ಶಿವಮೊಗ್ಗದ ಮಹಿಳೆಯರೆ ಎಚ್ಚರ, ನಿಮ್ಮ ಮನೆಗೂ ಬರಬಹುದು ‘ಬ್ರೌನ್ ಪೌಡರ್’ ಗ್ಯಾಂಗ್, ಏನಿದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 19 MARCH 2021

ಸರಗಳ್ಳರ ಭೀತಿ ಒಂದೆಡೆಯಾದರೆ, ಶಿವಮೊಗ್ಗದಲ್ಲಿ ಈಗ ಬ್ರೌನ್ ಪೌಡರ್ ಗ್ಯಾಂಗ್ ಪ್ರತ್ಯಕ್ಷವಾಗಿದೆ. ಸ್ವಲ್ಪ ಯಾಮಾರಿದರೂ ಮಹಿಳೆಯರು ತಮ್ಮ ಕಣ್ಮುಂದೆಯೇ ಚಿನ್ನಾಭರಣ ಕಳೆದುಕೊಳ್ಳುವ ಆತಂಕವಿದೆ.

ಶಿವಮೊಗ್ಗದ ಮಹಿಳೆಗೆ ವಂಚನೆ

ಫಳಫಳ ಹೊಳೆಯುವಂತೆ ಮಾಡಿ ಕೊಡ್ತೀವಿ ಅಂತಾ ನಂಬಿಸಿ, ಮಹಿಳೆಯೊಬ್ಬರ ಮಾಂಗಲ್ಯ ಸರವನ್ನೇ ಕಟ್ ಮಾಡಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಘಟನೆ ಸಂಭವಿಸಿದೆ.

ಅಶೋಕ ನಗರದ ಸಂಗೀತಾ ಎಂಬುವವರನ್ನು ಕಳ್ಳರು ವಂಚಿಸಿದ್ದಾರೆ. ಚಿನ್ನ, ಬೆಳ್ಳಿಯ ಆಭರಣಗಳನ್ನು ಉಚಿತವಾಗಿ ಹೊಳೆಯುವಂತೆ ಮಾಡಿ ಕೊಡುವುದಾಗಿ ನಂಬಿಸಿ ಈ ಕೃತ್ಯ ಎಸಗಿದ್ದಾರೆ.

ಏನಿದು ವಂಚನೆ? ಹೇಗಾಯ್ತು ಘಟನೆ?

ಬೆಳ್ಳಿ, ಬಂಗಾರದ ಆಭರಣಗಳು, ಶೋಕೇಸ್, ಟಿವಿ ಸೇರಿದಂತೆ ಹಲವು ವಸ್ತುಗಳನ್ನು ಕ್ಲೀನ್ ಮಾಡುವ ಪೌಡರ್ ಮಾರಾಟ ಮಾಡುತ್ತಿದ್ದೇವೆ ಎಂದು ನಂಬಿಸಿ, ಇಬ್ಬರು ಯುಕವರು ಸಂಗೀತಾ ಅವರ ಮನೆ ಬಳಿಗೆ ಬಂದಿದ್ದಾರೆ. ಸ್ಯಾಂಪಲ್‍ ತೋರಿಸುವುದಾಗಿ ತಿಳಿಸಿದ್ದಾರೆ.

ಯುವಕರ ಮಾತು ನಂಬಿದ ಸಂಗೀತಾ ಅವರು ತಮ್ಮ  ಬೆಳ್ಳಿ ವಸ್ತುಗಳನ್ನು ನೀಡಿದ್ದಾರೆ. ಪೌಡರ್ ಬಳಸಿ ಬೆಳ್ಳಿ ವಸ್ತುಗಳು ಫಳಫಳ ಹೊಳೆಯುವಂತೆ ಮಾಡಿಕೊಟ್ಟಿದ್ದಾರೆ. ಆ ಬಳಿಕ ಚಿನ್ನದ ಆಭರಣಗಳಿದ್ದರೆ ಅವುಗಳನ್ನು ಇದೆ ರೀತಿ ಹೊಳೆಯುವಂತೆ ಮಾಡಿಕೊಡುತ್ತೇವೆ ಎಂದು ವಂಚಕರು ತಿಳಿಸಿದ್ದಾರೆ.

ಸಂಗೀತಾ ಅವರು ತಮ್ಮ ಮಾಂಗಲ್ಯ ಸರವನ್ನೇ ವಂಚಕರ ಕೈಗಿಟ್ಟಿದ್ದಾರೆ. ಮಾಂಗಲ್ಯ ಸರದ ಮೇಲೆ ಬ್ರೌನ್‍ ಪೌಡರ್ ಸುರಿದು, ಲಿಕ್ವಿಡ್‍ ಮತ್ತು ಜೆಲ್ ಹಾಕಿ ಬ್ರೆಷ್‍ ಬಳಸಿ ವಂಚಕರು ತೊಳೆಯುವಂತೆ ನಟಿಸಿದ್ದಾರೆ. ಕೆಲವು ಕ್ಷಣದ ಬಳಿಕ ಬಟ್ಟೆಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಚಿನ್ನದ ಸರವನ್ನು ಸುಟ್ಟಿದ್ದಾರೆ. ನಂತರ ಮಾಂಗಲ್ಯ ಸರವನ್ನು ನೀರಿನಿಂದ ತೊಳೆದು, ಅರಿಶಿನ ಪುಡಿ ಹಾಕಿ, ಪೇಪರ್‍ ಒಂದರಲ್ಲಿ ಪೊಟ್ಟಣ ಕಟ್ಟಿ ಕೊಟ್ಟಿದ್ದಾರೆ.

ಹತ್ತು ನಿಮಿಷದ ಬಳಿಕ ತೆಗೆಯಿರಿ

ಪೊಟ್ಟಣವನ್ನು ಹತ್ತು ನಿಮಿಷದ ಬಳಿಕ ತೆಗೆಯಿರಿ ಎಂದು ಸಂಗೀತಾ ಅವರಿಗೆ ತಿಳಿಸಿದ ವಂಚಕರು, ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪೊಟ್ಟಣದಿಂದ ಮಾಂಗ್ಯಲ ಸರವನ್ನು ತೆಗೆದು, ತೊಳೆಯಲು ಹೋದಾಗ  ಅಲ್ಲಲ್ಲಿ ತುಂಡಾಗಿರುವುದು ಸಂಗೀತಾ ಅವರ ಗಮನಕ್ಕೆ ಬಂದಿದೆ. ವಂಚನೆಗೊಳಗಾಗಿರುವುದು ಅರಿವಾಗುತ್ತಿದ್ದಂತೆ ಕಳ್ಳರಿಗಾಗಿ ಎಲ್ಲೆಡೆ ಹುಡುಕಿದ್ದಾರೆ.

ಮಾಂಗಲ್ಯ ಅರ್ಧಕರ್ಧ ಕಟ್

ಸಂಗೀತಾ ಅವರ ಮಾಂಗ್ಯದ ಸರವು 46 ಗ್ರಾಂ ಇತ್ತು. ವಂಚಕರು ಸುಮಾರು 23 ಗ್ರಾಂ ಕಟ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಇದರ ಮೌಲ್ಯ ಸುಮಾರು 93 ಸಾವಿರ ಎಂದು ಅಂದಾಜಿಸಲಾಗಿದೆ.

ಇಬ್ಬರು ಯುವಕರ ಅಂದಾಜು ವಯಸ್ಸು 25 ಮತ್ತು 27 ಇರಬಹುದು ಎಂದು ಸಂಗೀತಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 19, 2021

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

Leave a Comment