ಇನ್‌ಸ್ಟಾಗ್ರಾಂನಲ್ಲಿ ಸಹೋದರಿಯ ಫೋಟೊ ಕಂಡು ಯುವಕನಿಗೆ ಶಾಕ್‌, ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಶಿವಮೊಗ್ಗ: ಮಹಿಳೆಯೊಬ್ಬರ ಫೋಟೊ ಮೇಲೆ ಅಶ್ಲೀಲವಾಗಿ ಬರೆದು ಇನ್‌ಸ್ಟಾಗ್ರಾಂ (Instagram) ಖಾತೆಯೊಂದರಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಶಿವಮೊಗ್ಗದ ಗೃಹಿಣಿಯ (ಹೆಸರು ಗೌಪ್ಯ) ಸಹೋದರ ಇನ್‌ಸ್ಟಾಗ್ರಂ ನೋಡುತ್ತಿದ್ದಾಗ ಅವರ ಸಹೋದರಿಯ ಫೋಟೊ ಕಾಣಿಸಿದೆ. ಅದರ ಮೇಲೆ ಆಶ್ಲೀಲ ಬರೆವಣಿಗೆ ಇತ್ತು. ಇದನ್ನು ಸಹೋದರಿಗೆ ತೋರಿಸಿದ್ದ. ಹಾಗಾಗಿ, ತನ್ನ ಫೋಟೊವನ್ನು ಕದ್ದು ಅನುಮತಿ ಇಲ್ಲದೆ ಅಪ್ಲೋಡ್‌ ಮಾಡಿದ್ದಲ್ಲದೆ ಅದರ ಮೇಲೆ ಆಶ್ಲೀಲವಾಗಿ ಬರೆಯಲಾಗಿದೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ.

ಫೋಟೊ ಅಪ್ಲೋಡ್‌ ಮಾಡಿದವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 67 ಮತ್ತು 66 (ಸಿ) ಅಡಿಯಲ್ಲಿ ಶಿವಮೊಗ್ಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

instagram.webp

ಇದನ್ನೂ ಓದಿ » ಸ್ವ ಉದ್ಯೋಗ ತರಬೇತಿ, ಊಟ, ವಸತಿ ಉಚಿತ, ಯಾರೆಲ್ಲ ಅರ್ಹರು? ಏನೆಲ್ಲ ತರಬೇತಿ ನೀಡಲಾಗುತ್ತದೆ?

Case Filed against a Instagram Post

Instagram-Cyber-Crime-Shimoga-Station.

Leave a Comment