ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ: ಖಾಸಗಿ ಬಸ್ಸಿನಲ್ಲಿ (Bus) ಪ್ರಯಾಣಿಸುವಾಗ ಮಹಿಳೆಯ ಕೈಯಲ್ಲಿದ್ದ ಚಿನ್ನದ ಬ್ರೇಸ್‌ಲೆಟ್ ಕಳ್ಳತನವಾಗಿದೆ. ಸುಮಾರು 70 ಸಾವಿರ ರೂ. ಮೌಲ್ಯದ 20 ಗ್ರಾಂ ತೂಕದ ಬಂಗಾರದ ಬ್ರೇಸ್‌ಲೆಟ್ ಕಳುವಾಗಿದೆ ಎಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್ ಟು ಸ್ಕೂಲ್ ಆಫರ್, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?
ಡಯಾನಾ ಜೋಸೆಫ್ ಎಂಬುವವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮುಡುಬಾದಿಂದ ಶಿವಮೊಗ್ಗಕ್ಕೆ ಖಾಸಗಿ ಬಸ್ಸಿನಲ್ಲಿ ಆಗಮಿಸಿದ್ದರು. ಬಸ್‌ನಲ್ಲಿ ಜನ ಸಂದಣಿ ಹೆಚ್ಚಿತ್ತು. ಮಕ್ಕಳಿದ್ದರಿಂದ ಕಂಡಕ್ಟರ್ ಸೀಟ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ಶಿವಮೊಗ್ಗಕ್ಕೆ ತಲುಪಿದಾಗ ಬಸ್ ನಿಲ್ದಾಣದಲ್ಲಿ ಡಯಾನಾ ಜೋಸೆಫ್ ಮಕ್ಕಳೊಂದಿಗೆ ಕೆಳಗಿಳಿದಿದ್ದರು.

ಪತಿಗೆ ಕರೆ ಮಾಡಲು ಬ್ಯಾಗ್ ತೆಗೆಯಲು ಮುಂದಾದಾಗ ಕೈಯಲ್ಲಿದ್ದ ಬ್ರೇಸ್‌ಲೆಟ್ ನಾಪತ್ತೆ ಆಗಿರುವುದು ಗೊತ್ತಾಗಿದೆ. ಎಲ್ಲೆ ಹುಡುಕಿದರು ಬ್ರೇಸ್‌ಲೆಟ್ ಸಿಗಲಿಲ್ಲ. ಬಸ್ಸಿನಲ್ಲಿ ಬರುವಾಗ ಬ್ರೇಸ್‌ಲೆಟ್ ಕಳುವಾಗಿ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಪೆಟ್ರೋಲ್ ಸುರಿದು ಆ್ಯಪಲ್‌ಗೆ ಬೆಂಕಿ ಹೆಚ್ಚಿ ಆಕ್ರೋಶ, ಕಾರಣವೇನು?







