ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 1 JANUARY 2025
ಶಿವಮೊಗ್ಗ : ಕಳೆದ ರಾತ್ರಿ ನಗರದ ಸಿದ್ದಯ್ಯ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಯುವಕನ ಗುರುತು ಪತ್ತೆಯಾಗಿದೆ. ಇನ್ನೊಂದೆಡೆ ಘಟನೆಯ CCTV ದೃಶ್ಯ ಲಭ್ಯವಾಗಿದೆ. ಘಟನೆಯಾದ ತಕ್ಷಣ ಸ್ಥಳೀಯರು ಗಾಯಾಳುಗಳಿಗೆ ನೆರವಾಗಿದ್ದಾರೆ. ಇತ್ತ ಕೆಲವೇ ಸೆಕೆಂಡ್‌ನಲ್ಲಿ ಪೊಲೀಸ್ ಕೂಡ ಸ್ಥಳಕ್ಕೆ ಆಗಮಿಸಿರುವುದು ಕೂಡ ದೃಶ್ಯದಲ್ಲಿದೆ.
ಹೊಸ ವರ್ಷಾಚರಣೆ ಸಂಭ್ರಮದ ನಡುವೆ ಶಿವಮೊಗ್ಗದ ಸಿದ್ದಯ್ಯ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ಯುವಕ ಮೃತಪಟ್ಟಿದ್ದ. ಇನ್ನು, ಘಟನೆಯ ಸ್ಥಳದಲ್ಲಿ ಕಾರು ಪಲ್ಟಿಯಾಗಿತ್ತು.
ಒಂದು ನಿಮಿಷದ ಸಿಸಿಟಿವಿ ವಿಡಿಯೋ
ಕಳೆದ ರಾತ್ರಿ ಸಂಭವಿಸಿದ ಭೀಕರ ಅಪಘಾತದ ಸಿಸಿಟಿವಿಯ ಒಂದು ನಿಮಿಷದ ದೃಶ್ಯ ಹೊರಬಿದ್ದಿದೆ. ಇಡೀ ಘಟನೆಯ ಭೀಕರತೆಯನ್ನು ತೋರಿಸಿದೆ.
ಸಮಯ : ರಾತ್ರಿ 12 ಗಂಟೆ 22 ನಿಮಿಷ 39 ಸೆಕೆಂಡ್ ಸಿದ್ದಯ್ಯ ರಸ್ತೆಯಲ್ಲಿ ಪಲ್ಟಿಯಾದ ಸ್ಥಿತಿಯಲ್ಲಿ ಬೈಕ್ ಉಜ್ಜಿಕೊಂಡು ಹೋಗುತ್ತದೆ. ಅದರ ಪಕ್ಕದಲ್ಲೇ ಸವಾರ ಕೂಡ ಕೆಳಗೆ ಬಿದ್ದು ರಸ್ತೆಯಲ್ಲಿ ಉಜ್ಜಿಕೊಂಡು ಹೋಗಿದ್ದಾರೆ. ಮತ್ತೊಂದು ಬದಿಯಲ್ಲಿ ವೇಗವಾಗಿ ಬಂದ ಕಾರು ಕಟ್ಟಡಕ್ಕೆ ಡಿಕ್ಕಿ ಹೊಡೆಯುವಂತೆ ನುಗ್ಗುತ್ತದೆ.ದಿನಾಂಕ : 1 ಜನವರಿ 2025
ಸಮಯ : ರಾತ್ರಿ 12 ಗಂಟೆ 22 ನಿಮಿಷ 41 ಸೆಕೆಂಡ್ ಕಾರು ಪಲ್ಟಿಯಾಗುತ್ತದೆ. ಜೋರು ಶಬ್ದ ಮತ್ತು ಸ್ಥಳದಲ್ಲಿ ಧೂಳೇಳುತ್ತದೆ. ಒಂದೆರಡು ಸೆಕೆಂಡ್‌ನ ಬಳಿಕ ಕಾರಿನ ಹಿಂಬದಿ ಲೈಟುಗಳು ಜೋರಾಗಿ ಬೆಳಗುತ್ತವೆ. ಇಂಡಿಕೇಟರ್ ಆನ್ ಆಗುತ್ತದೆ.
ಸಮಯ : ರಾತ್ರಿ 12 ಗಂಟೆ 23 ನಿಮಿಷ ಅಪಘಾತದ ಶಬ್ದಕ್ಕೆ ಅಕ್ಕಪಕ್ಕದ ನಿವಾಸಿಗಳು ಕೂಡಲೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪಲ್ಟಿಯಾಗಿದ್ದ ಕಾರಿನ ಒಳಗಿದ್ದವರನ್ನು ಹೊರಗೆಳೆಯುತ್ತಾರೆ.
ಸಮಯ : ರಾತ್ರಿ 12 ಗಂಟೆ 23 ನಿಮಿಷ 23 ಸೆಕೆಂಡ್ ಸಿದ್ದಯ್ಯ ಸರ್ಕಲ್ ಬಳಿ ಪಾಯಿಂಟ್ ಡ್ಯೂಟಿಗೆ ನಿಯೋಜನೆಗೊಂಡಿದ್ದ ದೊಡ್ಡಪೇಟೆ ಠಾಣೆಯ ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ದೌಡಾಯಿಸಿದರು.
ಮೃತ ಯುವಕನ ಗುರುತು ಪತ್ತೆ
ಘಟನೆಯಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ. ಆತನನ್ನು ಧನುಷ್ (20) ಎಂದು ಗುರುತಿಸಲಾಗಿದೆ. ಇನ್ನು, ಪ್ರಜ್ವಲ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ » ಹೊಸ ವರ್ಷಾಚರಣೆ ಮಧ್ಯೆ ಶಿವಮೊಗ್ಗದಲ್ಲಿ ಭೀಕರ ಅಪಘಾತ, ಓರ್ವ ಬಲಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422