ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 MAY 2024
SHIMOGA : ವಿದ್ಯಾನಗರ ಮುಖ್ಯರಸ್ತೆಯಲ್ಲಿರುವ ಶಿವಶಂಕರ ವೈನ್ ಶಾಪ್‌ನ ಬಾಗಿಲುನ್ನು ಆಯುಧದಿಂದ ಮೀಟಿ ಕಳ್ಳತನ ಮಾಡಲಾಗಿದೆ. ನಗದು ಮತ್ತು ಸಿಸಿಟಿವಿಯ DVR ಕಳುವಾಗಿದೆ ಎಂದು ಆರೋಪಿಸಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಇದನ್ನೂ ಓದಿ – ಕೃಷಿ ಹೊಂಡದಲ್ಲಿ ಬಿದ್ದ ಬಾಲಕನ ರಕ್ಷಣೆಗೆ ಧಾವಿಸಿದ ಯುವಕ, ಇಬ್ಬರು ಸಾವು, ಹೇಗಾಯ್ತು ಘಟನೆ?
ಎಂದಿನಂತೆ ಬೆಳಗ್ಗೆ ವೈನ್ ಶಾಪ್ ಬಾಗಿಲು ತೆಗೆಯಲು ಸಿಬ್ಬಂದಿ ಬಂದಾಗ ಷಟರ್ ಬಾಗಿಲು ಮೀಟಿದಂತೆ ಕಾಣಿಸಿತ್ತು. ಪಕ್ಕದ ಮತ್ತೊಂದು ಷಟರ್ ತೆಗೆದು ಒಳ ಹೋಗಿ ಪರಿಶೀಲಿಸಿದಾಗ 20 ಸಾವಿರ ರೂ. ನಗದು ಕಳ್ಳತನವಾಗಿತ್ತು. ಸಿಸಿಟಿವಿಯ ಡಿವಿಆರ್ ಕೂಡ ನಾಪತ್ತೆಯಾಗಿತ್ತು. ಒಟ್ಟು 38 ಸಾವಿರ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422