ಶಿವಮೊಗ್ಗ: ಯುವತಿಯೊಬ್ಬಳ (ಹೆಸರು ಗೌಪ್ಯ) ಭಾವಚಿತ್ರವನ್ನು ಅಶ್ಲೀಲ ಚಿತ್ರದೊಂದಿಗೆ ಎಡಿಟ್ (edited) ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗ ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಯುವತಿಯೊಬ್ಬಳಿಗೆ ಇನ್‌ಸ್ಟಾಗ್ರಾಂನಲ್ಲಿ ಅಪರಿಚಿತ ಖಾತೆಯಿಂದ ಮೆಸೇಜ್ ಬಂದಿತ್ತು. ತೆರೆದು ನೋಡಿದಾಗ ತನ್ನನ್ನು ಪ್ರೀತಿಸುವಂತೆ ಸಂದೇಶವಿತ್ತು. ಗಂಭೀರವಾಗಿ ಪರಿಗಣಿಸದ ಯುವತಿ ಆ ಮೆಸೇಜ್ ಬ್ಲಾಕ್ ಮಾಡಿದ್ದರು. ಮತ್ತೆರಡು ಖಾತೆಗಳಿಂದ ಇದೇ ರೀತಿಯ ಮೆಸೇಜುಗಳು ಬಂದಿದ್ದವು. ಯುವತಿಯು ತನ್ನ ಸ್ನೇಹಿತರ ಮೂಲಕ ಆ ಖಾತೆಗಳ ವಿರುದ್ಧ ರಿಪೋರ್ಟ್ ಮಾಡಿ, ಮೆಸೇಜುಗಳನ್ನು ಡಿಲೀಟ್ ಮಾಡಿದ್ದರು.
ಅಶ್ಲೀಲ ಫೋಟೊದೊಂದಿಗೆ ಎಡಿಟ್
ತನ್ನನ್ನು ಪ್ರೀತಿಸದೆ ಇದ್ದರೆ ಆಶ್ಲೀಲವಾಗಿ ಫೋಟೊಗಳನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡುವುದಾಗಿ ಒಮ್ಮೆ ಸಂದೇಶದಲ್ಲಿ ಬೆದರಿಸಲಾಗಿತ್ತು. ಕೊನೆಗೆ ಯುವತಿಯ ಖಾತೆಗೆ ಇನ್‌ಸ್ಟಾಗ್ರಾಂನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಯುವತಿ ಪರಿಶೀಲಿಸಿದಾಗ ಆಕೆಯ ಫೋಟೊವನ್ನು ಅಶ್ಲೀಲವಾಗಿ ಎಡಿಟ್ ಮಾಡಲಾಗಿತ್ತು. ಈ ಹಿನ್ನೆಲೆ ಯುವತಿ ದೂರು ನೀಡಿದ್ದಾರೆ.
ವರ್ಷಗಟ್ಟಲೆ ಜೈಲು ಖಾಯಂ
ಮಾಹಿತಿ ತಂತ್ರಜ್ಞಾನ ಖಾತೆ ಸೆಕ್ಷನ್ 66(C),67,67(A) ಅಡಿ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ ಕೃತ್ಯ ಎಸಗಿದವರಿಗೆ ವರ್ಷಗಟ್ಟೆಲೆ ಜೈಲು ಶಿಕ್ಷೆಯಾಗಲಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ವ್ಯಕ್ತಿಯ ಹತ್ಯೆ, ಕೆರೆ ಏರಿ ಬಳಿ ಮೃತದೇಹ ಪತ್ತೆ
ಸೆಕ್ಷನ್ 66(C) – ಗುರುತಿನ ಕಳ್ಳತನಕ್ಕೆ ಶಿಕ್ಷೆ: ವಂಚನೆಯಿಂದ ಅಥವಾ ಅಸಹಜವಾಗಿ ಬೇರೊಬ್ಬರ ಎಲೆಕ್ಟ್ರಾನಿಕ್ ಸಹಿ, ಪಾಸ್‌ವರ್ಡ್, ಫೋಟೊ ಅಥವಾ ಯಾವುದೇ ವಿಶಿಷ್ಟ ಗುರುತಿನ ವೈಶಿಷ್ಟ್ಯವನ್ನು ಬಳಸಿದರೆ ಶಿಕ್ಷೆಯಾಗಲಿದೆ. ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ.
ಸೆಕ್ಷನ್ 67 – ಅಶ್ಲೀಲ ವಿಷಯವನ್ನು ಪ್ರಕಟಿಸುವುದು ಅಥವಾ ರವಾನಿಸುವುದು: ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಅಥವಾ ಕಾಮಪ್ರಚೋದಕ ವಸ್ತುಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು. ಮೊದಲ ಅಪರಾಧಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹5 ಲಕ್ಷದವರೆಗೆ ದಂಡ. ಎರಡನೇ ಅಥವಾ ನಂತರದ ಅಪರಾಧಗಳಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ.
ಸೆಕ್ಷನ್ 67(A) – ಲೈಂಗಿಕ ಸ್ಪಷ್ಟ ವಿಷಯವನ್ನು ಪ್ರಕಟಿಸುವುದು ಅಥವಾ ರವಾನಿಸುವುದು: ಎಲೆಕ್ಟ್ರಾನಿಕ್ ರೂಪದಲ್ಲಿ ಲೈಂಗಿಕ ಸ್ಪಷ್ಟ ಕೃತಿ ಅಥವಾ ನಡವಳಿಕೆಯನ್ನು ಹೊಂದಿರುವ ಯಾವುದೇ ವಿಷಯವನ್ನು ಪ್ರಕಟಿಸುವುದು ಅಥವಾ ರವಾನಿಸುವುದು. ಮೊದಲ ಅಪರಾಧಕ್ಕೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ. ಎರಡನೇ ಅಥವಾ ನಂತರದ ಅಪರಾಧಗಳಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200