SHIVAMOGGA LIVE NEWS | THIRTHAHALLI | 20 ಏಪ್ರಿಲ್ 2022
ಸೋಲಾರ್ ರಿಪೇರಿ ನೆಪದಲ್ಲಿ ಮನೆ ಬಳಿಗೆ ಬಂದವರು ದರೋಡೆ ವಿಫಲ ಯತ್ನ ನಡೆಸಿದ್ದಾರೆ. ಮಹಿಳೆಯರ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ದರೋಡೆ ತಪ್ಪಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ.
ತೀರ್ಥಹಳ್ಳಿ ತಾಲೂಕು ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಬ್ಬಿ ಹೊರಣಿ ಬಳಿ ಸೋಮವಾರ ಸಂಜೆ ಘಟನೆ ಸಂಭವಿಸಿದೆ.
ಏನಿದು ಪ್ರಕರಣ?
ನೆರಟೂರು ಗ್ರಾಪಂ ವ್ಯಾಪ್ತಿಯ ಹೊರಣಿ ಗ್ರಾಮದಲ್ಲಿ ಸೋಮವಾರ ಸಂಜೆ ಸೋಲಾರ್ ರಿಪೇರಿ ಮಾಡುವ ನೆಪದಲ್ಲಿ ಶ್ರೀನಾಥ್ ಎಂಬುವವರ ಒಂಟಿ ಮನೆಗೆ ನುಗ್ಗಿದ ದರೋಡೆಕೋರರಿಗೆ ಮನೆಯಲ್ಲಿದ್ದ ಕುಟುಂಬದವರು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಂತೆ ಪರಾರಿಯಾಗಿದ್ದಾರೆ.
ಬೊಲೆರೋ ವಾಹನದಲ್ಲಿ ಬಂದ ಆರು ದರೋಡೆಕೋರರು ಸೋಲಾರ್ ರಿಪೇರಿ ಮಾಡುವುದಾಗಿ ಪರಿಚಯಿಸಿಕೊಂಡಿದ್ದಾರೆ. ಎದುರಿಗೆ ಬಂದ ಶ್ರೀನಾಥ್ ಅವರ ಪತ್ನಿ ಪದ್ಮಾವತಮ್ಮ ಮತ್ತು ಇವರ ಮಗಳ ಮುಖಕ್ಕೆ ದರೋಡೆಕೋರರು ಕ್ಲೋರೋಫಾರ್ಮ್ ಸಿಂಪಡಿಸಿದ ಬಟ್ಟೆಯನ್ನು ಮುಖಕ್ಕೆ ಒತ್ತಿಹಿಡಿದಿದ್ದಾರೆ.
ಭಯದಿಂದ ಕೆಳಗೆ ಬಿದ್ದ ಪದ್ಮಾವತಮ್ಮ ಅವರ ನಾಲ್ಕು ಹಲ್ಲುಗಳು ಮುರಿದಿವೆ. ಆಗ ಮನೆಯಲ್ಲಿ ಐದು ಮಂದಿ ಸದಸ್ಯರು ಜೋರಾಗಿ ಕೂಗಿ ಪ್ರತಿರೋಧ ತೋರಿದ್ದಾರೆ. ಆಗ ಅಕ್ಕಪಕ್ಕದವರೆಲ್ಲರೂ ಬರುತ್ತಿದ್ದಂತೆ ದರೋಡೆಕೋರು ಪರಾರಿಯಾಗಿದ್ದಾರೆ.
ನಂಬರ್ ಪ್ಲೇಟ್’ಗೆ ಸೆಗಣಿ ಮೆತ್ತಿದ್ದರು
ಸಿನಿಮೀಯ ಮಾದರಿಯಲ್ಲಿ ನಡೆದ ಈ ಪ್ರಕರಣದಲ್ಲಿ ಮನೆಯಲ್ಲಿದ್ದವರ ಸಕಾಲಿಕ ಸಮಯಪ್ರಜ್ಞೆ ಮತ್ತು ತೋರಿದ ಧೈರ್ಯದಿಂದಾಗಿ ಯಾವುದೇ ವಸ್ತುಗಳು ಅಪಹರಣವಾಗಿಲ್ಲ. ದರೋಡೆಕೋರರು ಸುಮಾರು 25 ರಿಂದ 30 ವರ್ಷ ವಯಸ್ಸಿನವರಾಗಿದ್ದು, ವಾಹನದ ನಂಬರ್ ಪ್ಲೇಟಿಗೆ ಸೆಗಣಿ ಮೆತ್ತಿದ್ದರು ಎನ್ನಲಾಗಿದೆ.
ಸಚಿವರು, ಮಾಜಿ ಸಚಿವರು ಭೇಟಿ
ವಿಚಾರ ತಿಳಿಯುತ್ತಿದ್ದ ಹಾಗೆ ಗೃಹ ಸಚಿವರು ಮತ್ತು ಮಾಜಿ ಸಚಿವರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಮನೆಗೆ ಭೇಟಿ ನೀಡಿ, ಈ ಭಾಗದಲ್ಲಿ ನಡೆದಿರುವ ಅತ್ಯಂತ ಆತಂಕದ ಘಟನೆಯಾಗಿದೆ. ದರೋಡೆಕೋರರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ ಮನೆಯವರು ದರೋಡೆಕೋರರನ್ನು ಧೈರ್ಯದಿಂದ ಎದುರಿಸಿದ ಪರಿಣಾಮ ಹಾನಿಗೆ ಅವಕಾಶವಾಗಿಲ್ಲ ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕೂಡ ಮನೆಗೆ ಭೇಟಿ ನೀಡಿ ಧೈರ್ಯ ಹೇಳಿದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200