೆ ನಾಗರಾಜ್ ಅವರು ಕುಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಾರನಹಳ್ಳಿಯಲ್ಲಿ ಬೈಕ್ ಕಳ್ಳತನ
ಶಿವಮೊಗ್ಗ ತಾಲೂಕ ಹಾರನಹಳ್ಳಿಯ ಪೇಟೆ ಬೀದಿಯಲ್ಲಿ ಬೈಕ್ ಕಳ್ಳತನವಾಗಿದೆ. ಭಾಸ್ಕರ್ ಎಂಬುವವರಿಗೆ ಸೇರಿದ ಬೈಕ್ ಕಳವಾಗಿದೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕು ಬೆಳಗ್ಗೆ ನೋಡಿದಾಗ ಕಾಣ್ಮರೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಭಾಸ್ಕರ್ ಅವರು, ಕೊನೆಗೆ ಕುಂಸಿ ಠಾಣೆಗೆ ದೂರು ನೀಡಿದ್ದಾರೆ.
ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಾಪತ್ತೆ
ಭದ್ರಾವತಿಯ ಕೆಇಬಿ ಕ್ವಾರ್ಟರ್ಸ್’ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವಾಗಿದೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ, ಬೆಳಗ್ಗೆ ನಾಪತ್ತೆಯಾಗಿದೆ. ವಸಂತಾ ಎಂಬುವವರಿಗೆ ಸೇರಿದ ಸ್ಕೂಟಿಯನ್ನು ಕಳ್ಳರು ರಾತ್ರಿ ವೇಳೆ ಕದ್ದೊಯ್ದಿದ್ದಾರೆ. ಈ ಸಂಬಂಧ ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಮ್ಮದಿಯ ಮನೆಗೆ ಅಚ್ಚುಕಟ್ಟಾದ ಪೀಠೋಪಕರಣ. ಶಿವಮೊಗ್ಗದಲ್ಲಿ @HOME ಶೋರೂಂ. ಒಮ್ಮೆ ಭೇಟಿ ಕೊಡಿ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
LATEST NEWS
- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

- ಇವತ್ತು ಸಂಕಷ್ಟ ಚತುರ್ಥಿ, ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

About The Editor
ನಿತಿನ್ ಆರ್.ಕೈದೊಟ್ಲು





