ಪ್ರೊಫೆಸರ್‌ ಮನೆಯ ಬಾಗಿಲಿನ ಬೀಗ ಒಡೆದ ಕಳ್ಳರು, ಏನೆಲ್ಲ ಕಳ್ಳತನವಾಗಿದೆ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ನಿರ್ಮಾಣ ಹಂತದಲ್ಲಿದ್ದ ಮನೆಯ ಬೀಗ ಒಡೆದ ಕಳ್ಳರು ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ದೋಚಿದ್ದಾರೆ. ನಗರದ ಬೈ ಪಾಸ್‌ ರಸ್ತೆಯ ಟೊಯೋಟಾ ಶೋ ರೂಂ ಹಿಂಭಾಗದ ಗರುಡ ಗಾರ್ಡನ್ ಲೇಔಟ್‌ನಲ್ಲಿ ಘಟನೆ ನಡೆದಿದೆ.

070426-Tunga-Nagara-Police-Station-General-Image.avif

ಪ್ರೊಫೆಸರ್‌ ದೇವಿದಾಸ್ ಎಂಬುವವರ ನಿರ್ಮಾಣ ಹಂತದ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದ ಕಳ್ಳರು ಒಳಗೆ ನುಗ್ಗಿದ್ದಾರೆ. ಅಲ್ಲಿದ್ದ ನೀರಿನ ಮೋಟಾರ್, ಡ್ರಿಲ್ಲಿಂಗ್ ಮಷಿನ್ ಮತ್ತು ವಿವಿಧ ಎಲೆಕ್ಟ್ರಿಕಲ್ ಉಪಕರಣಗಳನ್ನು ಕಳ್ಳತನ ಮಾಡಿದ್ದಾರೆ. ಇವುಗಳ ಅಂದಾಜು ಮೌಲ್ಯ ₹22,000 ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆ ಸಂಬಂಧ ದೇವಿದಾಸ್ ಅವರು ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.