ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 20 ಡಿಸೆಂಬರ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಟ್ರ್ಯಾಕ್ಟರ್ಗಳಿಗೆ ನೋಂದಣಿ ಮಾಡಿಸುವ ನಂಬರ್ ಹಾಕಿಕೊಂಡಿದ್ದ ಕಾರನ್ನು ಆರ್ಟಿಒ ಅಧಿಕಾರಿಗಳು ತಮ್ಮ ಕಚೇರಿ ಎದುರೇ ವಶಕ್ಕೆ ಪಡೆದಿದ್ದು, ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
2017ರಲ್ಲಿ ಕಾರು ಖರೀದಿಸಿದ್ದು, ಕಾರಿನ ಮಾಲೀಕ ಎರಡು ವರ್ಷದಿಂದ ನೋಂದಣಿ ಮಾಡಿಸದೇ ರಾಜಾರೋಷವಾಗಿ ಓಡಾಡಿಕೊಂಡಿದ್ದ. ಬುಧವಾರ ಆರ್ಟಿಒ ಕಚೇರಿ ಎದುರೇ ನಿಲ್ಲಿಸಿ ಹೋಗಿದ್ದ ವೇಳೆ ಅನುಮಾನಗೊಂಡು ತಪಾಸಣೆ ನಡೆಸಿದ ಆರ್.ಟಿ.ಓ ಅಧಿಕಾರಿಗಳು, ಕಾರು ಮತ್ತು ಚಾಲಕ ಹೊಸನಗರ ತಾಲೂಕಿನ ಸೊಪ್ಪಿನಮಲ್ಲೆ ಸಮೀಪದ ನಿವಾಸಿ ಉಮೇಶ್ ಎಂಬಾತನನ್ನು ವಶಕ್ಕೆ ಪಡೆದು ಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅನುಮಾನ ಬಂದದ್ದು ಹೇಗೆ?
ಸಾಮಾನ್ಯವಾಗಿ ‘ಟಿ’ ಸಿರೀಸ್ ನಂಬರ್’ಗಳನ್ನು ಟ್ರ್ಯಾಕ್ಟರ್ಗಳಿಗೆ ನೀಡಲಾಗುತ್ತದೆ. ಅದರೆ ಕಾರಿನ ನಂಬರ್ ಪ್ಲೇಟ್ನ ಮಧ್ಯದಲ್ಲಿ ‘ಟಿ’ ಕಂಡುಬಂದಿದ್ದರಿಂದ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ಆತ ಎರಡು ವರ್ಷದಿಂದ ನೋಂದಣಿ ಮಾಡಿಸದೇ ನಕಲಿ ನಂಬರ್ಪ್ಲೇಟ್ ಅಳವಡಿಸಿಕೊಂಡು ಓಡಾಡುತ್ತಿರುವುದು ದೃಢಪಟ್ಟಿದೆ. ಒಂದು ವೇಳೆ ಪೊಲೀಸರು ನಾನ್ ಅಕ್ಷನಲ್ ಸರ್ಟಿಫಿಕೇಟ್ ನೀಡಿದ್ದೆ ಆದಲ್ಲಿ ಪರವಾನಗಿ ಲೈಸೆನ್ಸ್ ಇತ್ಯಾದಿ ಸೇರಿ 1.50 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Car Seized by Jayanagara Police station for not registering the car from 2017. RTO Officials handed over the car to the Police in Shimoga